ETV Bharat / state

ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿ ರೈತರಿಗಾಗಿ ವಿಶೇಷ ಕೋರ್ಸ್​ ಲೋರ್ಕಾಪಣೆ - Course for Farmers from Indian Money.com

ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿ “ಸಮಗ್ರ ಕೃಷಿಯಲ್ಲಿ 365 ದಿನಗಳೂ ಆದಾಯ ಗಳಿಸುವುದು ಹೇಗೆ” ಎಂಬ ವಿಶೇಷ ಕೋರ್ಸ್​ ಲೋಕಾರ್ಪಣೆ ಮಾಡಲಾಯಿತು.

Course for Farmers from Indian Money.com
ರೈತರಿಗಾಗಿ ವಿಶೇಷ ಕೋರ್ಸ್​ ಲೋರ್ಕಾಪಣೆ
author img

By

Published : Dec 18, 2020, 5:29 PM IST

ಬೆಂಗಳೂರು: ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗಿ ವಿನ್ಯಾಸಗೊಳಿಸಿರುವ ವಿಶೇಷ ಕೋರ್ಸ್ಅ​ನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಲೋಕಾರ್ಪಣೆ ಮಾಡಿದರು.

ಶಾಂತಿನಗರದಲ್ಲಿರುವ ಇಂಡಿಯನ್ ಮನಿ ಡಾಟ್ ಕಾಂನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋರ್ಸ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರೈತರ ಆದಾಯ ಹೆಚ್ಚಳದ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿರುವ “ಸಮಗ್ರ ಕೃಷಿಯಲ್ಲಿ 365 ದಿನಗಳೂ ಆದಾಯ ಗಳಿಸುವುದು ಹೇಗೆ” ಎನ್ನುವ ಕೋರ್ಸ್ ಅರ್ಥಪೂರ್ಣವಾಗಿದೆ. ರೈತರ ಉನ್ನತಿಯಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ರೈತರಿಗೆ ಬಲ ತುಂಬಲು ಮುಂದಾಗಿರುವ ಇಂಡಿಯನ್ ಮನಿ ಡಾಟ್ ಕಾಂನ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಇದನ್ನೂ ಓದಿ : "ನೆರವು" ಸಂಚಾರಿ ಪೊಲೀಸ್ ಕ್ಯಾಬಿನ್‍ ಉದ್ಘಾಟಿಸಿದ ಪಂತ್​, ಭಾಸ್ಕರ್ ರಾವ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯನ್ ಮನಿ ಡಾಟ್ ಕಾಂನ ಸಂಸ್ಥಾಪಕ- ಸಿಇಒ ಸಿ.ಎಸ್.ಸುಧೀರ್, ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕಾದರೆ ಕಲಿಕೆ ಬಹಳ ಮುಖ್ಯ. ಈ ಮಾತು ಕೃಷಿ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ರೈತರಿಗೆ ಪ್ರಗತಿಪರ ರೈತರಿಂದಲೇ ಹೊಸ ವಿಚಾರಗಳನ್ನು ಕಲಿಸಲು ಮತ್ತು ತಿಳಿಸಲು ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿ ಹೊಸ ಕೋರ್ಸ್​ಗಳನ್ನು ವಿನ್ಯಾಸಗೊಳಿಸಲಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.