ಬೆಂಗಳೂರು: ರಾಜೀನಾಮೆ ನೀಡಿದ ಮೈತ್ರಿ ಕೂಟದ 14 ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಸ್ಪೀಕರ್ ವಿರುದ್ದ ಕೆಂಡಾಮಂಡಲರಾಗಿದ್ದಾರೆ.
ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದಂತೆ ಶಾಸಕರು ಮತ್ತೆ ಎರಡನೇ ಬಾರಿ ಕ್ರಮಬದ್ಧ ರಾಜೀನಾಮೆ ಕೊಟ್ಟಿದ್ರು. ಆದರೆ ಸ್ಪೀಕರ್ ರಾಜಕೀಯ ದುರುದ್ದೇಶದಿಂದ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಈ ಕ್ರಮ ದೋಷಪೂರಿತವಾಗಿದ್ದು,ಇದನ್ನು ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರ್ತಾರೆ ಎಂದರು. ಶಾಸಕರೇ ಸ್ವಇಚ್ಛೆಯಿಂದ ರಾಜಿನಾಮೆ ನೀಡಿದ್ದು, ಸುಪ್ರೀಂನಲ್ಲಿ ಎಲ್ಲಾ ಶಾಸಕರಿಗೆ ನ್ಯಾಯ ಸಿಗುತ್ತೆ. ರಮೇಶ್ ಕುಮಾರ್ ನಾನು ಸಂವಿಧಾನದ ರಕ್ಷಕ ಅಂತಾರೆ. ಇತಿಹಾಸದಲ್ಲಿ ಉಳಿಯುವ ತೀರ್ಪು ನೀಡ್ತೀನಿ ಎಂದಿದ್ದರು. ಆದರೀಗ 14 ಜನ ಶಾಸಕರನ್ನ ಅನರ್ಹಗೊಳಿಸಿದ್ದು ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದು ಕಾರಜೋಳ ಕಿಡಿ ಕಾರಿದ್ದಾರೆ.
ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಮಾತನಾಡಿ, ಯಾರೂ ಒಪ್ಪುವ ರೀತಿಯ ತೀರ್ಪು ಇದಲ್ಲ. ವೈಯಕ್ತಿಕವಾಗಿ ಸ್ವತಂತ್ರವಾಗಿ ರಾಜೀನಾಮೆ ನೀಡಬಹುದು ಎಂದು ನಿಯಮವಿದ್ದು, ಸ್ಪೀಕರ್ ಶನಿವಾರ, ಭಾನುವಾರ ರಜೆ ದಿನ ಕೆಲಸ ಮಾಡೊಲ್ಲ ಎನ್ನುತ್ತಿದ್ದರು. ಆದರೆ ಇಂದು ಭಾನುವಾರ ಸ್ಪೀಕರ್ ಹೇಗೆ ರಾಜೀನಾಮೆ ವಿಚಾರದ ಬಗ್ಗೆ ಕ್ರಮಕೈಗೊಂಡರು ಎಂದು ಅವರೇ ಹೇಳಬೇಕು. ನಾಳೆ ವಿಧಾನಸಭೆ ಅಧಿವೇಶನವಿದ್ದು, ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಎಲ್ಲ ಶಾಸಕರ ರಾಜೀನಾಮೆ ಅಂಗೀಕರಿಸದೇ ಅನರ್ಹ ಮಾಡಿರೋದು ಪಕ್ಷಪಾತದ ತೀರ್ಮಾನವಾಗಿದ್ದು, ರಾಜಕೀಯ ಪಕ್ಷಗಳ ಒತ್ತಡಕ್ಕೆ ಸ್ಪೀಕರ್ ಮಣಿದಿದ್ದಾರೆ. ಶಾಸಕರು ಯಾರೂ ಈ ಕ್ರಮಕ್ಕೆ ಹೆದರುವ ಅಗತ್ಯವಿಲ್ಲ. ಅನರ್ಹಗೊಂಡವರು ಕಾನೂನು ಹೋರಾಟ ನಡೆಸ್ತಾರೆ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ.
Intro:Body:
[7/28, 12:12 PM] SOMASHEKAR BNG: ಸ್ಪೀಕರ್ ಸುದ್ದಿಗೋಷ್ಟಿ ಬೆನ್ನಲ್ಲೇ ಬಿಜೆಪಿ ಶಾಸಕರಿಂದ ಸುದ್ದಿಗೋಷ್ಟಿ
[7/28, 12:12 PM] SOMASHEKAR BNG: ಗೋವಿಂದ ಕಾರಜೋಳ, ಎಸ್ ಆರ್ ವಿಶ್ವನಾಥ್, ನಡಹಳ್ಳಿ ಸೇರಿ ಹಲವರಿಂದ ಸುದ್ದಿಗೋಷ್ಟಿ
[7/28, 12:12 PM] SOMASHEKAR BNG: ಗೋವಿಂದ ಕಾರಜೋಳ ಹೇಳಿಕೆ
ಶಾಸಕರ ಅನರ್ಹತೆ ತೀರ್ಪು ನ್ಯಾಯ ಸಮ್ಮತ ಅಲ್ಲ
ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ಸ್ಪೀಕರ್ ಈ ತೀರ್ಪು ಕೊಟ್ಟಿದ್ದಾರೆ
[7/28, 12:12 PM] SOMASHEKAR BNG: ಕಾರಜೋಳ...
ಸುಪ್ರೀಂಕೋರ್ಟ್ ಆದೇಶದಂತೆ ಶಾಸಕರು ಮತ್ತೆ ಬಂದು ಕ್ರಮಬದ್ಧ ರಾಜೀನಾಮೆ ಕೊಟ್ಟಿದ್ರು
ಸ್ಪೀಕರ್ ತೀರ್ಪನ್ನು ನಾವು ಖಂಡಿಸ್ತೇವೆ
ಸ್ಪೀಕರ್ ದೋಷ ಪೂರಿತ ತೀರ್ಪು ಕೊಟ್ಟಿದ್ದಾರೆ
ಸ್ಪೀಕರ್ ತೀರ್ಪು ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರ್ತಾರೆ
[7/28, 12:13 PM] bhavya banglore: ಅತೃಪ್ತ ಶಾಸಕರು ಅನರ್ಹ ಹಿನ್ನೆಲೆ
ಗೊವಿಂದ ಕಾರಜೋಳ ಪ್ರತಿಕ್ರಿಯೆ
ರಮೇಶ್ ಕುಮಾರ್ ರವರು ಸುದ್ದಿ ಗೋಷ್ಠಿ ಕರೆದು ಅನರ್ಹ ಮಾಡಿದ್ದಾರೆ
ಅನರ್ಹ ಮಾಡಿರೋದು ಸರಿಯಲ್ಲ
ಅವ್ರೇ ರಾಜಿನಾಮೆ ನೀಡಿದ್ದಾರೆ ಒತ್ತಾಯದಿಂದ ಅಲ್ಲ
ರಮೇಶ್ ಕುಮಾರ್ ರವರು ತಪ್ಪು ಮಾಡಿದ್ದಾರೆ
ಸುಪ್ರೀಂ ನಲ್ಲಿ ಎಲ್ಲಾ ಶಾಸಕರಿಗೆ ನ್ಯಾಯ ಸಿಗುತ್ತೆ
ರಾಜೀನಾಮೆ ಫಾರ್ಮಾಟ್ ಸರಿಯಲ್ಲ ಮತ್ತೆ ಹಾಜರಿ ಆಗೋಕೆ ಹೇಳಿದ್ರು
ಅತೃಪ್ತರೇ ಸ್ವತಃ ಸ್ಪೀಕರ್ ಮುಂದೆ ಹಾಜರು ಆಗಿ ರಾಜಿನಾಮೆ ನೀಡಿದ್ರು
ಹೀಗಿದ್ದರೂ ಕೂಡಾ ಅವ್ರನ್ನು ಅನರ್ಹ ಮಾಡಿದ್ದಾರೆ
ಇದು ಒಂದು ದೋಷಪೂರಿತವಾಗಿದೆ
[7/28, 12:13 PM] bhavya banglore: ಸ್ಪೀಕರ್ 14 ಜನ ಶಾಸಕರನ್ನ ಅನರ್ಹಗೊಳಿಸಿದ್ದು ಇತಿಹಾಸದಲ್ಲಿ ಕಪ್ಪು ಚುಕ್ಕೆ.
ರಮೇಶ್ ಕುಮಾರ್ ನಾನು ಸಂವಿಧಾನದ ರಕ್ಷಕ ಅಂತಾರೆ.
ಇತಿಹಾಸದಲ್ಲಿ ಉಳಿಯುವ ತೀರ್ಪು ನೀಡ್ತೀನಿ ಎಂದಿದ್ದರು.
ಈಗ ಕಪ್ಪು ಚುಕ್ಕಿಯಾಗಿ ಉಳಿಯುವ ರೀತಿ ತೀರ್ಪು ನೀಡಿದ್ರು.
ಇದನ್ನ ಯಾರೂ ಒಪ್ಪುವ ರೀತಿ ತೀರ್ಪು ಅಲ್ಲ.
ವೈಯುಕ್ತಿಕವಾಗಿ ಸ್ವತಂತ್ರವಾಗಿ ರಾಜೀನಾಮೆ ನೀಡಬೇಕು ಎಂದು ನಿಯಮದಲ್ಲಿಇದೆ.
ಇಂದಿನ ತೀರ್ಪು ಸಂವಿಧಾನ ಬಾಹಿರ.
ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ನ್ಯಾಯ ಸಿಗುತ್ತೆ.
ಸ್ಪೀಕರ್ ಶನಿವಾರ, ಭಾನುವಾರ ರಜೆ ದಿನ ಕೆಲಸ ಮಾಡೊಲ್ಲ ಎನ್ನುತ್ತಿದ್ದರು.
ಇವತ್ತು ಭಾನುವಾರ ಸ್ಪೀಕರ್ ಹೇಗೆ ರಾಜೀನಾಮೆ ವಿಚಾರದ ತೀರ್ಪುನೀಡಿದ್ರು ಹೇಳಬೇಕು.
ನಾಳೆ ವಿಧಾನ ಸಭೆ ಅಧಿವೇಶನ ಇದೆ. ಹೀಗಾಗಿ ಈರೀತಿ ನಡೆದುಕೊಂಡಿದ್ದು ಸರಿಯಲ್ಲ.
ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಹೇಳಿಕೆ
[7/28, 12:13 PM] bhavya banglore: ಎಸ್ ಆರ್ ವಿಶ್ವನಾಥ್...
ಎಲ್ಲ ಶಾಸಕರ ರಾಜೀನಾಮೆ ಅಂಗೀಕರಿಸದೇ ಅನರ್ಹ ಮಾಡಿರೋದು ಪಕ್ಷಪಾತದ ತೀರ್ಮಾನ
ರಾಜಕೀಯ ಪಕ್ಷಗಳ ಒತ್ತಡಕ್ಕೆ ಸ್ಪಿಕರ್ ಮಣಿದಿದ್ದಾರೆ
ಸುಪ್ರೀಂಕೋರ್ಟ್ ಆದೇಶದ ವಿರುದ್ದ ಸ್ಪೀಕರ್ ತೀರ್ಪು ಕೊಟ್ಟಿದ್ದಾರೆ
ಇದು ರಾಜ್ಯ ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆ ಆಗಿ ಉಳಿಯುತ್ತೆ
ಇದು ರಾಜಕೀಯ ಪ್ರೇರಿತ ತೀರ್ಪು
ಶಾಸಕರು ಯಾರೂ ಸ್ಪೀಕರ್ ತೀರ್ಪಿಗೆ ಹೆದರುವ ಅಗತ್ಯ ಇಲ್ಲ
ಅನರ್ಹಗೊಂಡವರು ಕಾನೂನು ಹೋರಾಟ ನಡೆಸ್ತಾರೆ
ಸುಪ್ರೀಂಕೋರ್ಟ್ ನಲ್ಲಿ ಹೋರಾಟ ಮಾಡ್ತಾರೆ
ಸ್ಪೀಕರ್ ತೀರ್ಪನ್ನು ಜನ ಒಪ್ಪಲ್ಲ
Conclusion: