ETV Bharat / state

ಜಯನಗರ ಹೈಡ್ರಾಮಾಗೆ ತೆರೆ: ಸೌಮ್ಯರೆಡ್ಡಿಗೆ ಸೋಲು, ರಾಮಮೂರ್ತಿಗೆ 16 ಮತಗಳಿಂದ ಜಯ

ಹಲವು ಸುತ್ತಿನ ಮರು ಮತ ಎಣಿಕೆಯ ಬಳಿಕ ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ ಶಾಸಕಿ ಸೌಮ್ಯ ರೆಡ್ಡಿ 16 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.

sowmy-reddy-lost-by-16-votes-in-jayanagara-after-recounting
ಜಯನಗರ ಹೈಡ್ರಾಮಾಗೆ ತೆರೆ: ಗೆದ್ದು ಸೋತ ಸೌಮ್ಯರೆಡ್ಡಿ, ರಾಮಮೂರ್ತಿಗೆ 16 ಮತಗಳ ಅಂತರದ ಜಯ
author img

By

Published : May 14, 2023, 6:22 AM IST

Updated : May 14, 2023, 9:54 AM IST

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟದ ಹೈಡ್ರಾಮಾಗೆ ಕಡೆಗೂ ತೆರೆ ಬಿದ್ದಿದೆ. ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ 16 ಮತಗಳ ಅತ್ಯಲ್ಪ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಮೊದಲು ಹಾಲಿ ಶಾಸಕಿ ಸೌಮ್ಯ ರೆಡ್ಡಿಗೆ ಗೆಲುವು ಒಲಿದಿತ್ತು. ಆದರೆ ಅಂಚೆ ಮತಗಳ ಪುನರ್ ಪರಿಶೀಲನೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತ ಪಡೆದು ವಿಜಯಿಯಾದರು.

ಕ್ಷೇತ್ರದ ಫಲಿತಾಂಶ ತಡರಾತ್ರಿ 12 ಗಂಟೆಗೆ ಪ್ರಕಟವಾಯಿತು. ಮಧ್ಯಾಹ್ನವೇ ಮತ ಎಣಿಕೆ ಮುಗಿದು 160 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಗೆಲುವು ಖಚಿತಪಡಿಸಲಾಗಿತ್ತು. ಅಧಿಕೃತ ಪ್ರಕಟಣೆ ಬಾಕಿ ಇತ್ತು. ಆದರೆ ಬಿಜೆಪಿ ಅಭ್ಯರ್ಥಿ ಅಂಚೆ ಮತಗಳ ಪುನರ್ ಪರಿಶೀಲನೆ ನಡೆಸಲು ಪಟ್ಟು ಹಿಡಿದರು. ಬಿಜೆಪಿ ಮನವಿ ಪುರಸ್ಕರಿಸಿದ ಅಧಿಕಾರಿಗಳು ಮತಗಳ ಪುನರ್ ಪರಿಶೀಲನೆ ನಡೆಸಿದರು.

ಈ ವೇಳೆ ಹಿರಿಯ ನಾಗರಿಕರ ಮತಗಳ ವಿಚಾರದಲ್ಲಿ ಸಾಕಷ್ಟು ಗೊಂದಲವಾಯಿತು. ಹಿರಿಯ ನಾಗರಿಕರ ಮತಪತ್ರದಲ್ಲಿ ಸೀಲ್ ಇಲ್ಲ ಎಂದು 160 ಅಂಚೆ ಮತಗಳನ್ನು ಅಸಿಂಧುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಬಿಜೆಪಿ ಅಭ್ಯರ್ಥಿ ಸೀಲ್ ಇಲ್ಲದ್ದ ಅಧಿಕಾರಿಗಳ ತಪ್ಪೇ ಹೊರತು ಮತದಾರರದ್ದಲ್ಲ. ಹಾಗಾಗಿ ಈ ಮತಗಳ ಪರಿಗಣಿಸಬೇಕು ಎಂದು ಪಟ್ಟು ಹಿಡಿದರು.

sowmy-reddy-lost-by-16-votes-in-jayanagara-after-recounting
ಸೋಲು-ಗೆಲುವಿನ ಲೆಕ್ಕಾಚಾರ

ಇದು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು. ಬಿಜೆಪಿ ಬೇಡಿಕೆಗೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ಮರು ಮತ ಎಣಿಕೆ ಬೇಡ ಎಂದು ಪಟ್ಟು ಹಿಡಿದರು. ಆದರೂ ಮತಗಳ ಮರು ಎಣಿಕೆ ಬದಲು ಪುನರ್ ಪರಿಶೀಲನೆ ನಡೆಸಿತು. ಇದರಲ್ಲಿ ಸೌಮ್ಯರೆಡ್ಡಿ ಹಿನ್ನಡೆ ಎನ್ನುವ ಮಾಹಿತಿ ಬಂತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸೌಮ್ಯರೆಡ್ಡಿ ಮರು ಮತ ಎಣಿಕೆ ಬೇಡಿಕೆ ಇಟ್ಟರು. ಒಟ್ಟು 5 ಬಾರಿ ಅಂಚೆ ಮತಗಳ ಮರು ಪರಿಶೀಲನೆ ನಡೆಸಿದರೂ ಗೊಂದಲ ಪರಿಹಾರವಾಗಲಿಲ್ಲ.

ಬಿಜೆಪಿಯಿಂದ ಅಶೋಕ್, ರವಿ ಸುಬ್ರಮಣ್ಯ, ಸಂಸದ ತೇಜಸ್ವಿ ಸೂರ್ಯ, ಅಭ್ಯರ್ಥಿ ರಾಮಮೂರ್ತಿ ಮತ ಎಣಿಕೆ ಕೇಂದ್ರದಲ್ಲಿ ಸಭೆ ನಡೆಸಿದರೆ, ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಸೌಮ್ಯರೆಡ್ಡಿ ಹಾಗು ಇತರ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಮತ್ತೊಮ್ಮೆ ಮತ ಎಣಿಕೆ ಬೇಡಿಕೆ ಇಟ್ಟರು. ಅಂತಿಮವಾಗಿ ಆರನೇ ಬಾರಿ ಅಂಚೆ ಮತಗಳ ಪುನರ್ ಪರಿಶೀಲನೆ ನಡೆಸಿ ಬಿಜೆಪಿಯ ಸಿ.ಕೆ ರಾಮಮೂರ್ತಿ 16 ಮತಗಳ ಅಂತರದಲ್ಲಿ ಗೆದ್ದಿರುವುದಾಗಿ ಚುನಾವಣಾ ಆಯೋಗದ ಅಧಿಕಾರಿಗಳು ಪ್ರಕಟಿಸಿದರು.

ಬಿಜೆಪಿ ಅಭ್ಯರ್ಥಿ ರಾಮಮೂರ್ತಿ 57,797 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ 57,781 ಮತ ಪಡೆದರು. 16 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಕೊರಳಿಗೆ ವಿಜಯದ ಮಾಲೆ ಸಿಕ್ಕಿತು. ಮೊದಲ ಮತ ಎಣಿಕೆಯಲ್ಲಿ ಗೆದ್ದು ಬೀಗಿದ್ದ ಸೌಮ್ಯರೆಡ್ಡಿ ಅಂತಿಮವಾಗಿ ಗೆದ್ದು ಸೋಲಬೇಕಾಯಿತು. ಸೋತಿದ್ದ ರಾಮಮೂರ್ತಿ ಕಡೆಗೆ ಗೆಲುವಿನ ನಗೆ ಬೀರಿದರು. ಆ ಮೂಲಕ ಬಿಜೆಪಿಗೆ ಒಂದು ಹೆಚ್ಚುವರಿ ಸ್ಥಾನ ಸಿಕ್ಕಂತಾಗಿದೆ.

ಮತಗಳ ವಿವರ

ಕಾನೂನು ಹೋರಾಟ ಎಂದ ಕಾಂಗ್ರೆಸ್​: ಚುನಾವಣಾ ಆಯೋಗದ ಈ ನಿರ್ಧಾರದ ವಿರುದ್ಧ ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದೆ. ಬಿಜೆಪಿ ನಾಯಕರು ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹೇರಿ ಮರು ಎಣಿಕೆ ಮಾಡಿಸಿದ್ದಾರೆ. ಹಾಗಾಗಿ ಕಾನೂನು ಹೋರಾಟ ನಡೆಸುವುದಾಗಿ ರಾಮಲಿಂಗಾರೆಡ್ಡಿ, ಡಿಕೆ ಸುರೇಶ್ ಪ್ರಕಟಿಸಿದ್ದಾರೆ.

ಭಾರಿ ಭದ್ರತೆ: ಮತ ಎಣಿಕೆ ಗೊಂದಲ ಸೃಷ್ಟಿಯಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಎದುರು ಜಮಾವಣೆಗೊಂಡರು. ಪರಸ್ಪರ ಘೋಷಣೆ ಕೂಗಿದರು, ಕಾಂಗ್ರೆಸ್ ಕಾರ್ಯಕರ್ತರು ಗೇಟ್ ನಿಂದ ಒಳಪ್ರವೇಶಕ್ಕೆ ಯತ್ನಿಸಿದರು. ಭಾರಿ ಗದ್ದಲ ವಾತಾವರಣ ನಿರ್ಮಾಣವಾದ ಹಿನ್ನಲೆಯಲ್ಲಿ ಮತ ಎಣಿಕೆ ಕೇಂದ್ರಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಬಿಗಿ ಭದ್ರತೆಯಲ್ಲಿ ಫಲಿತಾಂಶ ಪ್ರಕಟಿಸಲಾಯಿತು.

Last Updated : May 14, 2023, 9:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.