ETV Bharat / state

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ: ಪ್ರತಿಷ್ಠೆಯ ಕಣದಲ್ಲೂ ಅಸಮಾಧಾನದ ಹೊಗೆ - Southeast Graduate Constituency election

ಒಕ್ಕಲಿಗ ಸಮುದಾಯದ ಎಂ.ಚಿದಾನಂದ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಇನ್ನು ಜೆಡಿಎಸ್ ಪಕ್ಷ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಬಲಿಜ ಸಮುದಾಯದ ರಮೇಶ್ ಬಾಬು ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದೆ. ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ಕೊಡಬೇಕಿತ್ತು ಎಂಬ ಅಸಮಾಧಾನ ಮಾತುಗಳು ಹಲವರಲ್ಲಿ ಕೇಳಿ ಬರುತ್ತಿದೆ.

southeast-graduate-constituency-election
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ: ಪ್ರತಿಷ್ಠೆಯ ಕಣದಕಲ್ಲೂ ಅಸಮಾಧಾನದ ಹೊಗೆ..
author img

By

Published : Oct 22, 2020, 2:03 PM IST

ಬೆಂಗಳೂರು: ಉಪ ಚುನಾವಣೆಯಷ್ಟೇ ಕಾವು ವಿಧಾನ ಪರಿಷತ್​​​​ನ ಎರಡು ಶಿಕ್ಷಕ ಹಾಗೂ ಎರಡು ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲೂ ಇದೆ. ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ಚುನಾವಣಾ ಪ್ರಚಾರ ಮತ್ತಷ್ಟು ಬಿರುಸುಗೊಂಡಿದೆ.

ಆಗ್ನೇಯ ಪದವೀಧರರ ಕ್ಷೇತ್ರ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳಿಗೆ ಅಗ್ನಿ ಪರೀಕ್ಷೆಯಾಗಿದ್ದು, ಈ ಕ್ಷೇತ್ರದಲ್ಲಿ ಹೆಚ್ಚು ಬಿಜೆಪಿ ಅಭ್ಯರ್ಥಿಗಳೇ ಗೆಲುವು ಕಂಡಿದ್ದಾರೆ. ಕೆಲವೊಮ್ಮೆ ಮಾತ್ರ ಇತರ ಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಈ ಬಾರಿ ಬಿಜೆಪಿಗೆ ಬಂಡಾಯದ ಬಿಸಿ

ಮೊದಲಿನಿಂದಲೂ ಬಿಜೆಪಿಯಲ್ಲಿ ಈ ಕ್ಷೇತ್ರದ ಟಿಕೆಟ್​​ಗೆ ಭಾರೀ ಪೈಪೋಟಿ ನಡೆದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವ ಭರವಸೆಯಲ್ಲಿದ್ದ ಹೆಚ್.ಎಸ್.ಲೇಪಾಕ್ಷ ಪಕ್ಷೇತರರಾಗಿ ಕಣದಲ್ಲಿ ಉಳಿಯುವ ಮೂಲಕ ಬಿಜೆಪಿ ಅಭ್ಯರ್ಥಿಗೆ ತಲೆನೋವಾಗಿದ್ದಾರೆ. ಇನ್ನು ಹಿರಿಯೂರು ಶಾಸಕಿ ಪೂರ್ಣಿಮಾ ಅವರ ಪತಿ ಡಿ.ಟಿ.ಶ್ರೀನಿವಾಸ್ ಕೂಡ ಬಿಜೆಪಿ ಟಿಕೆಟ್ ಪಡೆಯಲು ಪ್ರಬಲ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪಿದ್ದರಿಂದ ಅವರೂ ಸಹ ಪಕ್ಷೇತರರಾಗಿ ಕಣದಲ್ಲಿದ್ದಾರೆ.

ಈ ನಾಯಕರು ಕಣದಿಂದ ಹಿಂದೆ ಸರಿಯುತ್ತಾರೆ ಎಂಬ ಲೆಕ್ಕಾಚಾರ ಇತ್ತು. ಆದರೆ ಅದು ಆಗಲಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ. ಗೌಡ ಅವರಿಗೆ ಬಂಡಾಯದ ಬಿಸಿ ತಾಗುತ್ತಿದೆ.

ಬಿರುಸುಗೊಂಡ ಪ್ರಚಾರ

ಜೆಡಿಎಸ್ ತೊರೆದು ಕೈ ಹಿಡಿದ ರಮೇಶ್ ಬಾಬು ಅವರಿಗೆ ಒಮ್ಮತದ ಅಭ್ಯರ್ಥಿ ಎಂಬ ಕಾರಣಕ್ಕೆ ಕಾಂಗ್ರೆಸ್‌ನ ಎಲ್ಲಾ ನಾಯಕರು ಅವರ ಗೆಲುವಿಗೆ ಕೈ ಜೋಡಿಸಿದ್ದಾರೆ. ಇನ್ನು ಕಳೆದ ಬಾರಿ ಗೆಲುವು ಕಂಡಿದ್ದ ಜೆಡಿಎಸ್‌ನ ಆರ್.ಚೌಡರೆಡ್ಡಿ ತೂಪಲ್ಲಿ ಪರವಾಗಿ ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಮತ್ತಿತರ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ. ಗೌಡ ಕೂಡ ಸ್ಥಳೀಯ ನಾಯಕರ ಜತೆ ಸೇರಿ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯಮಟ್ಟದ ನಾಯಕರು ವಿಧಾನಸಭೆ ಉಪ ಚುನಾವಣೆಯಲ್ಲಿ ನಿರತರಾಗಿರುವುದರಿಂದ ಯಾರೂ ಭಾಗವಹಿಸಿಲ್ಲ.

ಕ್ಷೇತ್ರದ ವ್ಯಾಪ್ತಿ

ಆಗ್ನೇಯ ಪದವೀಧರ ಕ್ಷೇತ್ರಕ್ಕೆ 5 ಲೋಕಸಭಾ ಕ್ಷೇತ್ರಗಳು, 33 ವಿಧಾನಸಭಾ ಕ್ಷೇತ್ರಗಳು ಸೇರಿವೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಮುಕ್ಕಾಲು ಭಾಗ ಈ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ.

ಮತದಾರರೆಷ್ಟು?

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 4 ಇತರ ಮತದಾರರು ಸೇರಿ ಒಟ್ಟು 1,09,129 ಮತದಾರರಿದ್ದು, 68,414 ಪುರುಷರು, 40,711 ಮಹಿಳಾ ಮತದಾರರಿದ್ದಾರೆ.

ಎಲ್ಲೆಲ್ಲಿ ಜಾತಿ ಪ್ರಾಬಲ್ಯ?

ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಜಾತಿ ಮತದಾರರ ಪ್ರಾಬಲ್ಯವಿದೆ. ಚಿಕ್ಕಬಳ್ಳಾಪುರದಲ್ಲಿ ಬಲಿಜ, ಕೋಲಾರದಲ್ಲಿ ಒಕ್ಕಲಿಗ, ಪರಿಶಿಷ್ಟ ಜಾತಿ ಮತ್ತು ಪಂಗಡ, ಚಿತ್ರದುರ್ಗ ಜಿಲ್ಲೆಯಲ್ಲಿ ಯಾದವ, ಪರಿಶಿಷ್ಟ ಜಾತಿ ಮತ್ತು ಪಂಗಡ, ತುಮಕೂರು ಜಿಲ್ಲೆಯಲ್ಲಿ ಒಕ್ಕಲಿಗ, ಲಿಂಗಾಯತ, ಒಬಿಸಿ, ದಾವಣಗೆರೆಯಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಯಾವ ಜಿಲ್ಲೆಯಲ್ಲೂ ಯಾವುದೇ ಸಮುದಾಯದ ಹಿಡಿತವಿಲ್ಲ.

ವೀರಶೈವ-ಲಿಂಗಾಯತ ಮತದಾರರು ಹೆಚ್ಚಿರುವಂತೆ ಕಂಡರೂ ವಾಸ್ತವದಲ್ಲಿ ಕುರುಬ, ಯಾದವ, ತಿಗಳ, ಬಲಿಜ ಸೇರಿದಂತೆ ಒಬಿಸಿ ಮತದಾರರ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿದೆ.

ಈ ಕ್ಷೇತ್ರದಲ್ಲಿ ಗೊಲ್ಲ ಮತ್ತು ಲಿಂಗಾಯತ ಮತಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ. ಹಾಗಾಗಿ ಗೊಲ್ಲ ಸಮುದಾಯಕ್ಕೆ ಸೇರಿದ ಡಿ.ಟಿ.ಶ್ರೀನಿವಾಸ್, ಲಿಂಗಾಯತ ಸಮುದಾಯಕ್ಕೆ ಸೇರಿದ ಎಸ್.ಲೇಪಾಕ್ಷಿ ಕಣದಲ್ಲಿರುವುದರಿಂದ ಬಿಜೆಪಿ ನಾಯಕರಿಗೆ ತಲೆ ಬಿಸಿಯಾಗಿದೆ.

ಮೂರು ಪಕ್ಷಗಳಿಗೂ ಪ್ರತಿಷ್ಠೆ

ಒಕ್ಕಲಿಗ ಸಮುದಾಯದ ಎಂ.ಚಿದಾನಂದ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಇನ್ನು ಜೆಡಿಎಸ್ ಪಕ್ಷ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಬಲಿಜ ಸಮುದಾಯದ ರಮೇಶ್ ಬಾಬು ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದೆ. ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ಕೊಡಬೇಕಿತ್ತು ಎಂಬ ಅಸಮಾಧಾನ ಮಾತುಗಳು ಹಲವರಿಂದ ಕೇಳಿ ಬರುತ್ತಿದೆ.

ಇನ್ನು ಈ ಕ್ಷೇತ್ರ ಪ್ರತಿನಿಧಿಸಿದ್ದ ಒಕ್ಕಲಿಗ ಸಮುದಾಯದ ಆರ್.ಚೌಡರೆಡ್ಡಿ ತೂಪಲ್ಲಿ ಅವರನ್ನು ಮತ್ತೆ ಕಷಕ್ಕಿಳಿಸಿರುವ ಜೆಡಿಎಸ್ ಪುನರಾಯ್ಕೆ ಬಯಸಿದೆ. ಜೆಡಿಎಸ್‌ಗೆ ಕ್ಷೇತ್ರ ಉಳಿಸಿಕೊಳ್ಳಬೇಕೆಂಬ ತವಕದಲ್ಲಿದೆ. ಅಧಿಕಾರದಲ್ಲಿರುವ ಬಿಜೆಪಿ ಈ ಚುನಾವಣೆ ಗೆಲ್ಲುವ ಪಣ ತೊಟ್ಟಿದೆ.

ಇನ್ನು ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಎದುರಾಗಿರುವ ಮೊದಲ ಚುನಾವಣೆಯಾಗಿರುವುದರಿಂದ ಗೆದ್ದು ಸಾಮರ್ಥ್ಯ ಸಾಬೀತುಪಡಿಸಬೇಕೆಂಬ ಉತ್ಸಾಹ ಇದೆ. ಹೀಗಾಗಿ ಈ ಕ್ಷೇತ್ರ ಮೂರೂ ಪಕ್ಷಗಳಿಗೆ ದೊಡ್ಡ ಸವಾಲೇ ಆಗಿದೆ.

ಕಣದಲ್ಲಿರುವವರು ಎಷ್ಟು ಮಂದಿ?

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಕಣದಲ್ಲಿ 15 ಮಂದಿ ಇದ್ದಾರೆ.
ಒಟ್ಟು 18 ಮಂದಿ ನಾಮಪತ್ರ ಸಲ್ಲಿಸಿದ್ದು, ಮೂವರು ನಾಮಪತ್ರ ಹಿಂಪಡೆದಿದ್ದಾರೆ.

ಬಿಜೆಪಿ: ಚಿದಾನಂದ ಎಂ. ಗೌಡ

ಕಾಂಗ್ರೆಸ್: ರಮೇಶ್‌ಬಾಬು

ಜೆಡಿಎಸ್: ಆರ್.ಚೌಡರೆಡ್ಡಿ ತೂಪಲ್ಲಿ

ಶ್ರೀನಿವಾಸ ಟಿ. (ಕರ್ನಾಟಕ ರಾಷ್ಟ್ರ ಸಮಿತಿ),

ಜಿ.ಸಿ.ಪಾಟೀಲ (ಸರ್ವ ಜನತಾ ಪಾರ್ಟಿ)

ಡಿ.ಟಿ.ಶ್ರೀನಿವಾಸ್, ಲೇಪಾಕ್ಷ ಹೆಚ್.ಎಸ್., ಡಾ. ಕೆ.ಎಂ.ಸುರೇಶ್, ಕರಬಸಪ್ಪ ಪಿ. ಮದ್ಯಾನ್ನದ, ಹೆಚ್.ಹಾಲೇಶಪ್ಪ, ಎಸ್.ಸತೀಶ್, ದಾಸ್ ಪಿ.ಆರ್., ಶಿವರಾಮಯ್ಯ, ಜಿ.ವೆಂಕಟಾಚಲಪತಿ ಹಾಗೂ ಬಿ.ಕುಮಾರಸ್ವಾಮಿ ಪಕ್ಷೇತರರಾಗಿ ಕಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.