ETV Bharat / state

ಬೆಂಗಳೂರು: ಕುಡಿಯಲು ಹಣ ನೀಡದ ತಂದೆಯನ್ನೇ ಹತ್ಯೆ ಮಾಡಿದ್ದ ಮಗ ಅರೆಸ್ಟ್​ - ಕುಡಿದು ಬಂದು ಕಿರಿಕಿರಿ

ಕುಡಿಯಲು ಹಣ ನೀಡದ ತಂದೆಯನ್ನು ಕೊಂದು ಪರಾರಿಯಾಗಿದ್ದ ಮಗನನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು​ ಬಂಧಿಸಿದ್ದಾರೆ.

arrest
ಅರೆಸ್ಟ್​
author img

By

Published : Apr 27, 2023, 11:58 AM IST

ಬೆಂಗಳೂರು: ಮದ್ಯ ಸೇವಿಸಲು ಹಣ ಕೊಡದಿದ್ದಕ್ಕೆ ತಂದೆಯನ್ನೇ ಪುತ್ರನೋರ್ವ ಹತ್ಯೆಗೈದ ಘಟನೆ ಗೋವಿಂದರಾಜ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಕೃತ್ಯ ನಡೆದ 15 ದಿನಗಳ ಬಳಿಕ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದೀಗ ಕೇಸ್​ಗೆ ಸಂಬಂಧಿಸಿದಂತೆ​ ಪೊಲೀಸರು ಮಗನನ್ನ ಬಂಧಿಸಿದ್ದಾರೆ.

ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರೇನಹಳ್ಳಿಯ ಶೆಡ್​ವೊಂದರಲ್ಲಿ ವಾಸವಾಗಿದ್ದ ಬಸವರಾಜ (60) ಕೊಲೆಯಾದ ವ್ಯಕ್ತಿ. ಕೊಲೆ ಆರೋಪದಡಿ ಮಗ ನೀಲಾಧರನನ್ನ ಬಂಧಿಸಲಾಗಿದೆ. ಸೆಕ್ಯೂರಿಟಿ ಗಾರ್ಡ್ ಆಗಿ ಬಸವರಾಜ ಕೆಲಸ ಮಾಡುತ್ತಿದ್ದರು. ಮಗ ಆಟೋ ಚಾಲಕನಾಗಿದ್ದ. ತಂದೆ-ಮಗ ಶೆಡ್​ವೊಂದರಲ್ಲಿ ಒಟ್ಟಿಗೆ ವಾಸವಾಗಿದ್ದರು‌.‌ ಕುಡಿತದ ಚಟ ಅಂಟಿಸಿಕೊಂಡಿದ್ದ ನೀಲಾಧರ್, ಸಂಪಾದನೆ ಮಾಡುತ್ತಿದ್ದ ಹಣವನ್ನೆಲ್ಲಾ ಮದ್ಯ ಕುಡಿಯಲು ಖರ್ಚು ಮಾಡುತ್ತಿದ್ದ.

ಕಳೆದ 15 ದಿನಗಳ ಹಿಂದೆ ತಂದೆ ಬಳಿ ಬಂದು ಕುಡಿಯಲು ಹಣ ಕೇಳಿದ್ದಾನೆ.‌ ಬಳಿಕ ಹಣ ಕೊಡಲು ನಿರಾಕರಿಸಿದ ತಂದೆ ಮೇಲೆ ಅಕ್ರೋಶಗೊಂಡಿದ್ದಾನೆ. ಈ ವೇಳೆ ಗಲಾಟೆ ಅತಿರೇಕಕ್ಕೆ ತಲುಪಿದ್ದು, ಬಳಿಕ ಇಟ್ಟಿಗೆಯಿಂದ ಬಸವರಾಜ ತಲೆಗೆ ಹೊಡೆದು ಸಾಯಿಸಿದ್ದಾನೆ. ನಂತರ ಶವವನ್ನು ಮನೆ ಒಳಗೆ ಇಟ್ಟು ಬೀಗ ಹಾಕಿಕೊಂಡು ಪರಾರಿಯಾಗಿದ್ದ. 15 ದಿನದ ಬಳಿಕ ಶೇಡ್​ನಲ್ಲಿ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ನೆರಹೊರೆಯವರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು‌ ಪರಿಶೀಲಿಸಿದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಶವ ಕಳುಹಿಸಿದ್ದರು.‌‌ ಶವದ ಮೇಲೆ ಗಾಯದ ಗುರುತು ಕಂಡುಬಂದಿತ್ತು.‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ : ದಾವಣಗೆರೆ: ಚಾಕುವಿನಿಂದ ಇರಿದು ಗೃಹಿಣಿಯ ಹತ್ಯೆಗೈದ ಪಾಗಲ್​ ಪ್ರೇಮಿ

ಇನ್ನು ಕಳೆದ ತಿಂಗಳ ಮಾರ್ಚ್​ 8 ರಂದು ಹುಚ್ಚು ಪ್ರೇಮಿಯೋರ್ವ ನಡುರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಗೃಹಿಣಿಯನ್ನು ಕೊಲೆಗೈದಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ನಡೆದಿತ್ತು. ಪ್ರತಿಭಾ ನಾಗರಾಜ್ (25) ಕೊಲೆಯಾದವರು. ಮೂಕಪ್ಪನವರ ಹನುಮಂತ ಕೊಲೆ ಮಾಡಿದ ಆರೋಪಿ. ಈ ಕುರಿತು ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ : ಸಿಂಗಾಪುರದಲ್ಲಿ ಸಹೋದ್ಯೋಗಿ ಜೊತೆ ಸ್ವಂತ ಸೊಸೆ ಮದುವೆ ಮಾಡಿದ್ದ ಭಾರತೀಯ ವ್ಯಕ್ತಿಗೆ ಜೈಲು ಶಿಕ್ಷೆ

ನಿತ್ಯ ಕುಡಿದು ಬಂದು ಕಿರಿಕಿರಿ ಮಾಡುತ್ತಿದ್ದ ಅಣ್ಣನನ್ನು ಒಡಹುಟ್ಟಿದ ತಮ್ಮನೇ ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದಲ್ಲಿ ಕಳೆದ ಜನವರಿಯಲ್ಲಿ ನಡೆದಿತ್ತು. ಮಾನವಿ ಪಟ್ಟಣದ ಸೋನಿಯಾಗಾಂಧಿನಗರ ವಾರ್ಡ್ 9 ರ ಮನೆಯಲ್ಲಿ ಈ ಘಟನೆ ಜರುಗಿತ್ತು. ಪರಿಷತ್ ರಾಜ್ (28) ಹತ್ಯೆಯಾದವರು. ಆರೋಪಿ ಭೀಮಶಂಕರ್ ಕೊಲೆ ಮಾಡಿರುವ ತಮ್ಮ. ಈ ಕುರಿತು ಮೃತನ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಇದನ್ನೂ ಓದಿ : ಕುಡಿದು ಕಿರಿಕಿರಿ ಮಾಡುತ್ತಿದ್ದ ಅಣ್ಣನನ್ನೇ ಹತ್ಯೆ ಮಾಡಿದ ತಮ್ಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.