ಬೆಂಗಳೂರು: ನಗರದಲ್ಲಿ ಏಕಕಾಲದಲ್ಲಿ ಹೈಪರ್ ಟೆನ್ಷನ್ ವಿದ್ಯುತ್ ಸಂಪರ್ಕಗಳನ್ನು ಭೂಗತವಾಗಿ ಅಳವಡಿಕೆ , ದೈನಂದಿನ ನಿರ್ವಹಣೆ ಕಾಮಗಾರಿ ಚಾಲ್ತಿಯಲ್ಲಿದ್ದು, ಎರಡು ದಿನ ಹಬ್ಬಕ್ಕೆ ಬ್ರೇಕ್ ಇರಲಿದೆ. ಶನಿವಾರದಿಂದ ಮತ್ತೆ ಕೆಲ ಪ್ರದೇಶಗಳಲ್ಲಿ ಇಡೀ ದಿನ ಪವರ್ ಕಟ್ ಸಮಸ್ಯೆ ಎದುರಾಗಲಿದೆ.
ಮುಂದಿನ ವಾರ ಬಿಟಿಎಮ್ ಲೇಔಟ್, ಬೊಮ್ಮನಹಳ್ಳಿ, ಹೆಚ್ಎಸ್ಆರ್ ಲೇಔಟ್, ಜಂಬೂಸವಾರಿ ದಿಣ್ಣೆಗಳಲ್ಲಿ ಪೂರ್ವನಿಯೋಜಿತ ಕಾಮಗಾರಿಗಳಿಗಾಗಿ ಪವರ್ ಕಟ್ ಮಾಡಲಾಗುವುದು. ಅಲ್ಲದೇ ಆ ದಿನ ಕಾಮಗಾರಿ ನಡೆದರೆ ಮಾತ್ರ ಪವರ್ ಕಟ್ ಇರಲಿದೆ. ಕಾರ್ಮಿಕರ ಸಮಸ್ಯೆ ಎದುರಾದರೆ ಆ ದಿನ ವಿದ್ಯುತ್ನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಪವರ್ ಕಟ್ ಆಗಲಿರುವ ಪ್ರದೇಶಗಳ ಮಾಹಿತಿ :
- ಅ.16 ರಂದು ಹೊಂಗಸಂದ್ರ 10 ರಿಂದ 16 ನೇ ಮುಖ್ಯ ರಸ್ತೆ, ಮೈಕೋಲೇಔಟ್,ಹೊಸ ರೋಡ್, ಹೆಚ್ಎಸ್ಆರ್ ಲೇಔಟ್, ನಾಯಕ್ ಲೇಔಟ್, ಸುರಭಿ ನಗರ, ಮೀನಾಕ್ಷಿ ಲೇಔಟ್ ಸೇರಿದಂತೆ ಹಲವೆಡೆ ಪವರ್ ಕಟ್ ಇರಲಿದೆ.
- ಅ.18 ರಂದು ಎಲೆಕ್ಟ್ರಾನಿಕ್ ಸಿಟಿ, ಸಿಬಿ ಗೇಟ್, ನಾಗನಾಥಪುರ, ಕೋನಪ್ಪನ ಅಗ್ರಹಾರ, ಎಚ್ಎಸ್ಆರ್ ಲೇಔಟ್
- ಅ. 19 ರಂದು ಅಗರ ಕೆರೆ, ಜಕ್ಕಸಂದ್ರ
- ಅ.21 ರಂದು ನಾಯಕ್ ಲೇಔಟ್, ಸುರಭೀನಗರ, ಜಂಬೂಸವಾರಿ ದಿಣ್ಣೆ, ಐಡಿಬಿಐ ಲೇಔಟ್, ಸೌತ್ ಅವೆನ್ಯೂ, ಗೊಟ್ಟಿಗೆರೆ ಮುಖ್ಯರಸ್ತೆ, ಮೀನಾಕ್ಷಿಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಹೆಚ್ಎಸ್ಆರ್ ಲೇಔಟ್ ಮುಂತಾದೆಡೆ ವಿದ್ಯುತ್ ಪೂರೈಕೆ ಇರುವುದಿಲ್ಲ.
- ಅ. 22 ರಂದು, ನಾಗನಾಥಪುರ, ಬೊಮ್ಮನಹಳ್ಳಿ, ಹೆಚ್ಎಸ್ಆರ್ ಲೇಔಟ್, ಕೂಡ್ಲು, ಜಕ್ಕಸಂದ್ರ, ಕೋರಮಂಗಲ, ಹೊಸಪಾಳ್ಯ, ಕೈಗೊಂಡನಹಳ್ಳಿ ಮುಂತಾದೆಡೆ ಪವರ್ ಕಟ್ ಇರಲಿದೆ.