ಬೆಂಗಳೂರು: ಕಾರ್ಖಾನೆಯ ಸಂಪ್ ನಿರ್ಮಾಣದ ವೇಳೆ ಮಣ್ಣು ಕುಸಿದು ಕಟ್ಟಡ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಹೊಸನಿಜಗಲ್ ಗ್ರಾಮದ ಕಟ್ಟಡ ಕೂಲಿ ಕಾರ್ಮಿಕ ಮಂಜುನಾಥ್ (33) ಮೃತಪಟ್ಟಿದ್ದಾರೆ. ಗಾರೆ ಮೇಸ್ತ್ರಿ ಸೇರಿದಂತೆ ಮತ್ತಿಬ್ಬರಿಗೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಾಲ್ಕನೆ ಹಂತದ ಅವ್ವೇರಹಳ್ಳಿ ಪ್ರದೇಶದಲ್ಲಿನ ಶಿಲ್ಪಾ ಮೆಡಿಕೇರ್ ಕಾರ್ಖಾನೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸಂಪ್ ನಿರ್ಮಾಣಕ್ಕಾಗಿ ಕೆಲಸ ಮಾಡುವ ಸಮಯದಲ್ಲಿ ಮಣ್ಣು ಕುಸಿದಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿದ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.