ETV Bharat / state

ಬೆಂಗಳೂರಿನಲ್ಲಿ ಹಾವುಗಳ ಕಾಟ: ಸಾರ್ವಜನಿಕರು ಎಚ್ಚರದಿಂದಿರಲು ಪಾಲಿಕೆ ಸೂಚನೆ

author img

By

Published : Jul 10, 2022, 1:16 PM IST

ಸಿಲಿಕಾನ್ ಸಿಟಿಯಲ್ಲಿ ಹಾವುಗಳು ಹೆಚ್ಚಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜನರು ಎಚ್ಚರಿಕೆಯಿಂದಿರಿ ಎಂದು ಪಾಲಿಕೆ ಸೂಚಿಸಿದೆ.

snakes in houses at Bangalore
ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ಹಾವುಗಳು

ಬೆಂಗಳೂರು: ನಿರಂತರ ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮನೆಗಳಲ್ಲಿ ಹಾವುಗಳು ಬಂದು ಸೇರಿಕೊಳ್ಳುತ್ತಿವೆ. ಜೂನ್ ಹಾಗೂ ಜುಲೈ ತಿಂಗಳು ಹಾವುಗಳ ಸಂತಾನೋತ್ಪತ್ತಿ ಸಮಯ ಆಗಿರುವುದರಿಂದ ಮೊಟ್ಟೆಯೊಡೆದು ಮರಿಗಳು ಹೊರಬರುತ್ತಿವೆ. ಈ ಸಮಯದಲ್ಲಿ ಮಳೆ, ಚಳಿ ಇದ್ದು ಬೆಚ್ಚಗಿನ ಜಾಗ ಹುಡುಕಿಕೊಂಡು ಅವುಗಳು ಸಂಚಾರ ನಡೆಸುತ್ತವೆ. ಹಾಗಾಗಿ, ಮನೆಯಲ್ಲಿರುವ ಎಲ್ಲ ಜಾಗಗಳನ್ನೂ ಪ್ರತಿದಿನ ಶುಚಿಯಾಗಿಡುವಂತೆ ಪಾಲಿಕೆ ಮನವಿ ಮಾಡಿದೆ.

ಕಬ್ಬನ್ ಪಾರ್ಕ್‌ನಲ್ಲಿ ವಿಷಕಾರಿ ಹಾವು ಸೆರೆ: ಕಬ್ಬನ್ ಪಾರ್ಕ್​ನಲ್ಲಿ ಕೆಲಸ ಮಾಡುವ ಕಾರ್ಮಿಕರ ಕಣ್ಣಿಗೆ ನಿತ್ಯವೂ ವಿಷಕಾರಿ ಹಾವಿನ ದರ್ಶನ ಆಗುತ್ತಿತ್ತು. ಆರಡಿಗೂ ಅಧಿಕ ಉದ್ದ ಇದ್ದ ಉರಗ ಕಂಡು ಇಲ್ಲಿನ ಕೂಲಿ ಕಾರ್ಮಿಕರು ಭೀತಿಗೊಳಗಾಗಿದ್ದರು. ಪಾಲಿಕೆಯ ಅನಿಮಲ್ ರೆಸ್ಕ್ಯೂ ಟೀಂ ಹಾವನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದೆ. ಪಾರ್ಕ್​​ನಲ್ಲಿ ಇನ್ನಷ್ಟು ಹಾವುಗಳ ಓಡಾಟವಿದ್ದು ವಾಕಿಂಗ್, ಜಾಗಿಂಗ್ ಎಂದು ಕಬ್ಬನ್ ಪಾರ್ಕ್​ಗೆ ಹೋಗುವ ಜನರು ಎಚ್ಚರದಿಂದಿರುವುದು ಸೂಕ್ತ ಎಂದು ಉರಗ ತಜ್ಞ ಮೋಹನ್ ಹೇಳಿದರು.

ಹಾವುಗಳ ರಕ್ಷಣೆ: ಪ್ರತಿದಿನ ನಗರದಲ್ಲಿ 50ಕ್ಕೂ ಹೆಚ್ಚಿನ ವಿಷಕಾರಿ ಹಾವುಗಳು ಮನೆಯ ಅಡುಗೆ ಕೋಣೆ, ಶೂ ಮುಂತಾದ ಜಾಗದಲ್ಲಿ ಪತ್ತೆಯಾಗುತ್ತಿವೆ. ಪಾಲಿಕೆಯಿಂದ ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ.

ಪಾಲಿಕೆ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿ: ಮಳೆಗಾಲದ ಆರಂಭದಲ್ಲೇ ಮೈ ಕೊರೆವ ಚಳಿ ಅನುಭವಿಸುತ್ತಿರುವ ಬೆಂಗಳೂರಿಗರು ಈಗ ವಿಷಕಾರಿ ಹಾವುಗಳಿಂದ ಆತಂಕ ಎದುರಿಸುತ್ತಿದ್ದಾರೆ. ಹಾವುಗಳನ್ನು ಕಂಡು ಆತಂಕಗೊಳ್ಳದೇ ಕೂಡಲೇ ಪಾಲಿಕೆಯ ಅನಿಮಲ್ ರೆಸ್ಕ್ಯೂ ಟೀಮ್​​ಗೆ ಮಾಹಿತಿ ನೀಡಬಹುದು ಎಂದು ಮೋಹನ್ ಹೇಳಿದರು.

ಇದನ್ನೂ ಓದಿ: ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಬಿಟ್ಟರು! ಮಳೆಗಾಗಿ ವಿಜಯಪುರದಲ್ಲಿ ವಿಚಿತ್ರ ಪದ್ಧತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.