ETV Bharat / state

ನೈಸ್ ರಸ್ತೆಯ ಬಳಿ ಬಸವ ಜಾತ್ರೆ: ಕಡಲೆಕಾಯಿ ಪರಿಷೆ ಆಚರಣೆ - ಕೆಆರ್​ಡಿಲ್​ ಅಧ್ಯಕ್ಷ ರುದ್ರೇಶ್

ನೈಸ್ ಕಚೇರಿ ರಸ್ತೆಯ ಬಸವೇಶ್ವರ ದೇವಾಲಯದ ಬಳಿ ಜ.14ರಂದು ಕಡಲೆಕಾಯಿ ಜಾತ್ರೆಯನ್ನು ಆಚರಣೆ ಮಾಡಲಾಗುತ್ತಿದೆ. ಹಳ್ಳಿಯ ಸೊಗಡನ್ನ ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಡಲೇಕಾಯಿ ಪರಿಷೆಯನ್ನು ಜೀವಂತವಾಗಿಟ್ಟುಕೊಂಡು ಆಚರಿಸಲಾಗುತ್ತಿದೆ ಎಂದು ಕೆಆರ್​ಡಿಲ್​ ಅಧ್ಯಕ್ಷ ರುದ್ರೇಶ್ ಕರೆ ನೀಡಿದ್ದಾರೆ.

Kadkr kayi parishe
ನೈಸ್ ರಸ್ತೆಯ ಬಳಿ ಬಸವೇಶ್ವರ ದೇವಾಲಯದ ಬಸವ ಜಾತ್ರೆ, ಕಡಲೆಕಾಯಿ ಪರಿಷೆ ಆಚರಣೆ
author img

By

Published : Jan 13, 2023, 10:57 PM IST

Updated : Jan 13, 2023, 11:08 PM IST

ಕಡಲೆಕಾಯಿ ಪರಿಷೆ ಬಗ್ಗೆ ಮಾಹಿತಿ ನೀಡಿದ ರುದ್ರೇಶ್

ಬೆಂಗಳೂರು(ಆನೇಕಲ್): ವೇಗವಾಗಿ ಬೆಳೆಯುತ್ತಿರುವ ನಗರೀಕರಣ, ಮೊಬೈಲ್ ಗೇಮ್, ಜಾಲತಾಣಗಳ ಅಬ್ಬರದಲ್ಲಿ ಮಾಯವಾಗುತ್ತಿರುವ ಹಳ್ಳಿಯ ಆಚರಣೆ, ಪರಿಷೆ, ಪರಂಪರೆಗಳು ವಿನಾಶದತ್ತ ಸಾಗುತ್ತಿರುವ ಹೊತ್ತಿನಲ್ಲಿ ನಗರೀಕರಣದ ವೇಗದ ಹೊಡೆತಕ್ಕೆ ಹಳ್ಳಿಯ ಸೊಗಡನ್ನ ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಡಲೇಕಾಯಿ ಪರಿಷೆಯನ್ನು ಜೀವಂತವಾಗಿಟ್ಟುಕೊಂಡು ಆಚರಿಸಲಾಗುತ್ತಿದೆ ಎಂದು ಕೆಆರ್​ಡಿಲ್​ ಅಧ್ಯಕ್ಷ ರುದ್ರೇಶ್ ಹೇಳಿದ್ದಾರೆ.

ನೈಸ್ ಕಚೇರಿ ರಸ್ತೆಯ ಬಸವೇಶ್ವರ ದೇವಾಲಯದ ಬಳಿ ಪ್ರತಿವರ್ಷದ ಪ್ರತಿ ವರ್ಷದಂತೆ ಈ ವರ್ಷದ ಜ.14ರಂದು ಕಡಲೆಕಾಯಿ ಜಾತ್ರೆಯನ್ನು ಆಚರಿಸಲಾಗುತ್ತದೆ. ನಾಳೆ ಭಕ್ತರಿಗೆ ಕಡಲೆಕಾಯಿ, ಗೆಣಸು, ಕಬ್ಬು, ಗಿಣ್ಣು ಉಚಿತವಾಗಿ ಹಂಚಿಕೆಯಾಗುತ್ತದೆ. ಬಂದ ಪರಿಷೆ ಪ್ರಿಯರಿಗೆ ಎರೆಡು ದಿನವೂ ಊಟೋಪಚಾರ ವ್ಯವಸ್ಥೆಯಿದೆ. ವಿಶೇಷವಾಗಿ ಈ ಬಾರಿ ಕುಸ್ತಿ ಸ್ಪರ್ದೆ ಏರ್ಪಡಿಸಲಾಗಿದೆ. ಅಷ್ಟಲ್ಲದೆ ಕಾಮಿಡಿ ಕಿಲಾಡಿಗಳು ತಂಡ ಆಗಮಿಸಿ‌ ಮನರಂಜಿಸಲಿದ್ದಾರೆ. ಚಿತ್ರ ನಟ ದುನಿಯಾ ವಿಜಿ, ನಟ ಪ್ರೇಮ್, ಗಾಯಕ ರಾಜೇಶ್ ಕೃಷ್ಣನ್ ಆಗಮಿಸಿ 'ಬಸವ ಉತ್ಸವ' ಮನರಂಜನೆಯ ಕಾರ್ಯಕ್ರಮ ನಡೆಸಿಕೊಳ್ಳಲಿದ್ದಾರೆ ಎಂದು ಕೆಆರ್​ಡಿಲ್​ ಅಧ್ಯಕ್ಷ ರುದ್ರೇಶ್ ತಿಳಿಸಿದರು.

ಕಳೆದ ಹದಿನಾರು ವರ್ಷಗಳ ಇತಿಹಾಸವಿರುವ ನಗರೀಕರಣದ ಮದ್ಯೆ ಉಳಿದಿರುವ ಕಡಲೆ ಕಾಯಿ ಪರಿಷೆಗೆ ಜನಸ್ತೋಮ ಸಹಕಾರ ಕೊಡುತ್ತಲೇ ಬಂದಿದೆ. ನೈಸ್ ರಸ್ತೆಯಂತಹ ಗಿಜುಗುಡುವ ಪಕ್ಕದಲ್ಲೇ ಸೋಂಪುರದ ಬಸವೇಶ್ವರ ಜಾತ್ರೆ ಬಯಲಿನಲ್ಲಿ ಸೇರುವುದರಿಂದ ಜನರಿಗೆ ನಗರದಂತಹ ಒತ್ತಡದ ವಾತಾವರಣವಿಲ್ಲದೆ ಪರಿಷೆಯ ಅನುಭವ ನೀಡುತ್ತಿದೆ. ವರ್ಷದಿಂದ ವರುಷಕ್ಕೆ ಜನರ ದಂಡು ನೆರೆದು ಜಾತ್ರೆಯ ಸೊಬಗು ಹೆಚ್ಚಿಸಿ ಮುಂದಿನ‌ ಪೀಳೆಗೆಗೂ ಪರಿಚಯಿಸುತ್ತಿದೆ.

ಈ ಬಾರಿ ತೇರು, ನಾಡ ಕುಸ್ತಿ, ಜನಪದ ಕಲಾ ಪ್ರಕಾರಗಳು, ಅಗ್ನಿಕುಂಡಗಳು ಹೊಸ ಸೇರ್ಪಡೆಯಾಗಲಿವೆ. ಕಡ್ಲೆ ಕಾಯಿ ವಿರಳವಾದ್ದರಿಂದ ಒಂದು ಚೀಲ ಹತ್ತು ಸಾವಿರಕ್ಕೆ ಕೊಂಡು ಉಚಿತವಾಗಿ ವಿತರಿಸುತ್ತಿರುವುದು ಭಕ್ತರಿಗೆ ಖುಷಿ ತಂದಿದೆ. ಸುತ್ತೂರಷ್ಟೇ ಅಲ್ಲದೇ ನಗರದಿಂದಲೂ ಪರಿಷೆಗೆ ಸಾಕಷ್ಟು ಜನ ಇತ್ತ ಮುಖ ಮಾಡುತ್ತಿದ್ದಾರೆ.

ಪ್ರತಿ ವರ್ಷ ಸಂಕ್ರಾಂತಿಯಂದೇ ಈ ಪರಿಷೆ ಸಿದ್ದಗೊಂಡು ರಾಜಿದಾನಿಯಂಗಳದ ಬಯಲೇ ವೇದಿಕೆಯಾಗಲಿದೆ. ವಿದ ವಿದವಾದ ನಂದಿ ದ್ವಜ, ವೀರಗಾಸೆ, ಪಟ್ಟದ ಕುಣಿತ, ಕೊಂಬು ಕಹಳೆ ಜಾತ್ರೆಯ ಸೊಗಡನ್ನ ಇನ್ನಷ್ಟು ಹೆಚ್ಚಿಸುತ್ತಿವೆ. ಕಳೆದು ಹೋಗುತ್ತಿರುವ ನಾಡ ಆಟಗಳು, ಸಂಸ್ಕೃತಿಯ ಪ್ರತೀಕವನ್ನು ಸಮಕಾಲೀನದಲ್ಲಿ ಕಾಣುವ ಸೌಭಾಗ್ಯ ಈ ಜಾತ್ರೆ ನೀಡುತ್ತಿದೆ ಎನ್ನಬಹುದು. ಜಾತ್ರೆಗೆ ಬರುವ ಮಕ್ಕಳು, ಯುವಕ- ಯುವತಿಯರು ಅಜ್ಜ ಅಜ್ಜಿಯರು ಬಸವೇಶ್ವರ ದೇವಾಲಯದಲ್ಲಿನ ದೇವರ ದರ್ಶನ ಪಡೆದು ಹೂ ಅಲಂಕಾರ, ಮನರಂಜನೆಗಳನ್ನು ಮನಸ್ಸಿನಲ್ಲಿ ತುಂಬಿಕೊಳ್ಳುವುದು ಸೋಜಿಗವನ್ನುಂಟುಮಾಡುತ್ತದೆ

ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ ಪರಿಷೆಯ : 1537 ರಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಬಸವನಗುಡಿ ಬೆಟ್ಟದ ಮೇಲೆ ದೊಡ್ಡ ಬಸವ ದೇವಾಲಯವನ್ನು ಸ್ಥಾಪಿಸಿದ್ದರು. ಈ ದೇವಾಲಯವನ್ನು ಸದ್ಯ ಬುಲ್ ಟೆಂಪಲ್ ಎಂದು ಕರೆಯಲಾಗುತ್ತಿದೆ. 1537ಕ್ಕೂ ಹಿಂದೆ ಸ್ವರ್ಗದಿಂದ ನಂದಿ ಬಂದು ದೇವಸ್ಥಾನದ ಸುತ್ತಮುತ್ತಲು ರೈತರು ಬೆಳೆಯುತ್ತಿದ್ದ ಬೆಳೆಯನ್ನು ತಿಂದು ಹೋಗುತ್ತಿತ್ತು. ಹೀಗಾಗಿ, ಬೆಟ್ಟದ ಮೇಲೆ ದೊಡ್ಡ ಬಸವಣ್ಣನ ದೇವಾಲಯ ಸ್ಥಾಪಿಸಿ ಪ್ರತಿವರ್ಷ ತಾವು ಬೆಳೆದ ಕಡಲೆಕಾಯಿಯನ್ನು ನಂದಿಗೆ ಅರ್ಪಿಸಲು ಶುರುಮಾಡಿದರು ಎನ್ನುವುದು ಪ್ರತೀತಿ. ಅಂದಿನಿಂದ ಸುತ್ತಲಿನ ಗ್ರಾಮಗಳ ರೈತರು ಪ್ರತಿ ವರ್ಷ ಬಂದು ತಮ್ಮ ವಾರ್ಷಿಕ ಕಡಲೆಕಾಯಿಯನ್ನು ಬಸವಣ್ಣನಿಗೆ ಅರ್ಪಿಸುತ್ತಾರೆ. ಈ ಸಂಪ್ರದಾಯ ಇಂದಿಗೂ ಮುಂದುವರೆಯುತ್ತಿದೆ.

ಇದನ್ನೂ ಓದಿ:ಪಾರಂಪರಿಕ ಕಡಲೆಕಾಯಿ ಪರಿಷೆ ಈ ಬಾರಿ ಸರಳ ಆಚರಣೆ : ಭಕ್ತರ ಸಂಖ್ಯೆಯೂ ಕಡಿಮೆ

Last Updated : Jan 13, 2023, 11:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.