ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಉಸಿರುಗಟ್ಟಿಸುವ ಟ್ರಾಫಿಕ್ ವಿರುದ್ಧ ಆರೋಪಗಳು ಕೇಳಿ ಬರುತ್ತಲೇ ಇವೆ. ಇತ್ತೀಚೆಗೆ ವಿಮಾನ ಪೈಲಟ್‌ಗಳೂ ಟ್ರಾಫಿಕ್ ಬಿಸಿ ಅನುಭವಿಸಿದ್ದು ಸುದ್ದಿಯಾಗಿತ್ತು. ಈಗ ಮಧುಮಗಳೊಬ್ಬಳು ಟ್ರಾಫಿಕ್ ಸಮಸ್ಯೆಯಲ್ಲಿ ಸಿಲುಕಿ ಬುದ್ಧಿವಂತಿಕೆಯಿಂದ ಪಾರಾದ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಆಗಿದ್ದೇನು?: ಕಾರ್‌ನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವಧು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಬೆಂಗಳೂರಿನ ನಿವಾಸಿಯಾದ ವಧು ರೇಷ್ಮೆ ಸೀರೆ, ಚಿನ್ನಾಭರಣ ತೊಟ್ಟು, ಮೇಕಪ್ ಮಾಡಿಕೊಂಡು ಮನೆ ಮಂದಿಯೊಂದಿಗೆ ಕಲ್ಯಾಣ ಮಂಟಪಕ್ಕೆ ಹೊರಟಿದ್ದರು. ಇದೇ ವೇಳೆ ಆಕೆಯಿದ್ದ ಕಾರು ನಗರದ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದೆ. ಕಾರಿಗೆ ಸಣ್ಣ ಅಪಘಾತವೂ ಆಗಿದೆ. ಟ್ರಾಫಿಕ್ ಸಮಸ್ಯೆ ಮತ್ತು ಅಪಘಾತದ ಮಧ್ಯೆ ಸಿಲುಕಿದ ವಧು, ಕೂಡಲೇ ಪಾರಾಗುವ ಪರಿಹಾರ ಮಾರ್ಗದ ಬಗ್ಗೆ ಯೋಚಿಸಿದ್ದಾರೆ. ಸುಮ್ಮನೆ ನಿಂತುಕೊಂಡರೆ ಮುಹೂರ್ತ ಮೀರಿ ಹೋಗುವುದು ಖಚಿತ ಎಂದರಿತ ಅವರು ಕೂಡಲೇ ಕಾರಿನಿಂದಿಳಿದು ನೇರವಾಗಿ ಮೆಟ್ರೋ ರೈಲು ಹತ್ತಿದ್ದಾರೆ. ಕುಟುಂಬ ಸದಸ್ಯರೂ ಸಹ ಆಕೆಯನ್ನು ಹಿಂಬಾಲಿಸಿದ್ದಾರೆ. ಇವರ ವಿಶೇಷ ಮೆಟ್ರೋ ಪ್ರಯಾಣವನ್ನು ವಿಡಿಯೋ ಚಿತ್ರೀಕರಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
-
Whatte STAR!! Stuck in Heavy Traffic, Smart Bengaluru Bride ditches her Car, & takes Metro to reach Wedding Hall just before her marriage muhoortha time!! @peakbengaluru moment 🔥🔥🔥 pic.twitter.com/LsZ3ROV86H
— Forever Bengaluru 💛❤️ (@ForeverBLRU) January 16, 2023 " class="align-text-top noRightClick twitterSection" data="
">Whatte STAR!! Stuck in Heavy Traffic, Smart Bengaluru Bride ditches her Car, & takes Metro to reach Wedding Hall just before her marriage muhoortha time!! @peakbengaluru moment 🔥🔥🔥 pic.twitter.com/LsZ3ROV86H
— Forever Bengaluru 💛❤️ (@ForeverBLRU) January 16, 2023Whatte STAR!! Stuck in Heavy Traffic, Smart Bengaluru Bride ditches her Car, & takes Metro to reach Wedding Hall just before her marriage muhoortha time!! @peakbengaluru moment 🔥🔥🔥 pic.twitter.com/LsZ3ROV86H
— Forever Bengaluru 💛❤️ (@ForeverBLRU) January 16, 2023
ಈ ವಿಡಿಯೋ ವೈರಲ್ ಆಗ್ತಿದ್ದು, 'ವಾಟ್ ಎ ಬ್ರೈಡ್' ಎಂಬ ಶೀರ್ಷಿಕೆ ನೀಡಲಾಗಿದೆ. ಕೆಲವೇ ಗಂಟೆಗಳಲ್ಲಿ ವಿಡಿಯೋ 8 ಸಾವಿರ ವೀಕ್ಷಣೆ ಪಡೆದಿದೆ. ಇದರೊಂದಿಗೆ ನಗರದಲ್ಲಿ ದಿನ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಈ ಕುರಿತು ಟ್ರಾಫಿಕ್ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದ ಪೈಲಟ್ಗಳು: ಕೆಲವು ದಿನಗಳ ಹಿಂದೆ ಬೆಂಗಳೂರು ಟ್ರಾಫಿಕ್‌ನಲ್ಲಿ ವಿಮಾನ ಪೈಲಟ್ಗಳು ಸಿಲುಕಿಕೊಂಡಿದ್ದರು. ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಬಾರದ ಕಾರಣ, ವಿಮಾನ ಸಮಯಕ್ಕೆ ಸರಿಯಾಗಿ ತೆರಳದೇ ವಿಳಂಬವಾಗಿರುವುದಕ್ಕೆ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಂಗಳೂರಿನಿಂದ ಪುಣೆ ಮತ್ತು ದೆಹಲಿಗೆ ಹೋಗಬೇಕಾದ ಪ್ರಯಾಣಿಕರು ನಿಗದಿತ ಸಮಯಕ್ಕಿಂತ 81 ನಿಮಿಷ ತಡವಾಗಿ ತಮ್ಮ ಸ್ಥಳಗಳನ್ನು ತಲುಪಿದ್ದರು. ಈ ಕುರಿತು ನೆಟ್ಟಿಗರ ಮನೆಯಲ್ಲಿ ಭಾರಿ ಚರ್ಚೆಯಾಗಿತ್ತು.
ಪೈಲಟ್ಗಳು ಟ್ರಾಫಿಕ್ ಸಮಸ್ಯೆಯಿಂದಾಗಿ ಆಗಮಿಸಲು ವಿಳಂಬವಾಗಿದೆ ಎಂದು ವಿಮಾನದಲ್ಲಿ ತಿಳಿಸಿದರೆಂದು ಪ್ರಯಾಣಿಕರು ತಾವು ಮಾಡಿದ ಟ್ವೀಟ್ನಲ್ಲಿ ಹೇಳಿಕೊಂಡಿದ್ದರು. ಆದರೆ ಈ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದರು. ಟ್ರಾಫಿಕ್ ಸಮಸ್ಯೆ ಕುರಿತಂತೆ ಪೊಲೀಸರು ಸ್ಪಷ್ಟನೆ ನೀಡಿ, "ಅಂದು ನಗರದಲ್ಲಿ ಎಲ್ಲಿಯೂ ಯಾವುದೇ ಟ್ರಾಫಿಕ್ ಸಮಸ್ಯೆ ವರದಿಯಾಗಿಲ್ಲ" ಎಂದು ಈಟಿವಿ ಭಾರತ ಕರ್ನಾಟಕಕ್ಕೆ ದೂರವಾಣಿ ಮೂಲಕ ಪೊಲೀಸ್ ಅಧಿಕಾರಿ ಎಂ.ಎ.ಸಲೀಂ ಹೇಳಿಕೆ ನೀಡಿದ್ದರು. ಈಗ ವಧುವಿನ ವೈರಲ್ ವಿಡಿಯೋ ಬಗ್ಗೆ ಟ್ರಾಫಿಕ್ ಪೊಲೀಸರು ಏನಂತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ದಾವಣಗೆರೆ:ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸಿದ್ಧವಾಯಿತು ಟ್ರಾಫಿಕ್ ಪಾರ್ಕ್