ETV Bharat / state

ದೇಶದಲ್ಲಿ ಇನ್ನೂ ಜೀವಂತವಾಗಿದೆ ಗುಲಾಮಗಿರಿ: ಸಿದ್ದರಾಮಯ್ಯ ಬೇಸರ - ಸಿದ್ದರಾಮಯ್ಯ ಲೆಟೆಸ್ಟ್ ನ್ಯೂಸ್

ದೇಶದಲ್ಲಿ ಗುಲಾಮಗಿರಿ ಇನ್ನೂ ಹೋಗಿಲ್ಲ. ಎಲ್ಲಿವರೆಗೆ ಗುಲಾಮಗಿರಿಯಿಂದ ಹೊರ ಬರುವುದಿಲ್ಲವೋ ಅಲ್ಲಿವರೆಗೆ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ
Siddaramaiah
author img

By

Published : Jan 25, 2020, 10:45 PM IST

ಬೆಂಗಳೂರು : ದೇಶದಲ್ಲಿ ಗುಲಾಮಗಿರಿ ಇನ್ನೂ ಹೋಗಿಲ್ಲ. ಎಲ್ಲಿವರೆಗೆ ಗುಲಾಮಗಿರಿಯಿಂದ ಹೊರ ಬರುವುದಿಲ್ಲವೋ ಅಲ್ಲಿವರೆಗೆ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್​ನಲ್ಲಿ ನಡೆದ ಅಕ್ಕನ ಮನೆ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಅಕ್ಕನಮನೆ ಪ್ರತಿಷ್ಠಾನ ಹಮ್ಮಿಕೊಂಡಿದ್ದ ದೇಸಿ ದಿಬ್ಬಣ ಹಾಗೂ ಅಲ್ಲಮ ಶೂನ್ಯ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲ ಮೌಢ್ಯ, ಕಟ್ಟುಪಾಡುಗಳು, ಕಂದಾಚಾರಗಳನ್ನು ಹುಟ್ಟು ಹಾಕಿದ ಹಿನ್ನೆಲೆಯಲ್ಲಿ ಗುಲಾಮಗಿರಿ ಇನ್ನೂ ಜೀವಂತವಾಗಿದೆ. ನಮ್ಮದು ಪುರುಷ ಪ್ರಧಾನ, ಜಾತಿ ಪ್ರಧಾನ ಸಮಾಜವಾಗಿದೆ. ಹಿಂದೆ ಹೆಣ್ಣು ಮಕ್ಕಳು ಹಾಗೂ ಕೆಲ ಸಮುದಾಯ ಅಕ್ಷರ ಸಂಸ್ಕೃತಿಯಿಂದ ವಂಚಿತವಾಯಿತು. ಆರ್ಥಿಕ, ಸಾಮಾಜಿಕ ಅಸಮಾನತೆಗೆ ಅಕ್ಷರ ಸಂಸ್ಕೃತಿ ಕಾರಣವಾಗಿದೆ. ಚರಿತ್ರೆಯಲ್ಲಿ ದಾಖಲಾದ ಯುವಪುರುಷರನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಾದ ಅಗತ್ಯವಿದೆ ಎಂದರು.

ಬಳಿಕ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ದೇಸಿ ಎನ್ನುವುದು ಆಧುನಿಕವಾದ ಮಾನಸಿಕ ಗುಣ. ಅಕ್ಕಮಹಾದೇವಿ ಮತ್ತು ಅಲ್ಲಮ ಪ್ರಭುಗಳು ದೇಸಿ ಸಮಕಾಲೀನ ಸಂದರ್ಭದಲ್ಲಿ ಮುಖ್ಯವಾದವರು. ಜಾನಪದ ಕೇವಲ ಹಳ್ಳಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶದಲ್ಲೂ ಇದೆ. ಗ್ರಾಮೀಣ ಭಾಗದ್ದು ಲಿಖಿತ ದೇಶಿ ಎಂಬುದು ನಿಜ ಆದರೆ, ದೇಸಿಯತೇ ಎನ್ನುವುದು ಹಳ್ಳಿಯಲ್ಲಿ ಮಾತ್ರ ಇರುತ್ತೆ ಅನ್ನುವುದು ಸಾಂಸ್ಕೃತಿಕ ಮೂಢನಂಬಿಕೆ. ಬಹುಸಂಸ್ಕೃತಿಗಳ ಸ್ವರೂಪ ಹೊಂದಿರುವುದೇ ದೇಸಿ ಸಂಸ್ಕೃತಿ. ಓದಿದವರೆಲ್ಲ ವಿವೇಕಿಗಳಲ್ಲ, ಓದದೇ ಇರುವವರು ಅವಿವೇಕಿಗಳಲ್ಲ ಎಂದರು.

ಇನ್ನು ಈ ಕಾರ್ಯಕ್ರಮದಲ್ಲಿ ಅಲ್ಲಮ ಶೂನ್ಯ ಸಿರಿ ಪ್ರಶಸ್ತಿಯನ್ನು ಜಾನಪದ ಕಲಾವಿದ ಗುರುರಾಜ ಹೊಸಕೋಟೆ, ಹೋಮ್ ಗಾರ್ಡ್ ಕಮಾಂಡೆಂಟ್ ಕೆ. ರವಿಕುಮಾರ್, ಹೋರಾಟಗಾರ ಪಾಲನೇತ್ರ, ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್, ಸಮಾಜ ಸೇವಕರಾದ ಬಸವರಾಜ್ ಎಂ.ಪಾಟೀಲ್, ಸತೀಶ್ ಬಿ. ಗುಡ್ಡ ಅವರಿಗೆ ನೀಡಿ ಗೌರವಿಸಲಾಯಿತು.

Intro:Body:ಬೆಂಗಳೂರು: ದೇಶದಲ್ಲಿ ಗುಲಾಮಗಿರಿ ಇನ್ನೂ ಹೋಗಲಿಲ್ಲ. ಎಲ್ಲಿವರೆಗೆ ಗುಲಾಮಗಿರಿಯಿಂದ ಹೊರ ಬರುವುದಿಲ್ಲವೋ ಅಲ್ಲಿವರೆಗೆ ಸಮಾಜದಲ್ಲಿ ಬದಲಾವಣೆ ಆಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆದ ಅಕ್ಕನಮನೆ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಅಕ್ಕನಮನೆ ಪ್ರತಿಷ್ಠಾನ ಹಮ್ಮಿಕೊಂಡಿದ್ದ ದೇಸೀದಿಬ್ಬಣ್ಣ ಹಾಗೂ ಅಲ್ಲಮ ಶೂನ್ಯ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲ ಮೌಡ್ಯ, ಕಟ್ಟುಪಾಡುಗಳು, ಕಂದಾಚಾರಗಳನ್ನು ಹುಟ್ಟು ಹಾಕಿದ ಹಿನ್ನೆಲೆಯಲ್ಲಿ ಗುಲಾಮಗಿರಿ ಇನ್ನೂ ಜೀವಂತವಾಗಿದೆ. ನಮ್ಮದು ಪುರುಷ, ಜಾತಿ ಪ್ರಧಾನವಾದ ಸಮಾಜವಾಗಿದೆ. ಹಿಂದೆ ಹೆಣ್ಣು ಮಕ್ಕಳು ಹಾಗೂ ಕೆಲ ಸಮುದಾಯವು ಅಕ್ಷರ ಸಂಸ್ಕೃತಿಯಿಂದ ವಂಚಿತವಾಯಿತು. ಆರ್ಥಿಕ, ಸಾಮಾಜಿಕ ಅಸಮಾನತೆಗೆ ಅಕ್ಷರ ಸಂಸ್ಕೃತಿ ಕಾರಣವಾಗಿದೆ. ಚರಿತ್ರೆಯಲ್ಲಿ ದಾಖಲಾದ ಯುವಪುರುಷರನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಾದ ಅಗತ್ಯವಿದೆ ಎಂದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ದೇಸಿ ಎನ್ನುವುದು ಆಧುನಿಕವಾದ ಮಾನಸಿಕ ಗುಣ. ಅಕ್ಕಮಹಾದೇವಿ ಮತ್ತು ಅಲ್ಲಮ ಪ್ರಭುಗಳು ದೇಸಿ ಸಮಕಾಲೀನ ಸಂದರ್ಭದಲ್ಲಿ ಮುಖ್ಯವಾದವರು. ಜಾನಪದ ಕೇವಲ ಹಳ್ಳಗಳಲ್ಲಿ ಮಾತ್ರವಲ್ಲಿ, ನಗರ ಪ್ರದೇಶದಲ್ಲೂ ಇದೆ ಎಂದರು.
ಜಾನಪದ ಎಂಬುದು ಮಾತ್ರ ದೇಸಿ ಎನ್ನುವಂತಾವಾಗಿದೆ. ಗ್ರಾಮೀಣ ಭಾಗದ್ದು ಲಿಖಿತ ದೇಶಿ ಎಂಬುದು ನಿಜ ಆದರೆ, ದೇಸಿಯತೇ ಎನ್ನುವುದು ಹಳ್ಳಿಯಲ್ಲಿ ಮಾತ್ರ ಇರುತ್ತೆ ಅನ್ನುವುದು ಸಾಂಸ್ಕೃತಿಕ ಮೂಢನಂಬಿಕೆ. ಬಹುಸಂಸ್ಕೃತಿಗಳ ಸ್ವರೂಪ ಹೊಂದಿರುವುದೇ ದೇಸಿ ಸಂಸ್ಕೃತಿ. ಸಾಮಾನ್ಯ ಸಂವೇದನಿಯ ಅರ್ಥ ಮಾಡಿಕೊಳ್ಳುವವರು ಹಾಗೂ ಕಟ್ಟಕಡೆಯ ವ್ಯಕ್ತಿಗೆ ಮೊಟ್ಟಮೊದಲು ಆದ್ಯತೆ ನೀಡುವವರೆ ನಿಜವಾದ ದೇಶಪ್ರೇಮಿ. ಓದಿದವರೆಲ್ಲ ವಿವೇಕಿಗಳಲ್ಲ, ಓದದೇ ಇರುವವರು ಅವಿವೇಕಿಗಳಲ್ಲ ಎಂದರು.
ಅಕ್ಕಮಹಾದೇವಿ ಹೆಣ್ಣಿನ ಹಕ್ಕಿನ ಸಂಕೇತ. ವಿವಾಹ ಎಂಬುವ ಸಂಸ್ಥೆಗೆ ಎದುರಾಗಿ ನಿಂತವಳು ಅಕ್ಕಮಹಾದೇವಿ. ಅಲ್ಲಮ ಪ್ರಭು ಅರಿವಿನ ಸಂಕೇತ. ಎಂದು ಹೇಳಿದ ಅವರು, ಧರ್ಮದ ಒಳಗೆ ಒಳ ವಿಮರ್ಶಕರು, ರಾಜಕೀಯದ ಒಳ ವಿಮರ್ಶಕರು ಬೇಕಾಗಿದ್ದಾರೆ ಎಂದರು.
ಅಲ್ಲಮ ಶೂನ್ಯ ಸಿರಿ ಪ್ರಶಸ್ತಿಯನ್ನು ಜಾನಪದ ಕಲಾವಿದ ಗುರುರಾಜ ಹೊಸಕೋಟೆ, ಹೋಮ್ ಗಾರ್ಡ್ ಕಮಾಂಡೆಂಟ್ ಕೆ. ರವಿಕುಮಾರ್, ಹೋರಾಟಗಾರ ಪಾಲನೇತ್ರ, ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್, ಸಮಾಜ ಸೇವಕರಾದ ಬಸವರಾಜ್ ಎಂ.ಪಾಟೀಲ್, ಸತೀಶ್ ಬಿ. ಗುಡ್ಡ ಅವರಿಗೆ ನೀಡಿ ಗೌರವಿಸಲಾಯಿತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.