ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಪಾದಚಾರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಮೇಲ್ಸೇತುವೆಗಳನ್ನು ಬಿಬಿಎಂಪಿ ಲೋಕಾರ್ಪಣೆಗೊಳಿಸಿದೆ.
ಪಾದಚಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಬಿಬಿಎಂಪಿ, ಪ್ರಕಾಶ್ ಆರ್ಟ್ಸ್ ಜಂಟಿಯಾಗಿ ₹ 2.50 ಕೋಟಿ ವೆಚ್ಚದಲ್ಲಿ 73 ಮೀಟರ್ ಉದ್ದ, 3.60 ಮೀಟರ್ ಅಗಲ ಹಾಗೂ ರಸ್ತೆಯಿಂದ 5.50 ಮೀಟರ್ ಎತ್ತರದಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದ್ದು, ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ, ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯವಾಗಿ ಜನ ಸಂಚಾರ ಹೆಚ್ಚಿರುವ ಸೆಂಟ್ ಜಾನ್ ಆಸ್ಪತ್ರೆ ಸರ್ಜಾಪುರ ಜಂಕ್ಷನ್ನಲ್ಲಿ ಅತಿ ಉದ್ದದ ಮೇಲ್ಸೇತುವೆ ನಿರ್ಮಿಸಲಾಗಿದೆ.
ಲಿಫ್ಟ್ ಕಡ್ಡಾಯ: ಮೇಲ್ಸೇತುವೆ ನಿರ್ಮಿಸಿದ್ದಲ್ಲಿ ಕಡ್ಡಾಯವಾಗಿ ಲಿಫ್ಟ್ಗಳನ್ನು ಅಳವಡಿಸಬೇಕಾಗಿದೆ. ಹಿರಿಯರು, ವೃದ್ಧರಿಗೆ ಅನುಕೂಲವಾಗಲಿ ಅಂತಾ ಈ ಸೌಲಭ್ಯವನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿ ಮೇಲ್ಸೇತುವೆಯಲ್ಲಿ ಎರಡು ಲಿಫ್ಟ್ ಅಳವಡಿಸಲಾಗಿದೆ.