ಬೆಂಗಳೂರು: ರಾಜ್ಯದಲ್ಲಿ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ರಾಜಧಾನಿಯಲ್ಲಿ ಬಂಧಿಸಿದ್ದ ಮೂವರು ಶಂಕಿತ ಉಗ್ರರ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ತಮಿಳುನಾಡು ಹಾಗೂ ಸಿಸಿಬಿ ಪೊಲೀಸರ ಸಹಕಾರದೊಂದಿಗೆ ನಗರದಲ್ಲಿ ವಾಸವಾಗಿದ್ದ ಶಂಕಿತ ಆರೋಪಿಗಳಾದ ಮೊಹಮ್ಮದ್ ಸೈಯದ್, ಇಮ್ರಾನ್ ಖಾನ್, ಮೊಹಮ್ಮದ ಹನೀಫ್ ಹಾಗೂ ಸಹಚರರ ವಿರುದ್ಧ ಪಿಸ್ತೂಲ್ ಸರಬರಾಜು ಹಾಗೂ ಕಾನೂನುಬಾಹಿರ ಚಟುವಟಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಮೊದಲ ಆರೋಪಿಯಾಗಿರುವ ಖ್ವಾಜಾ ಮೋಯಿನ್ ವಿದೇಶದಿಂದ ಗನ್ ಸ್ಮಗ್ಲರ್‌ಗಳ ಜೊತೆ ನೇರ ಸಂಪರ್ಕ ಹೊಂದಿದ್ದ. ತಮಿಳುನಾಡು ಪೊಲೀಸರ ಕಸ್ಟಡಿಯಲ್ಲಿರುವ ಆರೋಪಿಗಳನ್ನ ವಿಚಾರಣೆ ನಡೆಸೋದಕ್ಕಾಗಿ ಬೆಂಗಳೂರು ಪೊಲೀಸರು ಶೀಘ್ರದಲ್ಲೇ ಬಾಡಿ ವಾರೆಂಟ್ ಪಡೆಯಲಿದ್ದಾರೆ.