ETV Bharat / state

ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನ ಖಾಸಗಿ ಕುಳಗಳಿಗೆ ಹಸ್ತಾಂತರ ಹುನ್ನಾರದ ವಿರುದ್ಧ ಹೋರಾಟ ಅಗತ್ಯ.. ಎಸ್.ಕೆ ಶ್ರೀನಿವಾಸ್ - ಬ್ಯಾಂಕ್ ಬ್ಯಾಂಕ್ ಯೂನಿಯನ್ ಸಂಯುಕ್ತ ವೇದಿಕೆಯ ಸ್ಟೇಟ್ ಕನ್ವೀನರ್

ಗಮನಾರ್ಹ ಸಾಧನೆಯ ಮೂಲಕ ದೇಶದಲ್ಲಿ ಬಡತನ ನಿವಾರಣೆಗೆ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಕೊಡುಗೆ ನೀಡಿರುವ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿ, ಅವುಗಳ ಒಡೆತನವನ್ನು ಖಾಸಗೀ ಕುಳಗಳಿಗೆ ಒಪ್ಪಿಸುವ ಹುನ್ನಾರ ಈಗ ನಡೆದಿದೆ. ಮಾಹಿತಿ ಹಕ್ಕುಗಳ ಕಾಯಿದೆಯಡಿ ಪಡೆಯಲಾದ ಮಾಹಿತಿ ಪ್ರಕಾರ 30.9.2019ರ ವರೆಗೆ ಕೇವಲ 50 ಜನ ಸಾಲಗಾರರ ರೂ. 69,607 ಕೋಟಿಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ..

State convener of the Bank Union Federal Forum
ಬ್ಯಾಂಕ್ ಬ್ಯಾಂಕ್ ಯೂನಿಯನ್ ಸಂಯುಕ್ತ ವೇದಿಕೆಯ ಸ್ಟೇಟ್ ಕನ್ವೀನರ್ ಎಸ್​​.ಕೆ ಶ್ರೀನಿವಾಸ್
author img

By

Published : Mar 15, 2021, 9:49 PM IST

ಬೆಂಗಳೂರು : ಸರ್ಕಾರ ಕೆಲ ಪ್ರತಿಗಾಮಿ ಕ್ರಮ ಜಾರಿ ಮಾಡಿದ್ದರಿಂದ ವಿರೋಧಿಸುವ ಹೋರಾಟ ನಡೆಸುವ ಅಗತ್ಯತೆ ಎದ್ದು ಬಂದಿದೆ ಎಂದು ಬ್ಯಾಂಕ್ ಯೂನಿಯನ್ ಸಂಯುಕ್ತ ವೇದಿಕೆಯ ಸ್ಟೇಟ್ ಕನ್ವೀನರ್ ಎಸ್​​.ಕೆ ಶ್ರೀನಿವಾಸ್ ಹೇಳಿದ್ದಾರೆ.

ಎರಡು ದಿನದ ಬ್ಯಾಂಕ್ ಒಕ್ಕೂಟಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಸುಧಾರಣೆಯ ನಿಟ್ಟಿನಲ್ಲಿ ಕೆಲ ಕ್ರಮಗಳನ್ನು ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲಿ ಘೋಷಿಸಲಾಗಿದೆ. ಅವೆಂದರೆ ಬ್ಯಾಂಕು ಮತ್ತು ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ, ಆಸ್ತಿ ವಸೂಲಿ ಕಂಪನಿಯ ಸ್ಥಾಪನೆ, ಜೀವ ವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ, ಒಂದು ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇ.74ರವರೆಗೆ ಅವಕಾಶ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಬಂಡವಾಳ ಹಿಂತೆಗೆತದಲ್ಲಿ ಹುರುಪು ಹಾಗೂ ಅವುಗಳ ಮಾರಾಟ. ಇವೆಲ್ಲವೂ ಪ್ರತಿಗಾಮಿ ಕ್ರಮಗಳಾಗಿರುವುದರಿಂದ ವಿರೋಧಿಸುವ ಹೋರಾಟ ನಡೆಸುವ ಅಗತ್ಯತೆ ಎದ್ದು ಬಂದಿದೆ ಎಂದಿದ್ದಾರೆ.

ಸರ್ಕಾರದ ಪ್ರತಿಗಾಮಿ ಕ್ರಮ ವಿರೋಧಿಸಿ ಹೋರಾಟ ಮಾಡುವ ಅಗತ್ಯತೆ ಬಂದಿದೆ: ಎಸ್.ಕೆ ಶ್ರೀನಿವಾಸ್

1969ರಲ್ಲಿ 14 ಮತ್ತು 1980ರಲ್ಲಿ ಇನ್ನೂ 6 ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಿಸಲಾಗಿತ್ತು. ನಮ್ಮ ದೇಶದಲ್ಲಿ ಜುಲೈ 19ರಂದು ಬ್ಯಾಂಕ್ ರಾಷ್ಟ್ರೀಕರಣ ದಿನ ಎಂದು ಆಚರಿಸಲಾಗುತ್ತಿದೆ. 1975ರಲ್ಲಿ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಲಾಯಿತು. ಇಂತಹ ಬ್ಯಾಂಕುಗಳನ್ನು ಸ್ಥಾಪಿಸುವ ಉದ್ದೇಶ ಅತೀ ಹೆಚ್ಚು ಗ್ರಾಹಕರ ಉಳಿತಾಯದ ಹಣವನ್ನು ಸಂಗ್ರಹಿಸಿ ಅತೀ ಹೆಚ್ಚು ಉತ್ಪಾದಕರಿಗೆ ಸಾಲ ಸೌಲಭ್ಯವನ್ನು ಒದಗಿಸುವುದೇ ಆಗಿತ್ತು ಎಂದು ಹೇಳಿದರು.

ರಾಷ್ಟ್ರೀಕರಣದ ಮುಂಚಿನ ದಿನಗಳಲ್ಲಿ ಬ್ಯಾಂಕುಗಳ ಮುಳುಗುವಿಕೆ ಸರ್ವೇ ಸಾಮಾನ್ಯವಾಗಿತ್ತು. 1947 ರಿಂದ 1969ರ ಅವಧಿಯಲ್ಲಿ ಒಟ್ಟು 550 ಖಾಸಗಿ ಬ್ಯಾಂಕುಗಳು ಮುಳುಗಿದವು. ಈ ಬ್ಯಾಂಕುಗಳ ಠೇವಣಿದಾರರು ಹೆಚ್ಚು ಕಡಿಮೆ ತಮ್ಮೆಲ್ಲಾ ಉಳಿತಾಯದ ಹಣವನ್ನು ಕಳೆದುಕೊಂಡರು. ಬ್ಯಾಂಕ್ ರಾಷ್ಟ್ರೀಕರಣದ ನಂತರದ ಅವಧಿಯಲ್ಲಿ ಇದುವರೆಗೆ 38 ಖಾಸಗಿ ಬ್ಯಾಂಕುಗಳು ಮುಳುಗಿವೆ.

ಗ್ಲೋಬಲ್ ಟ್ರಸ್ಟ್‌ಬ್ಯಾಂಕ್, ಸೆಂಚುರಿಯನ್ ಬ್ಯಾಂಕ್, ಟೈಮ್ಸ್ ಬ್ಯಾಂಕ್, ಬ್ಯಾಂಕ್ ಆಫ್ ಪಂಜಾಬ್, ಲಕ್ಷ್ಮಿ ವಿಲಾಸ್ ಬ್ಯಾಂಕುಗಳು ಇದರಲ್ಲಿ ಸೇರಿವೆ. ಅದೇ ಸಮಯದಲ್ಲಿ ಸಾರ್ವಜನಿಕ ವಲಯದ ಯಾವುದೇ ಬ್ಯಾಂಕುಗಳು ಮುಳುಗಿಲ್ಲ. ಮಾತ್ರವಲ್ಲ, ಮುಳುಗಿ ಹೋಗಿದ್ದ ಖಾಸಗಿ ಬ್ಯಾಂಕುಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡು ಠೇವಣಿದಾರರ ಹಿತಾಸಕ್ತಿಗಳನ್ನು ಕಾಪಾಡಿವೆ ಎಂಬುದನ್ನು ಗಮನಿಸಬೇಕು ಎಂದರು.

2008ರ ಜಾಗತಿಕ ಬ್ಯಾಂಕಿಂಗ್ ಕುಸಿತದ ಸಂದರ್ಭದಲ್ಲಿ ಭಾರತದ ಬ್ಯಾಂಕಿಂಗ್ ವಲಯವು ಯಾವುದೇ ಹಾನಿಗೆ ಗುರಿಯಾಗಲಿಲ್ಲ. ಬಲಾಢ್ಯ ಯೂರೋಪಿಯನ್ ಮತ್ತು ಅಮೇರಿಕದ ಖಾಸಗಿ ಬ್ಯಾಂಕುಗಳು ತರಗಲೆಯಂತೆ ಕುಸಿಯುತ್ತಿದ್ದಾಗ, ಬೊಕ್ಕಸದಿಂದ ಅಪಾರ ಮೊತ್ತದ ಹಣ ನೀಡಿ ಸರ್ಕಾರಗಳೇ ಅವುಗಳನ್ನು ರಕ್ಷಿಸಿದ ಇತಿಹಾಸ ನಮ್ಮ ಮುಂದಿದೆ. ಅದಕ್ಕೂ ಹಿಂದೆ 1980ರಲ್ಲಿ ಜಪಾನಿನ, 1990ರಲ್ಲಿ ಕೊರಿಯಾದ ಮತ್ತು ಇತ್ತೀಚೆಗೆ 2017ರಲ್ಲಿ ಇಟಲಿಯ ಖಾಸಗಿ ಬ್ಯಾಂಕುಗಳನ್ನು ಅದೇ ರೀತಿ ರಕ್ಷಿಸಲಾಗಿದೆ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ 1969ರ ಜೂನ್ ತಿಂಗಳಲ್ಲಿ ಕೇವಲ 8,961ರಷ್ಟಿದ್ದ ಬ್ಯಾಂಕ್ ಶಾಖೆಗಳ ಸಂಖ್ಯೆ 1980ರಲ್ಲಿ 60,220ಕ್ಕೆ ಜಿಗಿದು, 2020ರ ಮಧ್ಯ ಭಾಗದಲ್ಲಿ 1,46,908 ರಷ್ಟಾಗಿದೆ. 1969ರಲ್ಲಿ ಕೇವಲ ರೂ. 4,700 ಕೋಟಿಗಳಷ್ಟಿದ್ದ ಠೇವಣಿಗಳ ಮೊತ್ತ 1993ರಲ್ಲಿ ರೂ. 2,77,235 ಕೋಟಿಗಳಿಗೆ ಏರಿಕೆಯಾಗಿ, ಜನವರಿ 21ರ ಅಂತ್ಯದ ವೇಳೆಗೆ ರೂ. 1,47,98,000 ಕೋಟಿಯಷ್ಟಾಗಿದೆ ಎಂದು ತಿಳಿಸಿದರು.

1979ರಲ್ಲಿ ಶೇ.22ರಷ್ಟಿದ್ದ ಆದ್ಯತಾ ಸಾಲಗಳು 1980ರ ವೇಳೆಗೆ ಶೇ.45ಕ್ಕೆ ಏರಿಕೆಯಾದವು. ಡಿಸೆಂಬರ್ 1972 ರಿಂದ ಜೂನ್ 1980ರ ಅವಧಿಯಲ್ಲಿ ಬ್ಯಾಂಕುಗಳು ನೀಡಿದ ಒಟ್ಟು 210 ಲಕ್ಷ ಸಾಲಗಳಲ್ಲಿ ಶೇ.93ರಷ್ಟು (ಸುಮಾರು 200 ಲಕ್ಷ) ರೂ. 10,000 ಅಥವಾ ಅದಕ್ಕೂ ಕಡಿಮೆ ಮೊತ್ತದ್ದಾಗಿದ್ದವು ಎಂಬುದನ್ನು ಗಮನಿಸಿದರೆ ಬ್ಯಾಂಕುಗಳ ಸಾಲ ನೀಡಿಕೆ ಯಾವ ವರ್ಗಕ್ಕೆ ಅನುಕೂಲಕರವಾಗಿತ್ತು ಎಂಬುದು ನಿಚ್ಚಳವಾಗುತ್ತದೆ ಎಂದರು.

ಗಮನಾರ್ಹ ಸಾಧನೆಯ ಮೂಲಕ ದೇಶದಲ್ಲಿ ಬಡತನ ನಿವಾರಣೆಗೆ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಕೊಡುಗೆ ನೀಡಿರುವ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿ, ಅವುಗಳ ಒಡೆತನವನ್ನು ಖಾಸಗಿ ಕುಳಗಳಿಗೆ ಒಪ್ಪಿಸುವ ಹುನ್ನಾರ ಈಗ ನಡೆದಿದೆ. ಮಾಹಿತಿ ಹಕ್ಕುಗಳ ಕಾಯಿದೆಯಡಿ ಪಡೆಯಲಾದ ಮಾಹಿತಿ ಪ್ರಕಾರ 30.9.2019ರವರೆಗೆ ಕೇವಲ 50 ಜನ ಸಾಲಗಾರರ ರೂ. 69,607 ಕೋಟಿಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಇದರಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಯಂತಹ ಮಹಾನುಭಾವರೂ ಇದ್ದಾರೆ. ಅಧಿಕೃತವಾಗಿ ಕೆಟ್ಟ ಸಾಲಗಳು ಎಂದು ಪರಿಗಣಿಸಲಾಗಿರುವ ರೂ.4,50,000 ಕೋಟಿಗಳ ಮೊತ್ತದ ಸಾಲ ಕೇವಲ 100 ಅತೀ ದೊಡ್ಡ ಸಾಲಗಾರರಿಗೆ ಸೇರಿದ್ದು ಎಂಬುದನ್ನು ರಿಸರ್ವ್ ಬ್ಯಾಂಕ್ ವರದಿಗಳು ಹೇಳುತ್ತವೆ ಎಂದು ತಿಳಿಸಿದರು.

ಇದನ್ನೂ ಓದಿ: ಔದ್ಯೋಗಿಕ ಸಂಸ್ಥೆಗಳಿಗೆ ಬ್ಯಾಂಕ್​ ಮಾರುವುದು ದೊಡ್ಡ ತಪ್ಪು, ರಾಜಕೀಯ ಅಸಮರ್ಥತೆ: ರಘುರಾಮ್​ ರಾಜನ್ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.