ಬೆಂಗಳೂರು: ಕಳೆದೊಂದು ವಾರದಿಂದ ಕೊರೊನಾ ಕೇವಲ ಬೆಂಗಳೂರು ಮಾತ್ರವಲ್ಲದೇ ಇತರ ಜಿಲ್ಲೆಗಳಲ್ಲೂ ಸ್ಫೋಟಗೊಂಡಿದೆ. ಬೆಂಗಳೂರಿನಿಂದ ಅರ್ಧದಷ್ಟು ಮಂದಿ ತಮ್ಮ ಊರುಗಳಿಗೆ ಸೇರಿದ ಪರಿಣಾಮವೇ ಸೋಂಕಿನ ಪ್ರಮಾಣ ಕಡಿಮೆ ಇದ್ದ ಜಿಲ್ಲೆಯಲ್ಲೂ ಸೋಂಕು ಕಾಣಿಸಿಕೊಳ್ಳಲು ಕಾರಣವಾಗಿದೆ. ಕೊರೊನಾ ಎರಡನೇ ಅಲೆಯಿಂದ ಯಾವ ಜಿಲ್ಲೆಗಳು ಕೂಡ ಸೇಫ್ ಅಲ್ಲ ಅಂತಾರೆ ತಜ್ಞರು. ಸರಿಯಾದ ರೀತಿಯ ಕೋವಿಡ್ ಮಾರ್ಗಸೂಚಿ ಪಾಲಿಸದೇ ಇದ್ದರೆ, ಇಡೀ ಊರಿಗೆ ಊರೇ ಕೋವಿಡ್ ಸೋಂಕಿತರ ಅಡ್ಡೆಯಾಗಲಿದೆ.
ನಿನ್ನೆ ಒಂದೇ ದಿನ ರಾಜ್ಯದಲ್ಲಿ 48 ಸಾವಿರಕ್ಕೂ ಹೆಚ್ಚಿನ ಮಂದಿಗೆ ಸೋಂಕು ತಗುಲಿದೆ. ಮುಂದಿನ ದಿನಗಳಲ್ಲಿ 50 ಸಾವಿರ ಮುಟ್ಟಿದರೂ ಅಚ್ಚರಿ ಪಡಬೇಕಿಲ್ಲ. ನಿಧಾನವಾಗಿ ಎಲ್ಲ ಜಿಲ್ಲೆಗಳಲ್ಲೂ ಸೋಂಕು ಹೆಚ್ಚಾಗುತ್ತಿದೆ. ಯಾವ್ಯಾವ ಜಿಲ್ಲೆಗಳು ರೆಡ್ ಝೋನ್ನಲ್ಲಿವೆ? ಎಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದೆ ಎನ್ನುವುದನ್ನ ನೋಡುವುದಾದರೆ,
ಮಧ್ಯಮದಲ್ಲಿರುವ ಜಿಲ್ಲೆಗಳು( 3,000-7,000 ಸೋಂಕಿತರ ಸಂಖ್ಯೆ)
7) ಹಾಸನ - 6,533
8) ದಕ್ಷಿಣ ಕನ್ನಡ- 6,486
9) ಮಂಡ್ಯ- 5,726
10) ರಾಯಚೂರು- 5,585
11) ಚಿಕ್ಕಬಳ್ಳಾಪುರ- 4,311
12) ಕೋಲಾರ- 3,828
13) ಧಾರವಾಡ- 3,751
14) ಕೊಡಗು- 3,676
15) ಬೀದರ್- 3,438
16) ವಿಜಯಪುರ- 3,315
17) ಶಿವಮೊಗ್ಗ- 3,291
18) ಬೆಳಗಾವಿ- 3,054
ಕಡಿಮೆ ಸೋಂಕಿತರು ಇರುವ ಜಿಲ್ಲೆಗಳು (0-3000ದೊಳಗಿನ ಸಂಖ್ಯೆ) 19) ಉಡುಪಿ- 2657, 20) ಚಿಕ್ಕಮಗಳೂರು- 2542, 21) ಚಾಮರಾಜನಗರ- 2390, 22) ಕೊಪ್ಪಳ- 2304, 23) ಯಾದಗಿರಿ- 2259, 24) ಉತ್ತರ ಕನ್ನಡ- 2108, 25)ಬಾಗಲಕೋಟೆ- 2014, 26) ದಾವಣಗೆರೆ- 1920, 27) ರಾಮನಗರ- 1726, 28)ಚಿತ್ರದುರ್ಗ- 1122, 29)ಗದಗ- 723, 30)ಹಾವೇರಿ- 620. ರಾಜ್ಯದ 6 ಜಿಲ್ಲೆಗಳು ಡೇಂಜರ್ ಝೋನ್ನಲ್ಲಿದ್ದು, ನಂಬರ್ ಒನ್ ಸ್ಥಾನದಲ್ಲಿ ಬೆಂಗಳೂರು ಇದೆ. ಇನ್ನು ಯಾವ ಜಿಲ್ಲೆಯು ಕೊರೊನಾದಿಂದ ತಪ್ಪಿಸಿಕೊಳ್ಳಲು ಆಗಿಲ್ಲ. ಪ್ರತಿ ಜಿಲ್ಲೆಯಲ್ಲೂ ಸೋಂಕು ಹರಡಿದ್ದು 500ಕ್ಕಿಂತ ಹೆಚ್ಚಿ ಸೋಂಕು ಪತ್ತೆಯಾಗುತ್ತಲೇ ಇದೆ. ರಾಜ್ಯ ಎರಡನೇ ಅಲೆಯ ತೀವ್ರತೆಗೆ ಸಿಲುಕಿದ್ದು, ಸೋಂಕಿನ ಲಕ್ಷಣ ಇರುವವರು ಕೂಡಲೇ ತಪಾಸಣೆಗೆ ಒಳಪಡುವುದು ಸೂಕ್ತ..