ಬೆಂಗಳೂರು: ಅಶ್ಲೀಲ ಸಿಡಿ ಬಹಿರಂಗ ಪ್ರಕರಣ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ನಲ್ಲಿ ಸ್ಥಳ ಮಹಜರಿಗಾಗಿ ಯುವತಿಯನ್ನು ಎಸ್‌ಐಟಿ ಅಧಿಕಾರಿಗಳು ಕರೆದೊಯ್ದಿದ್ದಾರೆ.
ಎಸಿಪಿ ಕವಿತಾ ನೇತೃತ್ವದಲ್ಲಿ ಮಹಜರು ನಡೆಯುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಡೆತನದಲ್ಲಿರೋ ಫ್ಲಾಟ್ನಲ್ಲಿ ತನಿಖೆ ನಡೆಯುತ್ತಿದೆ. ಈ ಫ್ಲಾಟ್ನ ಬೆಲೆ ಸುಮಾರು 3 ಕೋಟಿ 60 ಲಕ್ಷ ಎನ್ನಲಾಗುತ್ತದೆ. ಇದಕ್ಕೂ ಮೊದಲು ಯುವತಿ ಉಳಿದುಕೊಂಡಿದ್ದ ಆರ್.ಟಿ. ನಗರದಲ್ಲಿರುವ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಮಹಜರು ಮಾಡಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣ: ಯುವತಿ ಮಹಜರಿಗೆ ಒಳಪಡಿಸಿದ ಎಸ್ಐಟಿ