ETV Bharat / state

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಆರೋಪಿಯನ್ನು 3ನೇ ಬಾರಿ ವಿಚಾರಣೆಗೆ ಕರೆದ ಎಸ್​ಐಟಿ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ತಂಡ ಆರೋಪಿ ಶ್ರವಣ್ ಅನ್ನು ಮತ್ತೆ ವಿಚಾರಣೆಗೆ ಕರೆದಿದೆ.

Ramesh Jarakiholi CD case
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
author img

By

Published : Jun 17, 2021, 11:07 AM IST

Updated : Jun 17, 2021, 11:54 AM IST

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಅರೋಪಿ ಶ್ರವಣ್​​ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ವಿಶೇಷ ತನಿಖಾ ತಂಡ (ಎಸ್ಐಟಿ)ದಿಂದ ಸಿ.ಆರ್.ಪಿ. ಸಿ 41ಎ ಅಡಿಯಲ್ಲಿ ಎಸಿಪಿ ಧರ್ಮೇಂದ್ರ ನೋಟೀಸ್ ನೀಡಿದ್ದಾರೆ.

ಇಂದು ಬೆಳಗ್ಗೆ ಹನ್ನೊಂದು ಗಂಟೆಗೆ ಆಡುಗೋಡಿ ಟೆಕ್ನಿಕಲ್ ಸೆಂಟರ್​ನಲ್ಲಿ ಎಸ್​ಐಟಿ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಇಂದು ಮೂರನೆಯ ಬಾರಿಗೆ ಶ್ರವಣ್​ಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಹೈಕೋರ್ಟ್​ಗೆ ತನಿಖಾ ವರದಿ: ಸಿಡಿ ಪ್ರಕರಣದ ತನಿಖಾ ವರದಿಯನ್ನು ಎಸ್​​ಐಟಿ ಇಂದು ಹೈಕೋರ್ಟ್​ಗೆ ಸಲ್ಲಿಸಲಿದೆ. ಮೂರು ಪ್ರಕರಣಗಳ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ ಸಿಡಿ ಪ್ರಕರಣದ ರಹಸ್ಯ ಹೈಕೋರ್ಟ್‌ಗೆ ನೀಡಲಿದೆ. ಕಳೆದ ಬಾರಿ ಎಸ್​ಐಟಿ ಮುಖ್ಯಸ್ಥರ ಸಹಿ‌ ಇಲ್ಲದ ಕಾರಣ ಹೈಕೋರ್ಟ್ ವರದಿಯನ್ನು ರಿಜೆಕ್ಟ್ ಮಾಡಿತ್ತು. ಎಸ್ಐಟಿ ಮುಖ್ಯಸ್ಥರ ಸಹಿಯೊಂದಿಗೆ ವರದಿ ಸಲ್ಲಿಸಲು ಸೂಚನೆ ನೀಡಿತ್ತು.

ಜೂನ್ 17 ರಂದು ತನಿಖಾ ವರದಿ ಸಲ್ಲಿಸುವಂತೆ ಎಸ್​ಐಟಿಗೆ ಹೈಕೋರ್ಟ್ ಸೂಚಿಸಿತ್ತು. ಸಿಡಿ ಪ್ರಕರಣದ ಆರೋಪಿಗಳ ರಹಸ್ಯ ಕೂಡ ವರದಿಯಲ್ಲಿದೆ. ಕಬ್ಬನ್ ಪಾರ್ಕ್, ಸದಾಶಿವನಗರ, ಆರ್.ಟಿ ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕೇಸ್​ಗಳ ಈವರೆಗಿನ ಮಾಹಿತಿಯನ್ನು ಪೊಲೀಸರು ಕೋರ್ಟ್​ಗೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಎಸ್​ಐಟಿ ಎದುರು ನರೇಶ್​​ಗೌಡ ಹಾಗೂ ಶ್ರವಣ್ ಪ್ರತ್ಯಕ್ಷ: ಸಿಡಿ ಕೇಸ್​ ಕಿಂಗ್​ಪಿನ್​ಗಳು ಹೇಳಿದ್ದಿಷ್ಟು..!

Last Updated : Jun 17, 2021, 11:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.