ETV Bharat / state

2009ರ ನಂತರ ತಲೆ ಎತ್ತಿವೆ ಹಲವು ಅನಧಿಕೃತ ಧಾರ್ಮಿಕ ಕಟ್ಟಡಗಳು : ಈಗ ಎದುರಾಯ್ತು ಕಂಟಕ! - unofficial religious buildings have been built in bangalore

198 ವಾರ್ಡ್ ಗಳಲ್ಲಿ ನಿರ್ಮಾಣವಾದ ಅನಧಿಕೃತ ಧಾರ್ಮಿಕ ಕಟ್ಟಡಗಳ ಸರ್ವೆ ಕಾರ್ಯವನ್ನು ವಲಯವಾರು ಜಂಟಿ ಆಯುಕ್ತರು ಸರ್ವೆ ನಡೆಸಿದ್ದಾರೆ. 741 ಕಿಮೀ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ಸರ್ವೆ ನಡೆದಿದೆ. ಒಟ್ಟು 6406 ಧಾರ್ಮಿಕ ಕಟ್ಟಡಗಳು ನಗರದಲ್ಲಿದ್ದು, ಈ ಪೈಕಿ 2111 ಧಾರ್ಮಿಕ ಕಟ್ಟಡಗಳು ಅನಧಿಕೃತವಾಗಿ ತಲೆಯೆತ್ತಿವೆ..

Since 2009 many unofficial religious buildings have been built in bangalore
2009 ರ ನಂತರ ತಲೆ ಎತ್ತಿವೆ ಹಲವು ಅನಧಿಕೃತ ಧಾರ್ಮಿಕ ಕಟ್ಟಡಗಳು
author img

By

Published : Sep 14, 2021, 9:36 PM IST

ಬೆಂಗಳೂರು : ಮೈಸೂರಿನಲ್ಲಿ ಅನಧಿಕೃತವಾಗಿ‌ ನಿರ್ಮಾಣವಾದ ಧಾರ್ಮಿಕ ಕಟ್ಟಡಗಳ ತೆರವು ವಿಚಾರಕ್ಕೆ ಈಗಾಗಲೇ ಸಾಕಷ್ಟು ವಿರೋಧ ವ್ಯವಕ್ತವಾಗಿದೆ. ಅದೇ ರೀತಿ ಹೈಕೋರ್ಟ್ ಆದೇಶದ ಮೇರೆಗೆ ನಗರದಲ್ಲಿಯೂ ಅನಧಿಕೃತ ಧಾರ್ಮಿಕ ಕೇಂದ್ರಗಳ ಪಟ್ಟಿಯನ್ನು ಬಿಬಿಎಂಪಿ ಮಾಡಿದೆ. 2009ರ ಪೂರ್ವ ಮತ್ತು ಆಮೇಲೆ ನಿರ್ಮಾಣವಾದ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನ ಪಟ್ಟಿ ಮಾಡಿದೆ.

ಕೋರ್ಟ್ ಸ್ಪಷ್ಟ ಆದೇಶ ಇದ್ದು, 2009ರ ನಂತರ ನಿರ್ಮಿತವಾದ ಧಾರ್ಮಿಕ ಕಟ್ಟಡಗಳ ತೆರವಿಗೆ ಸೂಚನೆ ನೀಡಿದೆ. ಖಾಸಗಿ ಸ್ವತ್ತಿನಲ್ಲಿ ನಿರ್ಮಾಣವಾದ ದೇವಾಲಯಗಳ ಪಟ್ಟಿಯನ್ನೂ ನೀಡಲಾಗಿದೆ.

ಆದರೆ, ಇದನ್ನ ಸರ್ಕಾರಕ್ಕೆ ಕಳಿಸಿ ಅನುಮತಿ ಪಡೆದಾಗ ಯಾವುದೇ ತೊಂದರೆ ಇಲ್ಲ. ಈಗಾಗಲೇ, ಹಲವು ದೇವಾಲಯ, ಚರ್ಚ್, ಮಸೀದಿ ಅನುಮತಿ ಪಡೆದುಕೊಂಡಿವೆ. ಈಗ ಸಾರ್ವಜನಿಕ, ಸರ್ಕಾರಿ ಸ್ವತ್ತಿನಲ್ಲಿರುವ ಆಸ್ತಿಗೆ ಮಾತ್ರ ಕಂಟಕ ಎದುರಾಗುವ ಸಾಧ್ಯತೆ ಇದೆ.

198 ವಾರ್ಡ್ ಗಳಲ್ಲಿ ನಿರ್ಮಾಣವಾದ ಅನಧಿಕೃತ ಧಾರ್ಮಿಕ ಕಟ್ಟಡಗಳ ಸರ್ವೆ ಕಾರ್ಯ

198 ವಾರ್ಡ್ ಗಳಲ್ಲಿ ನಿರ್ಮಾಣವಾದ ಅನಧಿಕೃತ ಧಾರ್ಮಿಕ ಕಟ್ಟಡಗಳ ಸರ್ವೆ ಕಾರ್ಯವನ್ನು ವಲಯವಾರು ಜಂಟಿ ಆಯುಕ್ತರು ನಡೆಸಿದ್ದಾರೆ. 741 ಕಿ.ಮೀ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ಸರ್ವೆ ನಡೆದಿದೆ. ಒಟ್ಟು 6406 ಧಾರ್ಮಿಕ ಕಟ್ಟಡಗಳು ನಗರದಲ್ಲಿದ್ದು, ಈ ಪೈಕಿ 2111 ಧಾರ್ಮಿಕ ಕಟ್ಟಡಗಳು ಅನಧಿಕೃತವಾಗಿ ತಲೆಯೆತ್ತಿವೆ. ಖಾಸಗಿ ಜಾಗದಲ್ಲಿ ಅನುಮತಿ ಇಲ್ಲದೇ 4295 ಧಾರ್ಮಿಕ ಕಟ್ಟಡಗಳಿವೆ.

2009ರ ಸೆ. 29 ರ ನಂತರ ನಿರ್ಮಾಣವಾಗಿರುವ 277 ಧಾರ್ಮಿಕ ಕಟ್ಟಡಗಳಿವೆ. ಇದಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ 21 ಪುತ್ಥಳಿಗಳೂ ಇವೆ. ಧಾರ್ಮಿಕ ಕಟ್ಟಡ ಹೊರತುಪಡಿಸಿ, ರಾಜಕಾಲುವೆ, ಕೆರೆ ಜಾಗದ ಬಫರ್ ಝೋನ್ ನಲ್ಲಿ ತಲೆ 2626 ಕಟ್ಟಡಗಳು ತಲೆಎತ್ತಿವೆ. ಪಾಲಿಕೆ ಇದೂವರೆಗೂ 1600 ಕಟ್ಟಡ ತೆರವು ಮಾಡಿದ್ದು, 1026 ಇನ್ನೂ ತೆರವು ಮಾಡಬೇಕಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ 985 ಅನಧಿಕೃತ ಕಟ್ಟಡಗಳ ವಿವರ:

  • ಪಾಲಿಕೆಯ 8 ವಲಯಗಳಲ್ಲಿರುವ ಒಟ್ಟು ಸಂಖ್ಯೆ 985
  • ದಕ್ಷಿಣ ವಲಯದಲ್ಲಿನ ಅನಧಿಕೃತ ಕಟ್ಟಡಗಳ ಸಂಖ್ಯೆ 274
  • ಮಹದೇವಪುರ ವಲಯದಲ್ಲಿನ ಅನಧಿಕೃತ ಕಟ್ಟಡಗಳ ಸಂಖ್ಯೆ 176
  • ಯಹಲಂಕ ವಲಯದಲ್ಲಿನ ಅನಧಿಕೃತ ಕಟ್ಟಡಗಳ ಸಂಖ್ಯೆ 136
  • ಪೂರ್ವ ವಲಯದಲ್ಲಿನ ಅನಧಿಕೃತ ಕಟ್ಟಡಗಳ ಸಂಖ್ಯೆ 108
  • ರಾಜರಾಜೇಶ್ವರಿ ನಗರ ವಲಯದಲ್ಲಿನ ಅನಧಿಕೃತ ಕಟ್ಟಡಗಳ ಸಂಖ್ಯೆ 108
  • ಬೊಮ್ಮನಹಳ್ಳಿ ವಲಯದಲ್ಲಿನ ಅನಧಿಕೃತ ಕಟ್ಟಡಗಳ ಸಂಖ್ಯೆ 92
  • ಪಶ್ಚಿಮ ವಲಯದಲ್ಲಿನ ಅನಧಿಕೃತ ಕಟ್ಟಡಗಳ ಸಂಖ್ಯೆ 88
  • ದಾಸರಹಳ್ಳಿ ವಲಯದಲ್ಲಿನ ಅನಧಿಕೃತ ಕಟ್ಟಡಗಳ ಸಂಖ್ಯೆ 3

ಸರ್ಕಾರಿ ಜಾಗದಲ್ಲಿ 2009 ಕ್ಕೂ ಮುನ್ನ 1870 ಧಾರ್ಮಿಕ ಕೇಂದ್ರಗಳು ಅನಧಿಕೃತವಾಗಿ ತಲೆ ಎತ್ತಿದ್ದವು. 2009 ರ ನಂತರ 241 ಅನಧಿಕೃತ ಧಾರ್ಮಿಕ ಕೇಂದ್ರಗಳು ನಿರ್ಮಾಣವಾಗಿವೆ. ಖಾಸಗಿ ಭೂಮಿಯಲ್ಲಿ 3916 ಧಾರ್ಮಿಕ ಕೇಂದ್ರ 2009 ರ ಮುನ್ನ ಅಕ್ರಮವಾಗಿ ನಿರ್ಮಾಣವಾಗಿದ್ದರೆ, 379 ಧಾರ್ಮಿಕ ಕೇಂದ್ರಗಳು 2009 ರ ನಂತರ ನಿರ್ಮಾಣವಾಗಿವೆ.

2009 ರ ನಂತರ ಅನಧಿಕೃತ ಧಾರ್ಮಿಕ ಕಟ್ಟಡ ಪಟ್ಟಿ

  • ಪೂರ್ವ - 112
  • ದಕ್ಷಿಣ - 17
  • ಮಹದೇವಪುರ - 36
  • ಪಶ್ಚಿಮ - 16
  • ಯಲಹಂಕ - 414
  • ಆರ್ ಆರ್ ನಗರ - 42
  • ಬೊಮ್ಮನಹಳ್ಳಿ - 11
  • ದಾಸರಹಳ್ಳಿ - 3

ETV Bharat Logo

Copyright © 2025 Ushodaya Enterprises Pvt. Ltd., All Rights Reserved.