ETV Bharat / state

ಕರ್ಫ್ಯೂ ನಡುವೆ ಕಲ್ಯಾಣ... ಬೆಂಗಳೂರಲ್ಲಿ ಸರಳ ವಿವಾಹವಾದ ಯುವ ಜೋಡಿ - ಕರ್ಫ್ಯೂ ಜಾರಿ ಹಿನ್ನೆಲೆ

ಸರ್ಕಾರ ಕೊರೊನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲವನ್ನೂ ಸಂಪೂರ್ಣ ಬಂದ್​ ಮಾಡಿ ಕರ್ಫ್ಯೂ ಜಾರಿಗೊಳಿಸಿದೆ. ಈ ನಡುವೆ ಮೊದಲೇ ನಿಗದಿಯಾಗಿದ್ದ ಮದುವೆ ಸಮಾರಂಭ ಬೆಂಗಳೂರಿನ ಯಶವಂತಪುರದ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಸರಳವಾಗಿ ನಡೆಯಿತು.

Simple marriage program in Yeshwanthpur Bangalore
ಕರ್ಫ್ಯೂ ನಡುವೆ ಸರಳ ವಿವಾಹವಾದ ನವಜೋಡಿ
author img

By

Published : May 24, 2020, 11:01 AM IST

ಬೆಂಗಳೂರು: ಇಂದು ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿದ್ದು, ಈ ನಡುವೆ ನಗರದಲ್ಲಿ ವಧು-ವರ ಸರಳವಾಗಿ ಸಪ್ತಪದಿ ತುಳಿದಿದ್ದಾರೆ.

ಕರ್ಫ್ಯೂ ನಡುವೆ ಸರಳ ವಿವಾಹವಾದ ಜೋಡಿ

ಸರ್ಕಾರ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲವನ್ನೂ ಸಂಪೂರ್ಣ ಬಂದ್​ ಮಾಡಿ ಕರ್ಫ್ಯೂ ಜಾರಿಗೊಳಿಸಿದೆ. ಈ ನಡುವೆ ಮೊದಲೇ ನಿಗದಿಯಾಗಿದ್ದ ಮದುವೆ ಸಮಾರಂಭ ಬೆಂಗಳೂರಿನ ಯಶವಂತಪುರದ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಜರುಗಿತು.

ಕಳೆದ 6 ತಿಂಗಳ ಹಿಂದೆಯೇ ಮದುವೆ ನಿಗದಿಯಾಗಿದ್ದು, ಕುಟುಂಸ್ಥರು ಸ್ಥಳೀಯ ಪೊಲೀಸರ ಅನುಮತಿ ಪಡೆದು ಆಪ್ತರಷ್ಟೇ ಸಮಾರಂಭದಲ್ಲಿ ಭಾಗಿಯಾಗಿ ವಿವಾಹ ನೆರವೇರಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಂಡು ಮದುವೆ ಆಗುತ್ತಿದ್ದೇವೆ. ಮದುವೆಗೆ ಆಗಮಿಸಿದ್ದ ಪ್ರತಿಯೊಬ್ಬರು ಮಾಸ್ಕ್​​ ಹಾಕಿಕೊಂಡಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮದುವೆ ಆಗುತ್ತಿದ್ದೇವೆ ಎಂದು ನವಜೋಡಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.