ETV Bharat / state

ಇದೇ ಮೊದಲ ಬಾರಿಗೆ ದೆಹಲಿ ಹೊರಗೆ ನಡೆದ ಸೇನಾ ದಿನ ಆಚರಣೆಗೆ ಸಾಕ್ಷಿಯಾದ ಬೆಂಗಳೂರು - anil chouhan

ಬೆಂಗಳೂರಲ್ಲಿ ನಡೆದ 75ನೇ ಭಾರತೀಯ ಸೇನಾ ದಿನಾಚರಣೆ - ಸಾಹಸ ಚಟುವಟಿಕೆಗಳ ಪ್ರದರ್ಶನ ಕಣ್ತುಂಬಿಕೊಂಡ ಪ್ರೇಕ್ಷಕರು.

silicon-city-witnessed-the-first-army-day-outside-the-nations-capital
ರಾಷ್ತ್ರ ರಾಜಧಾನಿಯ ಹೊರತಾಗಿ ನೆಡೆದ ಮೊದಲ ಸೇನಾ ದಿನಕ್ಕೆ ಸಾಕ್ಷಿಯಾದ ಸಿಲಿಕಾನ್ ಸಿಟಿ.....
author img

By

Published : Jan 15, 2023, 9:51 PM IST

ಬೆಂಗಳೂರು: 1949ರಲ್ಲಿ ಕೊನೆಯ ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಆಗಿದ್ದ ಜನರಲ್ ಸರ್ ಫ್ರಾನ್ಸಿಸ್ ಬುಚೆರ್​ನಿಂದ ಜನರಲ್ ಕೆ.ಎಂ ಕಾರ್ಯಪ್ಪ(ನಂತರ ಫೀಲ್ಡ್ ಮಾರ್ಷಲ್ ಆದ) ಅಧಿಕೃತವಾಗಿ ಭಾರತೀಯ ಸೇನೆಯ ಮುಖ್ಯಸ್ಥರ ಸ್ಥಾನ ಅಲಂಕರಿಸಿದರು. ಆ ಮೂಲಕ ಸ್ವಾತಂತ್ರ್ಯಾ ನಂತರ ಮೊದಲ ಭಾರತೀಯ ಕಮಾಂಡರ್ ಇನ್-ಚೀಫ್ ಆಗಿ ನೇಮಕಗೊಂಡರು. ಆ ದಿನವನ್ನು ಸೇನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಬಾರಿಯ 75ನೇ ಭಾರತೀಯ ಸೇನಾ ದಿನದ ಕಾರ್ಯಕ್ರಮ ಸಿಲಿಕಾನ್ ಸಿಟಿಯಲ್ಲಿ ನಡೆಯಿತು.

ರಾಷ್ಟ್ರದ ರಾಜಧಾನಿ ದೆಹಲಿ ಹೊರಗೆ ನಡೆದ ಮೊದಲ ಸೇನಾ ದಿನ ಆಚರಣೆ ಇದಾಗಿದೆ ಮತ್ತು ದೇಶಾದ್ಯಂತ ಹೆಚ್ಚಿನ ಜನರನ್ನು ತೊಡಗಿಸಿಕೊಳ್ಳಲು ವಿಶೇಷವಾಗಿ ಯುವಜನತೆಗೆ “ಸೇನೆಯ ಬಗ್ಗೆ ತಿಳಿಸುವ’’ ಗುರಿ ಈ ಸೇನಾ ದಿನದ ಆಚರಣೆಯ ಮೂಲ ಉದ್ದೇಶವಾಗಿತ್ತು. ಎಂಇಜಿ ಕೇಂದ್ರದಲ್ಲಿ ಸೇನಾ ದಿನದ ಪಥಸಂಚಲನದ ನಂತರ, ಸೇನೆಯ ಶೌರ್ಯ ಮತ್ತು ಸಾಹಸಮಯ ಅಂಶಗಳನ್ನು ಪ್ರದರ್ಶಿಸುವ 'ಶೌರ್ಯ ಸಂಧ್ಯಾ'ವನ್ನು ಎಎಸ್​ಸಿ ಸೆಂಟರ್ ಮತ್ತು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಬೆಂಗಳೂರಲ್ಲಿ ಸೇನಾ ದಿನ ಆಚರಣೆ
ಬೆಂಗಳೂರಲ್ಲಿ ಸೇನಾ ದಿನ ಆಚರಣೆ

ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಲೆಫ್ಟಿನೆಂಟ್ ಜನರಲ್ ಬಿ.ಎಸ್ ರಾಜು ಮತ್ತು ಭಾರತೀಯ ಸೇನೆಯ ಹಿರಿಯ ಶ್ರೇಣಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೈಕ್ರೊಲೈಟ್ ಏರ್‌ಕ್ರಾಫ್ಟ್‌ಗಳ ಆಕರ್ಷಕ ಹಾರಾಟ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಿಗೆ ಕುದುರೆ ಏರಿ ಬಂದ ರೈಡರ್ಸ್​ಗಳಿಂದ ಗೌರವ ವಂದನೆ ಮತ್ತು ಅತ್ಯಾಧುನಿಕ ಲಘು ಹೆಲಿಕಾಪ್ಟರ್-ಡಬ್ಲ್ಯುಎಸ್‌ಐ, ಸೇನಾ ವೈಮಾನಿಕ ಹೆಲಿಕಾಪ್ಟರ್‌ಗಳು ಮತ್ತು ಸೇನೆಯ ಸಾಹಸ ವಿಭಾಗದ ಮೈಕ್ರೊಲೈಟ್ ಏರ್‌ಕ್ರಾಫ್ಟ್‌ಗಳ ಆಕರ್ಷಕ ಹಾರಾಟ ನಡೆಯಿತು. ಆನಂತರ ಟೆಂಟ್ ಪೆಗ್ಗಿಂಗ್ ಮತ್ತು ಸಿಕ್ಸ್ ಬಾರ್ ಜಂಪಿಂಗ್ (ಆರು ಅಡೆತಡೆಗಳನ್ನು ಜಂಪ್ ಮಾಡುವುದು) ಸಾಹಸ ಚಟುವಟಿಕೆಗಳ ಪ್ರದರ್ಶನವು ಪ್ರೇಕ್ಷಕರಿಗೆ ರೋಮಾಂಚನವನ್ನು ಉಂಟು ಮಾಡಿತು.

ಬೆಂಗಳೂರಲ್ಲಿ ಸೇನಾ ದಿನ ಆಚರಣೆ
ಬೆಂಗಳೂರಲ್ಲಿ ಸೇನಾ ದಿನ ಆಚರಣೆ

ಸ್ಕೈ ಡೈವಿಂಗ್‌ ನೀಡಿದ ರೋಮಾಂಚನ: ಸಾಹಸ ಪ್ರದರ್ಶನ ಚಟುವಟಿಕೆಗಳಲ್ಲಿ, ಸೇನಾ ವಾಯುಯಾನ ಯುದ್ಧ ಪ್ರದರ್ಶನ ಮತ್ತು ಮಿಲಿಟರಿಯ ಕೆಚ್ಚೆದೆಯ ಯೋಧರ ವಿಶೇಷ ತಂಡಗಳ ಕಾರ್ಯಾಚರಣೆಗಳು ಸೇರಿದ್ದವು. 'ನಾರ್ತ್ ಈಸ್ಟ್ ವಾರಿಯರ್ಸ್' ಸಮರ ಕಲೆಗಳ ವಿಸ್ಮಯ-ಸ್ಫೂರ್ತಿದಾಯಕ ಪ್ರದರ್ಶನ ನೀಡಿದರೆ, ಡೇರ್‌ಡೆವಿಲ್ ಪ್ಯಾರಾ ತಂಡಗಳು ಸ್ಕೈ ಡೈವಿಂಗ್‌ನೊಂದಿಗೆ ನೆರೆದಿದ್ದವರನ್ನು ರೋಮಾಂಚನಗೊಳಿಸಿದವು.

ಟೊರ್ನಾಡೋಸ್ ರಸದೌತಣ: ಎ.ಎಸ್.ಸಿ ಮೋಟಾರ್‌ ಸೈಕಲ್ ಡಿಸ್‌ಪ್ಲೇ ತಂಡದ 'ಟೊರ್ನಾಡೋಸ್'ನ ಕೌಶಲ್ಯಪೂರ್ಣ ಮತ್ತು ಧೈರ್ಯಶಾಲಿ ಪ್ರದರ್ಶನವು ಪ್ರೇಕ್ಷಕರಿಗೆ ರಸದೌತಣ ನೀಡಿದರೆ, ಟೇಕ್ವಾಂಡೋ ಪ್ರದರ್ಶನ ತಂಡವು ತಮ್ಮ ಸಾಹಸಗಳಿಂದ ಎಲ್ಲರನ್ನೂ ಆಕರ್ಷಿಸಿತು. ಶ್ರೇಷ್ಠ ಪ್ಯಾರಾ ಟ್ರೂಪರ್​ಗಳಿಂದ ಪ್ಯಾರಾ ಮೋಟಾರು ಪ್ರದರ್ಶನವು ಸಶಸ್ತ್ರ ಪಡೆಗಳ ಅದಮ್ಯ ಮನೋಭಾವ ಮತ್ತು ಅಚಲ ಶೌರ್ಯವನ್ನು ಪ್ರದರ್ಶಿಸಿತು.

ಬೆಂಗಳೂರಲ್ಲಿ ಸೇನಾ ದಿನ ಆಚರಣೆ
ಬೆಂಗಳೂರಲ್ಲಿ ಸೇನಾ ದಿನ ಆಚರಣೆ

ದೇಶದ ಗಡಿಗಳ ಸುರಕ್ಷತೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಭಾರತೀಯ ಸೇನೆ: ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ 2023ರ ಸೇನಾ ದಿನದ ಸಂದರ್ಭದಲ್ಲಿ ಇಡೀ ರಾಷ್ಟ್ರಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಸೈನಿಕರ ನಿಸ್ವಾರ್ಥ ಸೇವೆಗೆ ವಂದನೆ ಸಲ್ಲಿಸಿ ವಿಪತ್ತು ಪರಿಸ್ಥಿತಿಗಳನ್ನು ಎದುರಿಸುವಾಗ ಅಪ್ರತಿಮ ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಸೇನಾ ಸಿಬ್ಬಂದಿಯನ್ನು ಶ್ಲಾಘಿಸಿದರು. ದೇಶದ ಗಡಿಗಳ ಸುರಕ್ಷತೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಭಾರತೀಯ ಸೇನೆಯ ಪಾತ್ರವನ್ನು ಪ್ರಶಂಶಿಸಿದರು.

ಬೆಂಗಳೂರಲ್ಲಿ ಸೇನಾ ದಿನ ಆಚರಣೆ
ಬೆಂಗಳೂರಲ್ಲಿ ಸೇನಾ ದಿನ ಆಚರಣೆ

ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ: ಪ್ರದರ್ಶನಗಳಿಗೂ ಮುನ್ನ ಮುಖ್ಯ ಅತಿಥಿಗಳು 2023ರ ಸೇನಾ ದಿನಾಚರಣೆಯ ಸಂದರ್ಭದಲ್ಲಿ ಶೌರ್ಯ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು ಮತ್ತು ಸಂವಾದ ನಡೆಸಿದರು. ಭಾನುವಾರ ನೆಡೆದ ಭವ್ಯ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿ ಪುರಸ್ಕೃತ ಸಿಬ್ಬಂದಿ ಮತ್ತು ಕುಟುಂಬಗಳು, ಹೆಸರಾಂತ ಕ್ರೀಡಾಪಟುಗಳು, ಗಣ್ಯರು, ಅರೆಸೇನಾ ಪಡೆಗಳು, ಪೊಲೀಸ್ ಪಡೆಗಳು ಮತ್ತು ಬೆಂಗಳೂರಿನಲ್ಲಿರುವ ರಕ್ಷಣಾ ಸಂಸ್ಥೆಗಳ ಸಿಬ್ಬಂದಿ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದ್ನನೂ ಓದಿ: 2047ಕ್ಕೆ ಭಾರತವು ವಿಶ್ವದ ನಂಬರ್ 1 ಆರ್ಥಿಕ ದೇಶವಾಗಲಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.