ETV Bharat / state

ಸಿಲಿಕಾನ್​​​ ಸಿಟಿ ಜನತೆಗೆ ಕೊರೊನಾ ವಾರಿಯರ್​​​​ ಆಗುವ ಅವಕಾಶ: ನಗರ ಪೊಲೀಸ್​ ಆಯುಕ್ತರಿಂದ ಆಹ್ವಾನ

ಪೊಲೀಸ್​ ಸಿಬ್ಬಂದಿಯಲ್ಲೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಕಾರಣ ಈ ಬಾರಿಯ ಲಾಕ್​ಡೌನ್​ಗೆ​​ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮೂಲಕ ಸಿಲಿಕಾನ್ ಸಿಟಿ ‌ಜನತೆಗೆ ಸಿವಿಲ್ ಪೊಲೀಸ್​ ವಾರ್ಡನ್​ಗಳಾಗಿ ಕಾರ್ಯನಿರ್ವಹಿಸಲು ಆಹ್ವಾನ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್
ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್
author img

By

Published : Jul 15, 2020, 4:23 PM IST

ಬೆಂಗಳೂರು: ಕೊರೊನಾ ವಾರಿಯರ್ಸ್​ ಆಗಿರುವ ಪೊಲೀಸರಿಗೆ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಈ ಬಾರಿ ಕಟ್ಟುನಿಟ್ಟಿನ ಲಾಕ್​ಡೌನ್​ಗೆ ಪೊಲೀಸ್​​ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.

ಕಳೆದ ಲಾಕ್​ಡೌನ್ ಸಂದರ್ಭದಲ್ಲಿ ಕೆಎಸ್​ಆರ್​ಪಿ ತುಕಡಿ ‌ಸೇರಿದಂತೆ ಹಲವಾರು ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ತೊಡಗಿದ್ದರು. ಆದರೆ ಈ ಬಾರಿ ಇಲಾಖೆ ಬಹಳಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಕಾರಣ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮೂಲಕ ಸಿಲಿಕಾನ್ ಸಿಟಿ ‌ಜನತೆಗೆ ಸಿವಿಲ್ ಪೊಲೀಸ್​​ ವಾರ್ಡನ್​ಗಳಾಗಿ ಕಾರ್ಯನಿರ್ವಹಿಸಲು ಆಹ್ವಾನ ನೀಡಿದ್ದಾರೆ.

  • Inviting physically fit n service minded residents of Bengaluru, both men and women, between the age of 18 to 45 to Volunteer as Civil Police Warden to help the local police in regulation and enforcement of anti-Covid measures. To register log on to https://t.co/sPMdHigqYn

    — Bhaskar Rao IPS (@deepolice12) July 14, 2020 " class="align-text-top noRightClick twitterSection" data=" ">

ಲಾಕ್​ಡೌನ್ ಸಮಯದಲ್ಲಿ ಪೊಲೀಸರಿಗೆ ಸಹಕಾರ ನೀಡಲು ಸಿವಿಲ್ ಪೊಲೀಸ್​​ ವಾರ್ಡನ್​ಗಳ ಅಗತ್ಯವಿದೆ. ಹೀಗಾಗಿ ಬೆಂಗಳೂರು ನಗರದ 18ರಿಂದ‌ 45 ವರ್ಷದೊಳಗಿನ ಪುರುಷ ಅಥವಾ ಮಹಿಳೆಯರು ಸಿವಿಲ್ ಪೊಲೀಸ್​ ವಾರ್ಡನ್​ಗಳಾಗಿ ಕಾರ್ಯನಿರ್ವಹಿಸಲು ಅರ್ಜಿ ಸಲ್ಲಿಸಬಹುದು. ದೈಹಿಕವಾಗಿ ಸಮರ್ಥವಾಗಿ ಮತ್ತು ಸೇವಾ ಮನೋಭಾವನೆ ಹೊಂದಿರುವವರು ಖಂಡಿತಾ ಪೊಲೀಸರ ಜೊತೆಗೆ ಕೊರೊನಾ ವಾರಿಯರ್ಸ್​ ಆಗಿ ಕೆಲಸ ಮಾಡಬಹುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.