ಬೆಂಗಳೂರು: ಇಂದಿನಿಂದ ಮೂರು ದಿನ ದೀಪಾವಳಿ ಹಬ್ಬದ ಸಂಭ್ರಮ. ಈ ಬಾರಿ ಕೊರೊನಾಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಹಬ್ಬ ಆಚರಣೆಗೆ ಸರ್ಕಾರ ಸೂಚಿಸಿದೆ. ಆದರೆ ಜನತೆ ಮಾತ್ರ ಕೊರೊನಾಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ನಿಯಮಾವಳಿಗಳನ್ನು ಮರೆತು ಜಮಾಯಿಸಿದ್ದಾರೆ.
ಕೊರೊನಾ ಕಡಿಮೆಯಾಗುತ್ತಿದ್ದಂತೆ ಜನ ಮೈಮರೆತು ಓಡಾಡುತ್ತಿದ್ದಾರೆ. ದೀಪಾವಳಿ ಹಬ್ಬ ಇರುವುದರಿಂದ ಮಾರುಕಟ್ಟೆಗಳಲ್ಲಿ ವ್ಯಾಪಾರ ಇಂದು ಜೋರಾಗಿಯೇ ನಡೆದಿದೆ. ನಗರದ ಕೆ.ಅರ್. ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ಕೊರೊನಾ ಇಲ್ಲವೇನೋ ಎಂಬಂತೆ ವ್ಯಾಪಾರದಲ್ಲಿ ಸಿಲಿಕಾನ್ ಸಿಟಿ ಜನ ಬ್ಯುಸಿಯಾಗಿದ್ದರು.
ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಇಲ್ಲದೆ ಹೂವು, ಹಣ್ಣು, ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ನಿರತರಾಗಿದ್ದರು. ಬೆಂಗಳೂರಿನ ಕೆ.ಅರ್. ಮಾರುಕಟ್ಟೆಯಲ್ಲಿ ಸಾವಿರಾರು ಜನ ಬೆಳಗ್ಗೆಯಿಂದಲೇ ಖರೀದಿಗಾಗಿ ಆಗಮಿಸಿದ್ದರು.