ETV Bharat / state

ಸಹಜ ಸ್ಥಿತಿಯತ್ತ ಸಿಲಿಕಾನ್​​​ ಸಿಟಿ: ಎಂದಿನಂತಾದ ಜನಜೀವನ - ಬಿಎಂಟಿಸಿ ಆರಂಭ

ಲಾಕ್​ಡೌನ್ ಬಳಿಕ ರಾಜಧಾನಿ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಇದೀಗ ಲಾಕ್​​ಡೌನ್​ 4.O ಹಿನ್ನೆಲೆ ನಿಯಮಗಳನ್ನು ಸಡಿಲಿಸಲಾಗಿದ್ದು, ಜನರ ಓಡಾಟ ಹೆಚ್ಚಾಗಿದೆ. ಅಲ್ಲದೆ ರಸ್ತೆಯಲ್ಲಿ ಆಟೋ, ಟ್ಯಾಕ್ಸಿ, ಬಸ್​ಗಳು ಸೇರಿದಂತೆ ಜನರ ಓಡಾಟ ಎಂದಿನಂತೆ ಆರಂಭವಾಗಿದೆ.

Silicon City Bangalore returns to normal life after lockdown Relaxation
ಸಹಜ ಸ್ಥಿತಿಗೆ ಮರಳುತ್ತಿರುವ ಸಿಲಿಕಾನ್​ ಸಿಟಿ: ಎಂದಿನಂತೆ ವಾಹನ, ಜನರ ಓಡಾಟ
author img

By

Published : May 19, 2020, 5:10 PM IST

ಬೆಂಗಳೂರು: ಕೊರೊನಾ‌ ಮಹಾಮಾರಿಗೆ ಸ್ತಬ್ಧವಾಗಿದ್ದ ಸಿಲಿಕಾನ್​ ಸಿಟಿ ಇಂದು ಬಹುತೇಕ ಸಹಜ ಸ್ಥಿತಿಗೆ ಮರಳಿದೆ. ಬೆಂಗಳೂರಲ್ಲಿ ವಾಹನ ಸವಾರರು ಎಂದಿನಂತೆ ತಮ್ಮ ದೈನಂದಿನ ಕೆಲಸಕ್ಕೆ ತೆರಳಿದ್ದಾರೆ. ಮಧ್ಯಾಹ್ನದ ಬಿಸಿಲನ್ನೂ ಲೆಕ್ಕಿಸದೆ ತಮ್ಮ ತಮ್ಮ ಕೆಲಸಕ್ಕೆ ವಾಹನ ಸವಾರರು ಟ್ರಾಫಿಕ್​ನಲ್ಲಿಯೂ ಸಾಗುತ್ತಿದ್ದಾರೆ.

ಸಹಜ ಸ್ಥಿತಿಗೆ ಮರಳುತ್ತಿರುವ ಸಿಲಿಕಾನ್​ ಸಿಟಿ: ಎಂದಿನಂತಾದ ಜನಜೀವನ

ಹಾಗೆಯೇ ಪ್ರತಿ ಸಿಗ್ನಲ್​ಗಳ ಬಳಿ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಬಂದೋಬಸ್ತ್​​​ನಲ್ಲಿ ತೊಡಗಿದ್ದಾರೆ. ಅಲ್ಲದೆ ಜನ ಮಾಸ್ಕ್ ಧರಿಸಿ ಕೊರೊನಾ ತಮ್ಮ ಹತ್ತಿರ ಬಾರದೆ ಇರಲಿ ಅಂತ ಸುರಕ್ಷತೆಯಿಂದ ಓಡಾಟ ಮಾಡುತ್ತಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.