ETV Bharat / state

ಗುಣಮಟ್ಟದ ಶಿಕ್ಷಣಕ್ಕಾಗಿ ವಿದೇಶಿ ವಿವಿ ಜೊತೆ ಒಪ್ಪಂದಕ್ಕೆ ಸಹಿ: ಡಿಸಿಎಂ ಅಶ್ವತ್ಥ್​ ನಾರಾಯಣ್ - ಪಠ್ಯಕ್ರಮ ಅಭಿವೃದ್ಧಿಯಲ್ಲಿ ಬದಲಾವಣೆ

ವಿದೇಶಿ ವಿವಿಗಳಲ್ಲಿರುವ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಲು, ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಉನ್ನತ ಶಿಕ್ಷಣ ಖಾತೆಯನ್ನೂ ನಿರ್ವಹಿಸುತ್ತಿರುವ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ತಿಳಿಸಿದ್ದಾರೆ.

ವಿದೇಶಿ ವಿವಿ ಜೊತೆ ಒಪ್ಪಂದಕ್ಕೆ ಸಹಿ
author img

By

Published : Oct 9, 2019, 9:36 PM IST

ಬೆಂಗಳೂರು: ವಿದೇಶಿ ವಿವಿಗಳಲ್ಲಿರುವ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಲು, ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಉನ್ನತ ಶಿಕ್ಷಣ ಖಾತೆಯನ್ನೂ ನಿರ್ವಹಿಸುತ್ತಿರುವ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ತಿಳಿಸಿದ್ದಾರೆ.

ಇಂದು ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಯುಕೆಯ ಸಲ್ಫೋರ್ಡ್ ಯೂನಿವರ್ಸಿಟಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದ ಡಿಸಿಎಂ, ಕೈಗಾರಿಕೋದ್ಯಮದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಅದೇ ರೀತಿ ಸಂಸ್ಥೆ-ವಿವಿಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತಷ್ಟು ಹೆಚ್ಚಿಸುವ ಸಂಬಂಧ ಅಲ್ಲಿನ ವಿವಿ ಜೊತೆ ವಿನಿಮಯ ಮಾಡಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ. ಯಾವ ರೀತಿ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಇದು ಉಪಯುಕ್ತವಾಗುತ್ತದೆ ಎಂದು ತಿಳಿಸಿದ್ರು.‌ ಸಾಕಷ್ಟು ವಿವಿಗಳಲ್ಲಿ ಸಂಶೋಧನೆಗಳು ಲ್ಯಾಬ್​ಗಳಿಗೆ ಸೀಮಿತವಾಗಿವೆ. ಅದು ಫೀಲ್ಡ್​ಗೆ ಬರುವಂತಾಗಬೇಕು.‌ ಸಮಾಜಕ್ಕೆ ಅನುಕೂಲವಾಗುವ ಸಂಶೋಧನೆಗಳು ನಡೆಯಬೇಕಿದೆ ಎಂದರು.‌

ವಿದೇಶಿ ವಿವಿ ಜೊತೆ ಒಪ್ಪಂದಕ್ಕೆ ಸಹಿ

ಬಯೋ ಸೈನ್ಸ್, ಹೆಲ್ತ್ ಸೈನ್ಸ್, ರೋಬೋಟಿಕ್ಸ್ ಸೇರಿದಂತೆ ಹಲವರು ವಿಷಯಗಳಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿಯಾಗಬೇಕಿದೆ. ಪಠ್ಯಕ್ರಮ ಅಭಿವೃದ್ಧಿಯಲ್ಲೂ ಸಾಕಷ್ಟು ಬದಲಾವಣೆಗಳಾಗಬೇಕಿದೆ. ಅದಕ್ಕಾಗಿ ಈ ರೀತಿಯ ವಿದೇಶಿ ವಿವಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕಿದೆ. ಈ ಮೂಲಕ ಅವರಲ್ಲಿರುವ ಮಾಹಿತಿಯನ್ನ ಪಡೆದುಕೊಳ್ಳಬೇಕಿದೆ.‌ ಇದರ ಜೊತೆಗೆ ನಮ್ಮಲ್ಲಿರುವ ಮಾಹಿತಿ ನೀಡಿ, ಅವರಲ್ಲಿರುವ ಗುಣಮಟ್ಟವನ್ನು ಪಡೆದುಕೊಳ್ಳುವುದಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ‌‌ ಅಂತ ತಿಳಿಸಿದರು.

Intro:ವಿದೇಶಿ ವಿವಿ ಜೊತೆ ಒಪ್ಪಂದಕ್ಕೆ ಸಹಿ; ಡಾ. ಅಶ್ವಥ್ ನಾರಾಯಣ್.. ‌

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಹಾಗೂ ಯುಕೆಯ ಸಲ್ಫೋರ್ಡ್ ಯೂನಿವರ್ಸಿಟಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.. ವಿದೇಶಿ ವಿವಿಗಳಲ್ಲಿರುವ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಲು, ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ ಅವರೊಟ್ಟಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ, ತಿಳಿಸಿದ್ದಾರೆ.. ಇಂದು ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಒಪ್ಪಂದ ಮಾಡಿಕೊಂಡರು.‌

ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದ ಸಚಿವರು, ಕೈಗಾರಿಕೋದ್ಯಮದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಅದೇ ರೀತಿ ಸಂಸ್ಥೆ- ವಿವಿಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತಷ್ಟು ಹೆಚ್ಚಿಸುವ ಸಂಬಂಧ ಅಲ್ಲಿನ ವಿವಿ ಜೊತೆ ವಿನಿಮಯ ಮಾಡಿಕೊಳ್ಳುವುದು ಮುಖ್ಯ ಉದ್ದೇಶ.. ಯಾವ ರೀತಿ ಅಳವಡಿಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇದು ಉಪಯುಕ್ತ ವಾಗುತ್ತದೆ..‌

ಸಾಕಷ್ಟು, ವಿವಿಗಳಲ್ಲಿ ಸಂಶೋಧನೆಗಳು ಲ್ಯಾಬ್ ಗಳಿಗೆ ಸಮೀತವಾಗಿದೆ..ಅದು ಫೀಲ್ಡ್ ಗೆ ಬರುವಂತಾಗಬೇಕು.‌ ಸಮಾಜಕ್ಕೆ ಅನುಕೂಲವಾಗುವ ಸಂಶೋಧನೆಗಳು ನಡೆಯಬೇಕಿದೆ ಅಂತ ತಿಳಿಸಿದರು.‌

ಬಯೋ ಸೈನ್ಸ್, ಹೆಲ್ತ್ ಸೈನ್ಸ್, ರೋಬೋಟಿಕ್ಸ್, ಸೇರಿದಂತೆ ಹಲವರು ವಿಷಯಗಳು ಇದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಆಗಬೇಕಿದೆ.. ಪಠ್ಯಕ್ರಮ ಅಭಿವೃದ್ಧಿ ಯಲ್ಲೂ ಸಾಕಷ್ಟು ಬದಲಾವಣೆ ಆಗಬೇಕಿದೆ. ಈ ರೀತಿಯ ವಿದೇಶಿ ವಿವಿಗಳೊಂದಿಗೆ ಸಂಬಂಧಗಳನ್ನ ಬೆಳೆಸಿಕೊಳ್ಳಬೇಕಿದೆ.. ಈ ಮೂಲಕ ಅವರಲ್ಲಿರುವ ಮಾಹಿತಿಯನ್ನ ಪಡೆದುಕೊಳ್ಳಬೇಕಿದೆ.‌ ಇದರ ಜೊತೆಗೆ ನಮ್ಮಲ್ಲಿರುವ ಮಾಹಿತಿ ನೀಡಿ, ಅವರಲ್ಲಿರುವ ಗುಣಮಟ್ಟವನ್ನು ಪಡೆದುಕೊಳ್ಳುವುದಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ‌‌ ಅಂತ ತಿಳಿಸಿದರು..

‌KN_BNG_4_DCM_ASHWATHNARAYAN_VV_SING_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.