ETV Bharat / state

ಪಠ್ಯ ಪರಿಷ್ಕರಣೆ ಬಗ್ಗೆ ನಾಡಿನ ಜನರಿಗೆ ಸುಳ್ಳು ಹೇಳಿದ ಸಚಿವರನ್ನು ವಜಾ ಮಾಡಿ : ಸಿದ್ದರಾಮಯ್ಯ - ಪಠ್ಯ ಪರಿಷ್ಕರಣೆ ಬಗ್ಗೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಆಕ್ರೋಶ

ಪ್ರಸ್ತುತ ಬಿಜೆಪಿ ಸರ್ಕಾರ ರೋಹಿತ್ ಚಕ್ರತೀರ್ಥರ ಮೂಲಕ ಮಾಡಿಸಿರುವ ಅಧ್ವಾನಗಳನ್ನು ಹಲವು ರೀತಿಯಲ್ಲಿ ಗಮನಿಸಬೇಕಾಗಿದೆ. ಈ ಪಠ್ಯ ಪುಸ್ತಕ ಪರಿಷ್ಕರಣೆಯು ಸಂವಿಧಾನ ವಿರೋಧಿ ಆಶಯಗಳುಳ್ಳದ್ದಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ..

ಸಿದ್ದರಾಮಯ್ಯ
ಸಿದ್ದರಾಮಯ್ಯ
author img

By

Published : Jun 24, 2022, 7:54 PM IST

ಬೆಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಎಳೆಯ ಮಕ್ಕಳ ಮನಸ್ಸುಗಳಿಗೆ ಸರ್ಕಾರ ಮತ್ತು ಸರ್ಕಾರದ ಹಿಂದೆ ಗುಪ್ತವಾಗಿ ಕೆಲಸ ಮಾಡುತ್ತಿರುವ ಸಂಘ ಪರಿವಾರ ವಿಷ ಹಾಕಲು ಹೊರಟಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿವಾದ ಪ್ರಾರಂಭವಾಗಿ ತಿಂಗಳುಗಳು ಕಳೆಯುತ್ತಿದ್ದರೂ ತಜ್ಞರ ಸಮಿತಿ ಮಾಡಿ ಸಮಸ್ಯೆಗಳೇನು? ಎಂದು ಪರಿಶೀಲಿಸುವ ಬದಲಿಗೆ ರೋಹಿತ್ ಚಕ್ರತೀರ್ಥ ಮಾಡಿರುವ ಪ್ರಮಾದಗಳನ್ನು ಸಮರ್ಥಿಸಿಕೊಳ್ಳುವ ಬೇಜವಾಬ್ಧಾರಿತನವನ್ನು ಸರ್ಕಾರ ತೋರಿಸುತ್ತಿದೆ.

ವಿವಾದ ಪ್ರಾರಂಭವಾಗಿ ಇಷ್ಟು ದಿನವಾದ ಮೇಲೆ ನಿನ್ನೆ ಕಂದಾಯ ಸಚಿವ ಆರ್.ಅಶೋಕ್ ಅವರು ತಮ್ಮ ಪಕ್ಕದಲ್ಲಿ ಸಿಸಿ ಪಾಟೀಲ್, ಭೈರತಿ ಬಸವರಾಜು ಮತ್ತು ಶಿವರಾಮ್ ಹೆಬ್ಬಾರ್​ ಅವರನ್ನು ಕೂರಿಸಿಕೊಂಡು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಈ ನಾಲ್ಕೂ ಜನರು ಕೂಡ ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿಯೇ ಇಲ್ಲದವರು ಮತ್ತು ಅದರಲ್ಲಿ 3 ಜನ ಶೂದ್ರ ಸಮುದಾಯಗಳಿಗೆ ಸೇರಿದ ಸಚಿವರು.

ಹಾಗೊಂದು ವೇಳೆ ಸಮರ್ಪಕ ಮಾಹಿತಿ ಇದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಧ್ಯಮಗೋಷ್ಠಿ ನಡೆಸಬೇಕಾಗಿತ್ತು. ವಾಸ್ತವವಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿ ಸತ್ಯ ಸಂಗತಿಗಳನ್ನು ವಿವರಿಸಬೇಕಾಗಿದ್ದುದು ಸಂಬಂಧಿತ ಶಿಕ್ಷಣ ಸಚಿವರು. ಕಂದಾಯ ಸಚಿವ ಆರ್. ಅಶೋಕ್ ಅವರು ಕುಳಿತುಕೊಂಡು ಸಂಪೂರ್ಣವಾಗಿ ಈ ವಿಚಾರವನ್ನು ರಾಜಕೀಕರಣಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂವಿಧಾನದ ಆಶಯಗಳು ಇರಬೇಕು : ಪಠ್ಯ ಪುಸ್ತಕಗಳು ಪಕ್ಷದ ಪುಸ್ತಕಗಳಾಗಬಾರದು ಎಂದು ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಿಂತಕರು ಹಾಗೂ ಸಂಸ್ಥೆಗಳು ನಿರಂತರವಾಗಿ ಹೇಳುತ್ತಾ ಬಂದಿವೆ. ಭಾರತದಲ್ಲಿ ಈವರೆಗೆ ರಚನೆಯಾಗಿರುವ ಶಿಕ್ಷಣ ಆಯೋಗಗಳು ಮಕ್ಕಳಿಗೆ ಏನನ್ನು ಕಲಿಸಬೇಕು? ಏನನ್ನು ಕಲಿಸಬಾರದು ಎಂದು ಸ್ಪಷ್ಟವಾಗಿ ಹೇಳಿವೆ. ಕಲಿಸಬೇಕಾದ ಸಂಗತಿಗಳಲ್ಲಿ ಮುಖ್ಯವಾಗಿ ಸಂವಿಧಾನದ ಆಶಯಗಳು ಇರಬೇಕು ಮತ್ತು ಕಲಿಸಬಾರದ ಸಂಗತಿಗಳಲ್ಲಿ ಮುಖ್ಯವಾಗಿ ಹಿಂಸೆ, ದ್ವೇಷ, ಅಸಹನೆ, ಅವೈಜ್ಞಾನಿಕತೆ, ಮತಾಂಧತೆ, ಮೌಢ್ಯ, ತಾರತಮ್ಯ ಗುಣಗಳು ಇತ್ಯಾದಿಗಳನ್ನು ಯಾವ ಕಾರಣಕ್ಕೂ ಕಲಿಸಬಾರದೆಂದು ಒತ್ತಿ ಹೇಳಲಾಗಿದೆ.

ಪಠ್ಯಗಳನ್ನು ಕಿತ್ತು ಹಾಕಿರುವುದು ಅಕ್ಷಮ್ಯ : ಹಾಗಿದ್ದರೆ, ಕಲಿಸಬೇಕಾದ ಸಂವಿಧಾನದ ಆಶಯಗಳೇನು?. ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ರೂಪಿಸಬೇಕಾದರೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಪ್ರತಿಪಾದನೆ ಮಾಡುವಂಥ ನಿಲುವುಗಳನ್ನು ಮಕ್ಕಳಿಗೆ ಕಲಿಸಬೇಕು. ಹಿಂದಿನ ಪಠ್ಯದಿಂದ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಪ್ರಾದೇಶಿಕ ಒಳಗೊಳ್ಳುವಿಕೆಯ ತತ್ವಗಳನ್ನು ಪ್ರತಿಪಾದಿಸುವ ಪಠ್ಯಗಳನ್ನು ಕಿತ್ತು ಹಾಕಿರುವುದು ಅಕ್ಷಮ್ಯ. ಹೊಸದಾಗಿ ಸೇರಿಸಲಾದ ಪಾಠಗಳು ಬಿಜೆಪಿ-ಸಂಘಪರಿವಾರದ ಸಿದ್ಧಾಂತಕ್ಕೆ ಪೂರಕವಾದ ರೀತಿಯಲ್ಲಿ ಇರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

ದಲಿತರ ಅಸ್ಮಿತೆಯನ್ನು ನಿರಾಕರಿಸುವುದಾಗಿದೆ : ಪ್ರಸ್ತುತ ಬಿಜೆಪಿ ಸರ್ಕಾರ ರೋಹಿತ್ ಚಕ್ರತೀರ್ಥರ ಮೂಲಕ ಮಾಡಿಸಿರುವ ಅಧ್ವಾನಗಳನ್ನು ಹಲವು ರೀತಿಯಲ್ಲಿ ಗಮನಿಸಬೇಕಾಗಿದೆ. ಈ ಪಠ್ಯ ಪುಸ್ತಕ ಪರಿಷ್ಕರಣೆಯು ಸಂವಿಧಾನ ವಿರೋಧಿ ಆಶಯಗಳುಳ್ಳದ್ದಾಗಿದೆ. ಅಪತಾಂತ್ರಿಕ ನಿಲುವಿನದ್ದಾಗಿದೆ. ಬ್ರಾಹ್ಮಣ ಶ್ರೇಷ್ಠತೆಯನ್ನು ಎತ್ತಿ ಹಿಡಿದು ಶೂದ್ರ, ದಲಿತರ ಅಸ್ಮಿತೆಯನ್ನು ನಿರಾಕರಿಸುವುದಾಗಿದೆ ಅಥವಾ ಕೀಳುಗಳೆಯುವುದಾಗಿದೆ.

ಬರಗೂರು ರಾಮಚಂದ್ರಪ್ಪ ಸಮಿತಿಯ ನೇತೃತ್ವದಲ್ಲಿ ಇತಿಹಾಸ ತಜ್ಞರು ಬರೆದಿದ್ದ ಇತಿಹಾಸದ ಪಾಠಗಳಿಗೆ ವೈಜ್ಞಾನಿಕ ತಳಹದಿ ಇರುವುದರಿಂದ ಅವುಗಳನ್ನೇ ಮುಂದುವರಿಸಬೇಕು. ಜೊತೆಗೆ ಕನ್ನಡಿಗರಿಂದ ಬಂದಿರುವ ಪ್ರತಿರೋಧಗಳಿಂದಾಗಿ ಈಗಾಗಲೇ ಮುದ್ರಿಸಲಾಗಿದ್ದ ಪುಸ್ತಕಗಳನ್ನು ಹಿಂಪಡೆದು ಕೆಲವು ಸಂಗತಿಗಳನ್ನು ಮರು ಮುದ್ರಿಸಲಾಗಿದೆ ಎಂಬ ಮಾಹಿತಿ ಇದೆ.

ನಾಡಿನ ಜನರ ಕ್ಷಮೆ ಕೇಳಬೇಕು : ಹಾಗಾಗಿ, ಇಷ್ಟೂ ಹಣವನ್ನು ಸಂಬಂಧಿಸಿದವರಿಂದ ವಸೂಲು ಮಾಡಬೇಕು. ಪಠ್ಯ ಪುಸ್ತಕಗಳ ಬಗ್ಗೆ ಉದ್ಭವಿಸಿರುವ ಎಲ್ಲ ಅಂಶಗಳ ಕುರಿತು ಸರ್ಕಾರ ನಿಖರ ಮಾಹಿತಿಯನ್ನು ಜನರ ಮುಂದೆ ಮಂಡಿಸಬೇಕು. ಸುಳ್ಳು ಹೇಳುವುದಿಲ್ಲವೆಂದು, ಪಕ್ಷಪಾತ ಮಾಡುವುದಿಲ್ಲವೆಂದು ಹೇಳಿ ಅಧಿಕಾರ ಸ್ವೀಕರಿಸಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ನಾಡಿನ ಜನರಿಗೆ ಸುಳ್ಳು ಹೇಳಿರುವ ಸಚಿವರನ್ನು ವಜಾ ಮಾಡಬೇಕು. ಮಾಧ್ಯಮಗಳಿಗೆ ಸುಳ್ಳು ಮಾಹಿತಿ ಬಿಡುಗಡೆ ಮಾಡಿರುವ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಬೇಷರತ್ತಾಗಿ ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಓದಿ: ನಮ್ಮ ಗಾಳಕ್ಕೆ ಮರಿಮೀನಾದ್ರೂ ಬಿತ್ತಲ್ಲ ಎಂಬ ಸಂತೋಷ ಇದೆ.. ಡಿಕೆಶಿ ವ್ಯಾಖ್ಯಾನದ ಹಿಂದಿದೆ ಕಾರಣ..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.