ಬೆಂಗಳೂರು: ಸಹಾಯಕ ಅಭಿಯಂತರರು ಹಾಗೂ ಕಿರಿಯ ಅಭಿಯಂತರರ ಹುದ್ದೆಗಳ, ತಾಂತ್ರಿಕ ಪರೀಕ್ಷೆಯನ್ನು ನಡೆಸುವಂತೆ ಆದೇಶ ನೀಡಬೇಕೆಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನಸಭೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಅವರು, 2019ನೇ ಸಾಲಿನ ನೇಮಕಾತಿ ಅಧಿಸೂಚನೆಯಂತೆ, ಸಹಾಯಕ ಅಭಿಯಂತರರು ಹಾಗೂ ಕಿರಿಯ ಅಭಿಯಂತರರ ಹುದ್ದೆಗಳಿಗೆ ಕನ್ನಡ ಪರೀಕ್ಷೆಗಳು ಈಗಾಗಲೇ ನಡೆದಿದ್ದು, ತಾಂತ್ರಿಕ ಪರೀಕ್ಷೆಗಳನ್ನು ಈವರೆಗೆ ನಡೆಸಿಲ್ಲ. ಈ ಕೂಡಲೇ ಸರ್ಕಾರ ಸಂಬಂಧ ಪಟ್ಟವರಿಗೆ ತಾಂತ್ರಿಕ ಪರೀಕ್ಷೆಯನ್ನು ನಡೆಸುವಂತೆ ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
-
2019ನೇ ಸಾಲಿನ ನೇಮಕಾತಿ ಅಧಿಸೂಚನೆಯಂತೆ ಸಹಾಯಕ ಅಭಿಯಂತರರು ಹಾಗೂ ಕಿರಿಯ ಅಭಿಯಂತರರ ಹುದ್ದೆಗಳಿಗೆ ಕನ್ನಡ ಪರೀಕ್ಷೆಗಳು ಈಗಾಗಲೇ ನಡೆದಿದ್ದು, ತಾಂತ್ರಿಕ ಪರೀಕ್ಷೆಗಳನ್ನು ಈ ವರೆಗೆ ನಡೆಸಿಲ್ಲ. ಈ ಕೂಡಲೇ ಸರ್ಕಾರ ಸಂಬಂಧಪಟ್ಟವರಿಗೆ ತಾಂತ್ರಿಕ ಪರೀಕ್ಷೆಯನ್ನು ನಡೆಸುವಂತೆ ಆದೇಶ ನೀಡಬೇಕೆಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ. pic.twitter.com/qxlEp1oqY3
— Siddaramaiah (@siddaramaiah) September 9, 2020 " class="align-text-top noRightClick twitterSection" data="
">2019ನೇ ಸಾಲಿನ ನೇಮಕಾತಿ ಅಧಿಸೂಚನೆಯಂತೆ ಸಹಾಯಕ ಅಭಿಯಂತರರು ಹಾಗೂ ಕಿರಿಯ ಅಭಿಯಂತರರ ಹುದ್ದೆಗಳಿಗೆ ಕನ್ನಡ ಪರೀಕ್ಷೆಗಳು ಈಗಾಗಲೇ ನಡೆದಿದ್ದು, ತಾಂತ್ರಿಕ ಪರೀಕ್ಷೆಗಳನ್ನು ಈ ವರೆಗೆ ನಡೆಸಿಲ್ಲ. ಈ ಕೂಡಲೇ ಸರ್ಕಾರ ಸಂಬಂಧಪಟ್ಟವರಿಗೆ ತಾಂತ್ರಿಕ ಪರೀಕ್ಷೆಯನ್ನು ನಡೆಸುವಂತೆ ಆದೇಶ ನೀಡಬೇಕೆಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ. pic.twitter.com/qxlEp1oqY3
— Siddaramaiah (@siddaramaiah) September 9, 20202019ನೇ ಸಾಲಿನ ನೇಮಕಾತಿ ಅಧಿಸೂಚನೆಯಂತೆ ಸಹಾಯಕ ಅಭಿಯಂತರರು ಹಾಗೂ ಕಿರಿಯ ಅಭಿಯಂತರರ ಹುದ್ದೆಗಳಿಗೆ ಕನ್ನಡ ಪರೀಕ್ಷೆಗಳು ಈಗಾಗಲೇ ನಡೆದಿದ್ದು, ತಾಂತ್ರಿಕ ಪರೀಕ್ಷೆಗಳನ್ನು ಈ ವರೆಗೆ ನಡೆಸಿಲ್ಲ. ಈ ಕೂಡಲೇ ಸರ್ಕಾರ ಸಂಬಂಧಪಟ್ಟವರಿಗೆ ತಾಂತ್ರಿಕ ಪರೀಕ್ಷೆಯನ್ನು ನಡೆಸುವಂತೆ ಆದೇಶ ನೀಡಬೇಕೆಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ. pic.twitter.com/qxlEp1oqY3
— Siddaramaiah (@siddaramaiah) September 9, 2020
ಪ್ರತಿ ದಿನ ಒಂದಲ್ಲ ಒಂದು ವಿಷಯ ಇಟ್ಟುಕೊಂಡು ಒಂದೆರಡು ಪತ್ರ ಬರೆಯುತ್ತಲೇ ಇರುವ ಸಿದ್ದರಾಮಯ್ಯ, ರೈತರು, ಶ್ರಮಿಕರು, ಉದ್ಯೋಗಿಗಳ ಪರ ಕಾಳಜಿ ಹೊಂದಿ ಪತ್ರಗಳನ್ನು ಬರೆಯುತ್ತಿದ್ದಾರೆ. ಇದಕ್ಕೆ ಸರ್ಕಾರದಿಂದ ಯಾವ ರೀತಿಯ ಸ್ಪಂದನೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಸೆಪ್ಟೆಂಬರ್ 21 ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಆ ಸಂದರ್ಭ ತಾವು ಬರೆದ ಪತ್ರಗಳ ಬಗ್ಗೆ ಸರ್ಕಾರಕ್ಕೆ ಅವರು ಸಮಜಾಯಿಷಿ ಕೇಳುವ ಸಾಧ್ಯತೆ ಇದೆ.