ಬೆಂಗಳೂರು: ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಜನರಿಗೆ ನೀಡಿರುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಆನ್ಸರ್ ಮಾಡಿ ನರೇಂದ್ರ ಮೋದಿ' ಎಂಬ ಟ್ಯಾಗ್ ಲೈನ್‌ನಡಿ ಸರಣಿ ಟ್ವೀಟ್ ಮಾಡಿರುವ ಅವರು, ಮೋದಿ ನೀಡಿದ್ದ ವಿವಿಧ ಭರವಸೆಗಳನ್ನು ನೆನಪಿಸಿ, ಅದರ ಪ್ರಗತಿ ಏನಿದೆ ಎಂಬುದನ್ನು ತಿಳಿಸಿ ಎಂದಿದ್ದಾರೆ.
ನಿಮ್ಮ ಮಾತು: 2022ನೇ ವರ್ಷಕ್ಕೆ ರೈತರ ಆದಾಯ ದುಪ್ಪಟ್ಟು. ಜನರ ಮಾತು: ರೈತರ ಸಾಲ ಹೆಚ್ಚುತ್ತಿದೆ, ಆದಾಯ ಕುಸಿಯುತ್ತಿದೆ. ಇದೇನಾ ನಿಮ್ಮ ಕಿಸಾನ್ ಕೆ ಮಾನ್, ದೇಶ್ ಕಾ ಸಮ್ಮಾನ್ ನರೇಂದ್ರ ಮೋದಿ? ಎಂದು ಕೇಳಿದ್ದಾರೆ.
-
ನಿಮ್ಮ ಮಾತು:
— Siddaramaiah (@siddaramaiah) September 1, 2022 " class="align-text-top noRightClick twitterSection" data="
2022ನೇ ವರ್ಷಕ್ಕೆ ರೈತರ ಆದಾಯ ದುಪ್ಪಟ್ಟು.
ಜನರ ಮಾತು:
ರೈತರ ಸಾಲ ಹೆಚ್ಚುತ್ತಿದೆ, ಆದಾಯ ಕುಸಿಯುತ್ತಿದೆ.
ಇದೆನಾ ನಿಮ್ಮ ಕಿಸಾನ್ ಕೆ ಮಾನ್, ದೇಶ್ ಕಾ ಸಮ್ಮಾನ್ @narendramodi? #AnswerMadiModi pic.twitter.com/rWWf4ZFheV
">ನಿಮ್ಮ ಮಾತು:
— Siddaramaiah (@siddaramaiah) September 1, 2022
2022ನೇ ವರ್ಷಕ್ಕೆ ರೈತರ ಆದಾಯ ದುಪ್ಪಟ್ಟು.
ಜನರ ಮಾತು:
ರೈತರ ಸಾಲ ಹೆಚ್ಚುತ್ತಿದೆ, ಆದಾಯ ಕುಸಿಯುತ್ತಿದೆ.
ಇದೆನಾ ನಿಮ್ಮ ಕಿಸಾನ್ ಕೆ ಮಾನ್, ದೇಶ್ ಕಾ ಸಮ್ಮಾನ್ @narendramodi? #AnswerMadiModi pic.twitter.com/rWWf4ZFheVನಿಮ್ಮ ಮಾತು:
— Siddaramaiah (@siddaramaiah) September 1, 2022
2022ನೇ ವರ್ಷಕ್ಕೆ ರೈತರ ಆದಾಯ ದುಪ್ಪಟ್ಟು.
ಜನರ ಮಾತು:
ರೈತರ ಸಾಲ ಹೆಚ್ಚುತ್ತಿದೆ, ಆದಾಯ ಕುಸಿಯುತ್ತಿದೆ.
ಇದೆನಾ ನಿಮ್ಮ ಕಿಸಾನ್ ಕೆ ಮಾನ್, ದೇಶ್ ಕಾ ಸಮ್ಮಾನ್ @narendramodi? #AnswerMadiModi pic.twitter.com/rWWf4ZFheV
ನಿಮ್ಮ ಮಾತು: ರೈತರಿಗೆ ಲಾಭದಾಯಕ ಬೆಂಬಲ ಬೆಲೆ. ಜನರ ಮಾತು: ಎಂ.ಎಸ್.ಪಿ ಲೆಕ್ಕದಲ್ಲಿಯೇ ಮೋಸ, ಎಂ.ಎಸ್.ಪಿ ದರದಲ್ಲಿ ಬೆಳೆ ಖರೀದಿಸುವವರೇ ಇಲ್ಲ. ರೈತರಿಗೆ ಅಚ್ಚೇ ದಿನ್ ಯಾವಾಗ ನರೇಂದ್ರ ಮೋದಿಯವರೇ? ಎಂದು ಕೇಳಿದ್ದಾರೆ. ನಿಮ್ಮ ಮಾತು: ಸಣ್ಣ ಕೈಗಾರಿಕೆಗಳಿಗೆ ರೂ.6000 ಕೋಟಿ ನೆರವು’. ಜನರ ಮಾತು: ಎರಡು ವರ್ಷಗಳಲ್ಲಿ 754 ಕೈಗಾರಿಕೆಗಳಿಗೆ ಬೀಗ, 44,000 ಉದ್ಯೋಗ ನಷ್ಟ. ಎಲ್ಲಿದೆ ನಿಮ್ಮ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನರೇಂದ್ರ ಮೋದಿ?
ನಿಮ್ಮ ಮಾತು: 2022ಕ್ಕೆ ಎಲ್ಲರ ಮನೆಗೆ ವಿದ್ಯುತ್. ಜನರ ಮಾತು: ದಿನಕ್ಕೆ ಕನಿಷ್ಠ 10 ಗಂಟೆಯೂ ವಿದ್ಯುತ್ ಇಲ್ಲ. ಮಹಿಳೆಯರು ಮಸಾಲೆ ಅರೆಯಲು ವಿದ್ಯುತ್ ಕಚೇರಿಗೆ ಹೋಗಿದ್ದರಂತೆ. ಇದಕ್ಕಾಗಿಯೇ ಜನರಿಗೆ ಕ್ಯಾಂಡಲ್ ಹಚ್ಚಲು ಕರೆ ನೀಡಿದ್ದಾ ನರೇಂದ್ರ ಮೋದಿಯವರೇ? ಎಂದು ಕೇಳಿದ್ದಾರೆ. ನಿಮ್ಮ ಮಾತು: ಮುಖ್ಯಮಂತ್ರಿಗಳ ಸುಪರ್ದಿಯಲ್ಲಿಯೇ 24/7 ಭ್ರಷ್ಟಾಚಾರ ವಿರೋಧಿ ಸಹಾಯವಾಣಿ. ಜನರ ಮಾತು: 40% ಕಮಿಷನ್ ಬಗ್ಗೆ ಗುತ್ತಿಗೆದಾರರು ಪ್ರಧಾನಿ ಕಚೇರಿಗೆ ಪತ್ರ ಬರೆದರೂ ಉತ್ತರ ಇಲ್ಲ. ಇದೆನಾ ನಿಮ್ಮ "ನಾ ಖಾವೂಂಗಾ, ನಾ ಖಾನೆ ದೂಂಗಾ" ನರೇಂದ್ರ ಮೋದಿ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: 16 ದಿನ ಬಿಜೆಪಿಯಿಂದ ಸೇವಾ ಪಾಕ್ಷಿಕ