ETV Bharat / state

ನನ್ನ ಮತ್ತು ಡಿಕೆಶಿ ನಡುವೆ ಬಿರುಕಿದೆ ಎಂಬ ತಪ್ಪು ಮಾಹಿತಿಯನ್ನು ಜನರಿಗೆ ನೀಡಲಾಗುತ್ತಿದೆ: ಸಿದ್ದರಾಮಯ್ಯ - ದಾವಣಗೆರೆಯಲ್ಲಿ ಸಿದ್ದರಾಮೋತ್ಸವ

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ರಾಜ್ಯದ ಸಮಸ್ತ ಜನತೆಗೆ ಧನ್ಯವಾದ ಸಲ್ಲಿಸಿದರು. ಜೊತೆಗೆ, ಸೋನಿಯಾ ಗಾಂಧಿ ಹಾಗು ರಾಹುಲ್​ ಗಾಂಧಿ ಅವರಿಗೂ ಧನ್ಯವಾದ ಅರ್ಪಿಸಿದರು.

Siddaramaiah speak in davanagere Siddaramotsava
ರಾಹುಲ್​​ ಗಾಂಧಿ ಅಭಿನಂದಿಸಿದ ಸಿದ್ದರಾಮಯ್ಯ
author img

By

Published : Aug 3, 2022, 6:28 PM IST

Updated : Aug 3, 2022, 7:23 PM IST

ದಾವಣಗೆರೆ: ಬೇರೆ ಪಕ್ಷದಿಂದ ಬಂದರೂ ಸಹ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ನನ್ನ ಮುಖ್ಯಮಂತ್ರಿ ಮಾಡಿ ಆಡಳಿತ ನಡೆಸಲು ಸಂಪೂರ್ಣ ಸಹಕಾರ ನೀಡಿದರು. ನನ್ನ ಅಧಿಕಾರ ಅವಧಿಯಲ್ಲಿ ಐದು ವರ್ಷಗಳ ಕಾಲ ಬಂಡೆಯಂತೆ ನಿಂತು ಬೆಂಬಲ ನೀಡಿದ್ದಾರೆ. 75 ವರ್ಷಗಳ ಸಕ್ರಿಯ ರಾಜಕಾರಣದಲ್ಲಿ 50 ವರ್ಷಗಳಿಂದ ಜನರೊಂದಿಗೆ ಇದ್ದೇನೆ. ಇಂದಿನವರೆಗೂ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಸಮಾರಂಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಇಷ್ಟು ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ ಅಭಿಮಾನಿಗಳು ಹಾಗೂ ಹಿತೈಷಿಗಳ ಒತ್ತಡಕ್ಕೆ ಮಣಿದು 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆಯನ್ನು ಬಯಸಲು ಇಚ್ಚಿಸುತ್ತೇನೆ. ಅಭಿಮಾನದಿಂದ ಸಾಕಷ್ಟು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ರಾಹುಲ್​​ ಗಾಂಧಿಗೆ ಅಭಿನಂದನೆ: ಕಾರ್ಯಕ್ರಮಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ ಕೋಟಿ ಕೋಟಿ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ನಾನು ಬೇರೆ ಪಕ್ಷದಿಂದ ಬಂದವನಾದರೂ ಸಹ ಕಾಂಗ್ರೆಸ್ ಪಕ್ಷ ಸೇರಿದಾಗಿನಿಂದಲೂ ನನ್ನ ಮೇಲೆ ಅಪಾರವಾದ ವಿಶ್ವಾಸ ಇಟ್ಟುಕೊಂಡು ಬಂದಿದ್ದಾರೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ನಾನು ಮುಖ್ಯಮಂತ್ರಿ ಆಗಲು ಕಾರಣೀಕರ್ತರು ಎಂದು ಸಿದ್ದರಾಮಯ್ಯ ಹೇಳಿದರು.

ಜನಶಕ್ತಿ ದೊಡ್ಡದು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಶಕ್ತಿ ಬಹಳ ದೊಡ್ಡದು. ಜನಶಕ್ತಿಯ ಆಶೀರ್ವಾದ ಇಲ್ಲದೆ ಹೋದರೆ ಯಾರೂ ಸಹ ದೀರ್ಘಕಾಲ ರಾಜಕೀಯ ಮಾಡಲು ಸಾಧ್ಯವಿಲ್ಲ. ಜನಸೇವೆ ಮಾಡಲು ಸಾಧ್ಯವಾಗಲ್ಲ. ಜನರ ನಿರಂತರ ಪ್ರೀತಿ ವಿಶ್ವಾಸ ಆದರದಿಂದ ಇಂದು ನಾನು ಜನಪ್ರತಿನಿಧಿಯಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿ ಆಗಿ ನಾಡಿನ ಜನರ ಸೇವೆಯನ್ನು ಮಾಡುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ರಾಜ್ಯದ ಸಮಸ್ತ ಜನತೆಗೆ ಇದಕ್ಕಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ. ನಾನು ದೈಹಿಕವಾಗಿ ಎಲ್ಲಿಯವರೆಗೂ ಸಕ್ರಿಯವಾಗಿರುತ್ತೇನೆಯೋ ಅಲ್ಲಿಯವರೆಗೂ ರಾಜಕೀಯದಲ್ಲಿದ್ದು, ನಾಡಿನ ಜನರ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ನುಡಿದರು.

ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ: ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಬಿರುಕಿದೆ ಎಂದು ತಪ್ಪು ಮಾಹಿತಿಯನ್ನು ಜನರಿಗೆ ನೀಡುವ ಕಾರ್ಯವನ್ನು ಸಾಕಷ್ಟು ಜನ ಮಾಡುತ್ತಿದ್ದಾರೆ. 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲು ಡಿಕೆಶಿ ವಿರೋಧ ಇದೆ ಎಂದು ಬಿಂಬಿಸುತ್ತಿದ್ದಾರೆ. ಇದು ಅವರ ಭ್ರಮೆ ಹಾಗೂ ಕೆಲ ಮಾಧ್ಯಮಗಳ ಸೃಷ್ಟಿ. ನಾನು ಮತ್ತು ಶಿವಕುಮಾರ್ ಒಟ್ಟಾಗಿದ್ದೇವೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈಗಿರುವುದು ಭ್ರಷ್ಟ ಸರ್ಕಾರ: ಇಂದು ನಮ್ಮ ಮುಂದಿರುವ ಏಕೈಕ ಸವಾಲು ರಾಜ್ಯದಲ್ಲಿ ಅಧಿಕಾರದಲ್ಲಿರುವ ಭ್ರಷ್ಟ ಹಾಗೂ ಕೋಮುವಾದಿ ಸರ್ಕಾರವನ್ನು ತೊಲಗಿಸುವುದು. ಈ ಜನಪೀಡಕ ಸರ್ಕಾರವನ್ನು ಕಿತ್ತೊಗೆದು ರಾಹುಲ್ ಗಾಂಧಿ ನಾಯಕತ್ವದಲ್ಲಿ ಮತ್ತೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಆಶಯ. ಇದಕ್ಕೆ ಜನರ ಆಶೀರ್ವಾದ ಬೇಕು. ನಾನು 44 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ಇದ್ದೇನೆ. ಈಗಿರುವ ಬಿಜೆಪಿ ಸರ್ಕಾರದಂಥ ಭ್ರಷ್ಟ, ಕೋಮುವಾದಿ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿರಲಿಲ್ಲ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ-ಡಿಕೆಶಿ ನಾಯಕತ್ವದಲ್ಲಿ 'ಭಾಗ್ಯ' ಯೋಜನೆಗಳನ್ನು ಕೊಡುತ್ತೇವೆ: ರಾಹುಲ್​ ಗಾಂಧಿ ಭರವಸೆ

ಬಿಜೆಪಿಗೆ ಎಚ್ಚರಿಕೆ: ಪ್ರಜಾಪ್ರಭುತ್ವ ಇಂದು ಸಂಕಷ್ಟದಲ್ಲಿದೆ. ಸಂವಿಧಾನಕ್ಕೆ ರಕ್ಷಣೆ ಇಲ್ಲ. ಭಾರತೀಯ ಜನತಾ ಪಕ್ಷದವರು ಸ್ವಾತಂತ್ರ್ಯ ತಂದುಕೊಟ್ಟ ಹೋರಾಟದಲ್ಲಿ ಯಾವುದೇ ಪಾತ್ರ ನಿರ್ವಹಿಸಿಲ್ಲ. ಅವರು ಅಧಿಕಾರಕ್ಕೆ ಬಂದಿರುವುದು ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು ಹಾಗೂ ಲೂಟಿ ಹೊಡೆಯಬೇಕು ಎಂಬ ಉದ್ದೇಶಕ್ಕೆ. ಈ ದೇಶದ ಸಂವಿಧಾನವನ್ನು ಬದಲಾಯಿಸಬೇಕು ಎಂಬುದು ಅವರ ಆಶಯವಾಗಿದೆ. ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಒಂದು ಎಚ್ಚರಿಕೆ ನೀಡಲು ಬಯಸುತ್ತೇನೆ. ನಿಮ್ಮಿಂದ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದರು.

ಸಂವಿಧಾನವನ್ನು ಬದಲಾಯಿಸಲು ಈ ನಾಡಿನ ಜನ ಬಿಡಲ್ಲ. ನಿಮ್ಮ ಕನಸು ನನಸಾಗಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿಯವರು ದೇಶದ ಆಶಾಕಿರಣ. ದೇಶದಲ್ಲಿ ಇಂದು ಎದ್ದು ಕಾಡುತ್ತಿರುವ ಸಮಸ್ಯೆಗಳಿಗೆ ರಾಹುಲ್ ಗಾಂಧಿ ಒಬ್ಬರೇ ಪರಿಹಾರ ಎಂದು ಹೇಳಿದರು.

Last Updated : Aug 3, 2022, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.