ಬೆಂಗಳೂರು: ರವಿ ಗಾಣಿಗ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಎರಡೂವರೆ ವರ್ಷಗಳ ಬಳಿಕ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ. ನಾನು ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಇರ್ತಾರೆ ಅಂತ ನಾನು ಹೇಳ್ತೇನೆ ಎಂದು ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲವರು ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಸಿಎಂ ಆಗಿರಬೇಕು ಎಂದುಕೊಂಡರೆ, ಇನ್ನೂ ಕೆಲವು ಎರಡೂವರೆ ವರ್ಷಗಳ ಬಳಿಕೆ ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಅಂದುಕೊಳ್ಳುತ್ತಾರೆ. ಹೀಗೆ ಯಾರು ಸಿಎಂ ಆಗಬೇಕು ಎನ್ನುವುದರ ಬಗ್ಗೆ ಒಬೊಬ್ಬರದ್ದು ಒಂದೊಂದು ರೀತಿ ಅಭಿಪ್ರಾಯ ಇರುತ್ತೆ. ಇದು ಅವರವರ ಅಭಿಪ್ರಾಯ ಅಷ್ಟೇ. ಆದರೆ ಎಲ್ಲಾ ಅಂತಿಮ ನಿರ್ಣಯವನ್ನು ಹೈಕಮಾಂಡ್ ಮಾಡುತ್ತದೆ. ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ, ನನ್ನ ಅಭಿಪ್ರಾಯ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರಬೇಕು ಅನ್ನೋದು ಎಂದರು.
ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಬದಲಾವಣೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, ಸಿಎಂ ಬದಲಾವಣೆ ಅಥವಾ ಅವರನ್ನೇ ಮುಂದುವರಿಸುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಮುಖ್ಯಮಂತ್ರಿ ಆಯ್ಕೆಯಿಂದ ಹಿಡಿದು ಎಲ್ಲವೂ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಹೈಕಮಾಂಡ್ ಹಂತದಲ್ಲಿ ಏನು ಚರ್ಚೆ ಆಗಿದೆ ಎನ್ನುವುದು ನಮಗೆ ಗೊತ್ತಿಲ್ಲ ಎಂದರು ಹೇಳಿದರು.
ಆಪರೇಷನ್ ಕಮಲ ಮಾತ್ರವಲ್ಲ, ಆಪರೇಷನ್ ಹಸ್ತ ಸಹ ಆಗಲಿದೆ: ಬಿಜೆಪಿಯವರು ಆಪರೇಷನ್ ಕಮಲ ಮಾಡಿದ್ರೆ, ಕಾಂಗ್ರೆಸ್ ಏನೂ ಕೈ ಕಟ್ಟಿ ಕೂರುವುದಿಲ್ಲ. ಅಪರೇಷನ್ ಹಸ್ತ ಸಹ ಆಗಲಿದೆ. ನಾವೇನು ಸುಮ್ಮನೆ ಕೂತಿದ್ದೇವಾ.? ಎಂದು ಪ್ರಶ್ನಿಸಿದರು.
ಜೆಡಿಎಸ್ನಿಂದ ಮೂರನೇ ಎರಡು ಭಾಗದಷ್ಟು ಶಾಸಕರು ಕಾಂಗ್ರೆಸ್ಗೆ ಬರ್ತಾರೆ. ಈ ಬಾರಿಯ ಲೋಕಸಭೆ ಚುನಾವಣೆಯ ಒಳಗೆ ಅವರೆಲ್ಲ ನಮ್ಮ ಮಕ್ಷಕ್ಕೆ ಬರುವ ಸಾಧ್ಯತೆ ಇದೆ. ಬಿಜೆಪಿ ಜೊತೆ ಜೆಡಿಎಸ್ ಅಲೈಯನ್ಸ್ನಿಂದ ಬೇಸತ್ತು ಅವರೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಯಾರೆಲ್ಲ ಬರುತ್ತಾರೆ ಎನ್ನುವ ಬಗ್ಗೆ ಹೇಳೋದಿಲ್ಲ. ಈಗಲೇ ಆ ಬಗ್ಗೆ ಹೇಳಿದರೆ ಅವರು ಜೆಡಿಎಸ್ನವರು ಎಚ್ಚೆತ್ತುಕೊಳ್ಳುತ್ತಾರೆ. ನೂರಕ್ಕೆ ನೂರು ಜೆಡಿಎಸ್ನಿಂದ ನಮ್ಮಲ್ಲಿಗೆ ಬರುತ್ತಾರೆ. ಅವರೇ ಬರುತ್ತೇವೆ ಅಂತಿದ್ದಾರೆ. ಅಲ್ಲಿ ಸೆಕ್ಯೂಲರ್ ಮೈಂಡ್ಸೆಟ್ ಇರುವ ಶಾಸಕರು ಬರುತ್ತೇವೆ ಅಂತಿದ್ದಾರೆ ಎಂದು ಬಹಿರಂಗ ಪಡಿಸಿದರು.
ಇದನ್ನೂ ಓದಿ : ಆಪರೇಷನ್ ಕಮಲ ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಲಿದೆ: ಸಚಿವ ಮಧು ಬಂಗಾರಪ್ಪ