ETV Bharat / state

ಸತ್ತವರ ಬಗ್ಗೆ ಮಾತನಾಡುವ ಬಿಜೆಪಿಗರಿಗೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ - siddaramaiah slams bjp on bitcoin case

ಬಿಜೆಪಿಯವರು ಸುಮ್ಮನೆ ಬಿಟ್​ಕಾಯಿನ್(Bitcoin scam)​ ಬಗ್ಗೆ ಮಾತಾಡ್ತಿದ್ದಾರಾ?. ಯಾಕೆ ಎಲ್ಲರೂ ರಿಯಾಕ್ಟ್ ಮಾಡ್ತಿದ್ದಾರೆ. ಏನೋ ಇದೆ ಅಂತ ಆಯ್ತಲ್ಲ. ಬೆಂಕಿ ಇಲ್ಲದೆ ಹೊಗೆಯಾಡುತ್ತಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Nov 18, 2021, 4:00 PM IST

Updated : Nov 18, 2021, 4:38 PM IST

ಬೆಂಗಳೂರು: ಸತ್ತವರ ಬಗ್ಗೆ ಮಾತನಾಡುವ ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Opposition leader Siddaramaiah) ಗರಂ ಆಗಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ ಅವರು, ತಮ್ಮ ಪುತ್ರ ರಾಕೇಶ್ ಈಗ ಬದುಕಿಲ್ಲ. ಅದರ ಬಗ್ಗೆ ಮಾತನಾಡಲ್ಲ. ಸತ್ತವರ ಬಗ್ಗೆ ಮಾತನಾಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದು ಬಿಜೆಪಿ ಟ್ವೀಟ್​ಗೆ ಪ್ರತಿಕ್ರಿಯೆ (Siddaramaiah reacts on bjp's tweet) ನೀಡಿದರು.

ಬಿಜೆಪಿ ಎಲ್ಲಾ ನಾಯಕರು ಬಿಟ್​ಕಾಯಿನ್​(Bitcoin scam) ವಿಚಾರವಾಗಿ ಪ್ರತಿಕ್ರಿಯೆ ನೀಡುವುದನ್ನು ನೋಡಿದರೆ, ಬೆಂಕಿ ಇಲ್ಲದೆ ಹೊಗೆ ಆಡುತ್ತಾ? ಎಂಬ ಮಾತು ನೆನಪಾಗುತ್ತದೆ ಎಂದು ಟಾಂಗ್ ನೀಡಿದರು.

ಬಿಜೆಪಿಯವರು ಸುಮ್ಮನೆ ಬಿಟ್​ಕಾಯಿನ್​ ಬಗ್ಗೆ ಮಾತಾಡ್ತಿದ್ದಾರಾ?. ಯಾಕೆ ಎಲ್ಲರೂ ರಿಯಾಕ್ಟ್ ಮಾಡ್ತಿದ್ದಾರೆ. ಏನೋ ಇದೆ ಅಂತ ಆಯ್ತಲ್ಲ. ಬೆಂಕಿ ಇಲ್ಲದೆ ಹೊಗೆಯಾಡುತ್ತಾ? ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುತ್ತಿರುವುದು ಯಾಕೆ? ಸುಪ್ರಿಂಕೋರ್ಟ್ ಹಾಲಿ ನ್ಯಾಯ ಮೂರ್ತಿಗಳಿಂದ ನ್ಯಾಯಾಂಗ ತನಿಖೆ ಆಗಲಿ. ಎಲ್ಲವೂ ತನಿಖೆ ಆಗಲಿ. 2013 ರಿಂದಲೂ ತನಿಖೆ ನಡೆಸಲಿ. ಆದರೆ, ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಯುವ ಕಾಂಗ್ರೆಸ್ ಚುನಾವಣಾ ವೆಬ್​ಸೈಟ್ ಹ್ಯಾಕ್ ಆಗಿದೆ ಎಂಬ ವಿಚಾರ ಕುರಿತು ಮಾತನಾಡಿ, ಶ್ರೀಕಿ ಬಳಸಿಕೊಂಡು ನಲ್ಪಾಡ್ ಹ್ಯಾಕ್ ಮಾಡಿಸಿದ್ದರು ಎಂಬ ಗೃಹ ಸಚಿವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಹ್ಯಾಕಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ತನಿಖೆ ನಡೆಸಲಿ, ಎಲ್ಲ ಸತ್ಯವೂ ಹೊರ ಬರಲಿದೆ ಎಂದರು.

ಶ್ರೀಕಿ ಬಂಧಿಸಿದಾಗ ಗೃಹ ಸಚಿವರಾಗಿದ್ದವರು ಬೊಮ್ಮಾಯಿ ಅವರಲ್ಲವೇ?. ಶ್ರೀಕಿಯಿಂದ ಬಿಟ್ ಕಾಯಿನ್ ವರ್ಗಾವಣೆಗೆ ಪೊಲೀಸರು ವಾಲೆಟ್ ಮಾಡಿಕೊಂಡಿದ್ರು. ವಾಲೆಟ್​ಗೆ ವರ್ಗಾವಣೆಯಾದ 0.8 ಬಿಟ್ ಕಾಯಿನ್ ಏನಾಯ್ತು‌?. ಇದಕ್ಕೆ ಉತ್ತರ ಕೊಡಬೇಕು ಅವರು. ಅಧಿವೇಶ ಬರಲಿ. ಪಕ್ಷದಲ್ಲಿ ಚರ್ಚಿಸಿ ಬಿಟ್​ಕಾಯಿನ್ ಹಗರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಸಿಎಂ ಬೊಮ್ಮಾಯಿ ಅವರ ಪಾತ್ರವಿದೆ ಅಂತ ನಾನು ನೇರವಾಗಿ ಹೇಳಲ್ಲ. ತನಿಖೆ ನಡೆಯಬೇಕು. ಆಗಲೇ ಸತ್ಯ ಬಹಿರಂಗಗೊಳ್ಳಲಿದೆ. ನನ್ನ ಬಳಿ ದಾಖಲೆಗಳಿಲ್ಲ. ಆಧಾರ ಇಲ್ಲದೆ ನಾನು ಮಾತಾಡಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಜನಸ್ವರಾಜ್ ಯಾತ್ರೆಯಲ್ಲಿ ಕಾಂಗ್ರೆಸ್ ಬಣ ರಾಜಕೀಯದ ಬಗ್ಗೆ ಶೆಟ್ಟರ್ ವಾಗ್ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಯಲ್ಲಿರುವಷ್ಟು ಬಣ ರಾಜಕೀಯ ಎಲ್ಲೂ ಇಲ್ಲ. ಬಸವರಾಜ್ ಬೊಮ್ಮಾಯಿಗೂ, ಜಗದೀಶ್ ಶೆಟ್ಟರ್ ಅವರಿಗೂ ಆಗುತ್ತಾ? ಶೆಟ್ಟರ್ ಬಣ, ಬೊಮ್ಮಾಯಿ ಬಣ ಇಲ್ವಾ? ಎಂದ ಅವರು, ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮಾತನಾಡಿ, ಇಂದು ಸಂಜೆ ಅಥವಾ ನಾಳೆಯೊಳಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಓದಿ: Bitcoin: ತಾರಕಕ್ಕೇರಿದ ಬಿಜೆಪಿ, ಕಾಂಗ್ರೆಸ್ ಟ್ವೀಟ್ ವಾರ್: ಸಿದ್ದು ಪುತ್ರನ ಫೋಟೋ ಪ್ರಕಟಿಸಿ ಸರಣಿ ಪ್ರಶ್ನೆ ಕೇಳಿದ ಕೇಸರಿ ಪಡೆ!

Last Updated : Nov 18, 2021, 4:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.