ETV Bharat / state

ಚಾಣಕ್ಯ ವಿವಿಗೆ ನಿಯಮ ಮೀರಿ ಭೂಮಿ ನೀಡಿದ್ದರ ವಿರುದ್ಧ ಕಾನೂನು ಹೋರಾಟ: ಸಿದ್ದರಾಮಯ್ಯ

author img

By

Published : Sep 22, 2021, 12:37 PM IST

ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರ ಆತುರಾತುರವಾಗಿ ಚಾಣಕ್ಯ ವಿಶ್ವವಿದ್ಯಾಲಯ ಬಿಲ್​​ ಅನ್ನು ಧ್ವನಿಮತದಿಂದ ತಂದಿದೆ. ಚರ್ಚೆಗೆ ಅವಕಾಶ ನೀಡದೇ ಪಾಸ್ ಮಾಡಿಕೊಂಡಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.

siddaramaiah outrage on Chanakya university bill
ಚಾಣಕ್ಯ ವಿವಿ ವಿಧೇಯಕಕ್ಕೆ ಸಿದ್ದರಾಮಯ್ಯ ವಿರೋಧ

ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಭೂಮಿ ನೀಡುವ ವಿಧೇಯಕಕ್ಕೆ ಆತುರಾತುರವಾಗಿ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಿದ್ದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಚರ್ಚೆಗೆ ಅವಕಾಶ ನೀಡಿಲ್ಲ:

ವಿಧಾನಸೌಧದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮಂಗಳವಾರ ವಿಧಾನಸಭೆಯಲ್ಲಿ ಸರ್ಕಾರ ಆತುರದಿಂದ ಚಾಣಕ್ಯ ವಿಶ್ವವಿದ್ಯಾಲಯ ಬಿಲ್​​ ಅನ್ನು ಧ್ವನಿಮತದಿಂದ ತಂದಿದೆ. ಚರ್ಚೆಗೆ ಅವಕಾಶ ನೀಡದೇ ಮಸೂದೆ ಪಾಸ್ ಮಾಡಿಕೊಂಡಿದೆ. ಸೆಂಟರ್ ಫಾರ್ ಎಜುಕೇಶನ್ ಆ್ಯಂಡ್ ಸೋಶಿಯಲ್ ಸ್ಟಡೀಸ್ (ಸೆಸ್) ಅನ್ನುವ ಸಂಸ್ಥೆ ಇದನ್ನು ನಡೆಸುತ್ತಿದೆ. ಈ ಸಂಸ್ಥೆಯಲ್ಲಿರುವವರೆಲ್ಲ ಆರ್ ಎಸ್ ಎಸ್ ನವರು. ಇಲ್ಲಿ ವಿದ್ಯಾಸಂಸ್ಥೆಗೆ ಅಗತ್ಯವಿರುವ ಮೂಲಸೌಕರ್ಯ ಇಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ಪ್ರತಿಪಕ್ಷದ ಸದಸ್ಯರ ಸಭಾತ್ಯಾಗದ ನಡುವೆ ಚಾಣಕ್ಯ ವಿವಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ

ಈ ಸೆಸ್ ಸಂಸ್ಥೆಗೆ ಬಿಜೆಪಿ ಸರ್ಕಾರ ಕಳೆದ ಏಪ್ರಿಲ್26 ರಂದು ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಕೆಐಎಡಿಬಿಗೆ ಸೇರಿದ ಭೂಮಿ ನೀಡಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಹರಳೂರು ಎಂಬಲ್ಲಿ 116 ಎಕರೆ 16 ಗುಂಟೆ ಭೂಮಿ‌ ಮೀಸಲಿಟ್ಟಿದೆ. ಕೇವಲ 50 ಕೋಟಿ ರೂ.ಗೆ ಪರಭಾರೆ ಮಾಡಲು ಸಕಾ್ರ ತೀರ್ಮಾನಿಸಿದೆ. ಈ ಜಮೀನನ್ನು ಕೆಐಎಡಿಬಿಯವರು ರೈತರಿಂದ ವಶಪಡಿಸಿಕೊಂಡು, ಪರಿಹಾರ ಕೂಡ ವಿತರಿಸಿದೆ. ಭೂ ಸ್ವಾಧೀನಕ್ಕೆ 175 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದು 300-400 ಕೋಟಿ ರೂ. ಬೆಲೆಬಾಳುವ ಜಮೀನಾಗಿದೆ. ಸರ್ಕಾರ ಆರ್ ಎಸ್ ಎಸ್ ಗೆ ಬಳುವಳಿಯಾಗಿ ಈ ಭೂಮಿ ನೀಡಿದೆ ಎಂದು ಕಿಡಿಕಾರಿದರು.

ನಿಯಮ ಗಾಳಿಗೆ ತೂರಲಾಗಿದೆ:

ನಿಯಮಾವಳಿ ಪ್ರಕಾರ ಖಾಸಗಿ ವಿವಿ ಎಂದು ಘೋಷಿಸಿ ಅನುಮತಿ ನೀಡಿದ್ದರೆ ಅಭ್ಯಂತರ ಇಲ್ಲ. ಆದ್ರೆ ನಿಯಮ ಗಾಳಿಗೆ ತೂರಲಾಗಿದೆ. ನಿಬಂಧನೆಗೆ ಅನುಸಾರವಾಗಿ ಜಮೀನು ನೀಡಿದ್ದರೆ ನಮ್ಮ ತಕರಾರು ಇರಲಿಲ್ಲ. ನಿಗದಿತ ಬೆಲೆ ಇರುವಾಗ ಈ ತೀರ್ಮಾನ ಕೈಗೊಂಡಿದ್ದು ತಪ್ಪು. ಕೊರೊನಾ ಎರಡನೇ ಅಲೆ ಇರುವ ಸಂದರ್ಭದಲ್ಲಿ ಇಂತಹ ನಿರ್ಧಾರ ಕೈಗೊಳ್ಳಬಾರದಿತ್ತು ಎಂದರು.

ಇದು ಮನುವಾದಿಗಳ ವಿಶ್ವವಿದ್ಯಾಲಯ ಆಗಲಿದೆ. ಚಾಣಕ್ಯ ಕೂಡ ಮನುವಾದಿ ಕುಟುಂಬಕ್ಕೆ ಸೇರಿದವರಾಗಿದ್ದರು. ಚತುರ್ವರ್ಣ ಪದ್ಧತಿಯು ಮರು ಅಳವಡಿಕೆಯ ಹೈಯಾರ್ಕಿ ಮತ್ತೆ ಬರಲಿದೆ. ಶ್ರೇಣಿಕೃತ ವ್ಯವಸ್ಥೆ ಮತ್ತೆ ತರಲಾಗುತ್ತಿದೆ. ನಮ್ಮ ಸ್ಪೀಕರ್ ಸಹ ಇದಕ್ಕೆ ಬೆಂಬಲ ಕೊಡುತ್ತಾರೆ. ಬಹಳ ಒಳ್ಳೆಯ ವಿಚಾರ ಎಂದು ಐದಾರು ಬಿಲ್ ನಂತರ ಬರಬೇಕಾದ ಬಿಲ್ ಅನ್ನು ಮೊದಲೇ ತೆಗೆದುಕೊಂಡು ಚರ್ಚಿಸಿದ್ದಾರೆ. ಸ್ಪೀಕರ್ ಈ ವಿಚಾರದಲ್ಲಿ ಪಕ್ಷಪಾತ ಧೋರಣೆ ತೋರಿದ್ದಾರೆ. ಪಕ್ಷಾತೀತರಾಗಿ ಇರಬೇಕಿದ್ದವರು ಹೀಗೆ ನಡೆದುಕೊಂಡಿದ್ದು ಸರಿಯಲ್ಲ. ಇದು ಸ್ವಜನ ಪಕ್ಷಪಾತ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಭೂಮಿ‌ ವಾಪಸ್ ಪಡೆಯಬೇಕು:

ಬಿಲ್ ಪಾಸ್ ಆಗಿರಬಹುದು, ಆದರೆ ಇದಕ್ಕೆ ನೀಡಿದ ಭೂಮಿ‌ ವಾಪಸ್ ಪಡೆಯಬೇಕು. ಚಾಣಕ್ಯ ವಿವಿ ಸ್ಥಾಪನೆಗೆ ಸರ್ಕಾರ ಅವಕಾಶ ನೀಡಬಾರದು. ಮನುವಾದಿಗಳಿಗೆ ನೀಡಲು ಹೊರಟ ಭೂಮಿಯ ನಿಲುವನ್ನು ಜನಪರವಾಗಿ ತೀವ್ರವಾಗಿ ವಿರೋಧಿಸುತ್ತೇನೆ. ನಮಗೆ ಚರ್ಚೆಗೆ ಅವಕಾಶ ನೀಡಬೇಕಿತ್ತು. ಆತುರ ಏನಿತ್ತು. ಅಂತಹ ತುರ್ತು ಸ್ಥಿತಿ ಏನಿತ್ತು ಎಂದು ಪ್ರಶ್ನಿಸಿದರು.

ಸಮಾಜಕ್ಕೆ, ಜನರಿಗೆ ತುರ್ತು ಅವಶ್ಯಕತೆ ಇತ್ತಾ? ಆರ್ ಎಸ್ ಎಸ್ ಬಲವಂತಕ್ಕೆ ಸ್ಪೀಕರ್ ಸಹ ಬೆಂಬಲ ನೀಡಿದ್ದು ಸರಿಯಲ್ಲ. ಇಂತಹ ವಿವಿ ಸ್ಥಾಪನೆ ಆಗಬಾರದು ಮತ್ತು ಬಹುಬೆಲೆಯ ಭೂಮಿ ನೀಡಿದ್ದನ್ನು ವಿರೋಧಿಸುತ್ತೇನೆ. ಇವರಿಗೆ ಖಾಸಗಿ ವಿವಿ ಮಾಡುವ ಅರ್ಹತೆ ಇಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಭವಾನಿಪುರ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಗೆಲುವು ಖಚಿತ: ಹೆಚ್​ಡಿಕೆ ವಿಶ್ವಾಸ

ನಮ್ಮ ಅವಧಿಯಲ್ಲಿ ಯಾವುದೇ ಸಂಸ್ಥೆಗೆ ನೀಡಿದ ಭೂಮಿಯನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ನೀಡಿಲ್ಲ. ಈ ಸರ್ಕಾರ ಕೈಗೊಂಡ ತೀರ್ಮಾನ ಪ್ರಶ್ನಿಸುತ್ತೇವೆ. ಕಾನೂನು ಹೋರಾಟ ನಡೆಸುತ್ತೇವೆ ಎಂದರು.

ಕೈಗಾರಿಕಾ ಭೂಮಿ ಏಕೆ?

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಇರುವ ನಿಯಮಾವಳಿ ಪರಿಶೀಲನೆ ಮಾಡಿದಾಗ ಈ ಸಂಸ್ಥೆಗೆ ನೀಡಿದ ಪರವಾನಗಿಯಲ್ಲಿ ಅದೆಲ್ಲದರ ಉಲ್ಲಂಘನೆ ಆಗಿದೆ. ಜಮೀನು ಕಡಿಮೆ ಬೆಲೆಗೆ ನೀಡುತ್ತಾರೆ ಎಂದು ಪಡೆಯುವುದು ಸರಿಯಲ್ಲ. ಏರ್​ಪೋರ್ಟ್ ಪಕ್ಕ ಏರೋಸ್ಪೇಸ್ ಗೋಸ್ಕರ ಖರೀದಿಸಿರುವ ಭೂಮಿಯನ್ನು ಶಿಕ್ಷಣ ಸಂಸ್ಥೆಗೆ ನೀಡಿದ್ದು ಸರಿಯಲ್ಲ. ಸಿದ್ದರಾಮಯ್ಯನವರಿಗೆ ಮಾಹಿತಿ ಇಲ್ಲವೇನೋ, ಇಲ್ಲಿ ಒಂದು ಎಕರೆ ಭೂಮಿಗೆ 10 ಕೋಟಿ ರೂ.ವರೆಗೂ ಮಾರುಕಟ್ಟೆ ಮೌಲ್ಯ ಇದೆ. ಮಾಗಡಿ ಬಳಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಭೂಮಿ ನೀಡಿದ್ದೀರಿ, ಅದರ ಪಕ್ಕದಲ್ಲೇ ಸರ್ಕಾರಿ ಭೂಮಿ ಇದ್ದರೆ ಈ ವಿವಿಗೆ ನೀಡಿ. ಕೈಗಾರಿಕೆಗಳು ಬಂದರೆ ನೀಡಬೇಕೆಂದು‌ಕೊಂಡುಕೊಂಡ ಭೂಮಿಯಲ್ಲಿ ಆರ್ ಎಸ್ ಎಸ್ ವಿಶ್ವವಿದ್ಯಾಲಯ ಸ್ಥಾಪನೆ ಏಕೆ? ನಾವು ಸಹ ಸಾಕಷ್ಟು ಭೂಮಿ ನೀಡಿದ್ದೇವೆ. ಸರ್ಕಾರಿ ಭೂಮಿ ರಾಜ್ಯದ ಯಾವುದೇ ಭಾಗದಲ್ಲಿದ್ದರೆ ನೀಡಿ. ಕೈಗಾರಿಕಾ ಭೂಮಿ ಬಳಕೆ ಸರಿಯಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.