ETV Bharat / state

ಮುಸ್ಲಿಂರಿಗೆ ಟಿಕೆಟ್ ಕೊಡಲ್ಲ ಅಂದ್ರೆ ಹೇಗೆ: ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಪ್ರಶ್ನೆ - ಸಿದ್ದರಾಮಯ್ಯ ಲೇಟೆಸ್ಟ್ ನ್ಯೂಸ್

ಇಂದಿನಿಂದ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು, ಇಂದು ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅತಿವೃಷ್ಟಿ ಸಂಬಂಧ ಚರ್ಚೆ ನಡೆಸಿದರು. ಈ ವೇಳೆ ಸಚಿವ ಈಶ್ವರಪ್ಪ ಹೇಳಿಕೆ ಕುರಿತಂತೆ ಚರ್ಚೆ ನಡೆಸಿದರು.

ಸಿದ್ದರಾಮಯ್ಯ
Siddaramaiah
author img

By

Published : Dec 7, 2020, 7:05 PM IST

Updated : Dec 7, 2020, 7:51 PM IST

ಬೆಂಗಳೂರು: ನೀವು ಕಾರ್ಯಕರ್ತರಿಗೆ ಟಿಕೆಟ್ ಕೊಡ್ತೇವೆ ಅನ್ನಿ, ಅದು ಬಿಟ್ಟು ಮುಸ್ಲಿಂರಿಗೆ ಟಿಕೆಟ್ ಕೊಡಲ್ಲ ಅಂದ್ರೆ ಹೇಗೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಅಧಿವೇಶನದಲ್ಲಿ ಸಿದ್ದರಾಮಯ್ಯ ಗುಡುಗು

ವಿಧಾನಸಭೆಯಲ್ಲಿ ಅತಿವೃಷ್ಟಿ ಸಂಬಂಧ ಚರ್ಚೆ ವೇಳೆ‌ ಮಾತನಾಡುತ್ತಾ, ನಾನು ಬೆಳಗಾವಿ ಉಪ ಚುನಾವಣೆಯಲ್ಲಿ ಮುಸ್ಲಿಂರಿಗೆ‌ ಟಿಕೆಟ್ ಕೊಡಲ್ಲ. ಹೀಗಂತ ಈಶ್ವರಪ್ಪ ಬೆಳಗಾವಿಯಲ್ಲಿ ಹೇಳ್ತಾರೆ ಎಂದು ವಿಷಯ ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಪತ್ರಕರ್ತರು ಆ ರೀತಿ ಪ್ರಶ್ನೆ ಕೇಳಬಹುದಾ ಎಂದು ಮರು ಪ್ರಶ್ನೆ ಹಾಕಿದರು. ಆಗ ಸಿದ್ದರಾಮಯ್ಯ, ಹೌದಪ್ಪಾ ನೀವು ಯಾರಿಗೆ ಬೇಕಾದರೂ ಟಿಕೆಟ್ ಕೊಡ್ರಪ್ಪಾ. ಅದಕ್ಕೂ ನಮಗೂ ಏನೂ ಸಂಬಂಧವಿಲ್ಲ ಎಂದು ತಿಳಿಸಿದರು.

ನಾವು ಕಾರ್ಯಕರ್ತರಿಗೆ ಟಿಕೆಟ್ ನೀಡ್ತೇವೆ ಎಂದು ಸಚಿವ ಮಾಧುಸ್ವಾಮಿ ಉತ್ತರಿಸಿದಾಗ, ಹಾಗೆ ಹೇಳಿ. ಅದು ಬಿಟ್ಟು ಮುಸ್ಲಿಂರಿಗೆ ಟಿಕೆಟ್ ಕೊಡಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.

ಅಧಿವೇಶನದಲ್ಲಿ ಸಿದ್ದರಾಮಯ್ಯ ಗುಡುಗು

ಓದಿ: ವಿಧಾನಸಭೆ ಅಧಿವೇಶನ: ಮೊದಲ ದಿನದ ಕಲಾಪದಲ್ಲಿ ಆಸನಗಳು ಖಾಲಿ ಖಾಲಿ!

ಈ ವೇಳೆ ಸಚಿವ ಆರ್.ಅಶೋಕ್, ಮುಸ್ಲಿಂ ಕಾರ್ಯಕರ್ತರು ಹೆಚ್ಚಾದರೆ ನಾವು ಟಿಕೆಟ್ ನೀಡುತ್ತೇವೆ. ಶಾಸಕರನ್ನಾಗಿಯೂ ಮಾಡುತ್ತೇವೆ. ಖಾದರ್ ಅವರನ್ನು ಕಳಿಸಿ ಟಿಕೆಟ್ ಕೊಡ್ತೇವೆ ಎಂದು ಕಾಲೆಳೆದರು. ಆಗ ಸಿದ್ದರಾಮಯ್ಯ, ನೀವು ಚೀಫ್ ಮಿನಿಸ್ಟರ್ ಮಾಡ್ತೇವೆ ಅಂದ್ರೂ ಅವರು ಬರಲ್ಲ ಎಂದು ತಿರುಗೇಟು ನೀಡಿದರು.

ನಿಗಮ ಮಂಡಳಿ ನೇಮಕಕ್ಕೆ ಕಿಡಿ:

ಕಷ್ಟದ ಕಾಲ ಅಂತೀರಾ, ಈಗ ನಿಗಮ ಮಂಡಳಿಗೆ ನೇಮಕ ಮಾಡಿದ್ದೀರಾ. ಅವರಿಗೆ ಕಾರು, ಕಚೇರಿ ಕೊಟ್ಟು ದುಂದು ವೆಚ್ಚ ಮಾಡುತ್ತಿದ್ದೀರಾ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಪ್ರವಾಹ ಸಂತ್ರಸ್ತರ ಗೋಳು ಕೇಳೋರ್ಯಾರು. ಜನರಿಗೆ ದ್ರೋಹ ಯಾಕೆ ಮಾಡ್ತೀರಾ. ಕಳೆದ ಬಾರಿ ಕೃಷ್ಣೆ ಬಂದು ಜನ ತತ್ತರಿಸಿಹೋದ್ರು. ಈಗ ಭೀಮೆಯಿಂದ ಜನ ಬೀದಿಗೆ ಬಿದ್ದಿದ್ದಾರೆ. ಅವರ ಸಮಸ್ಯೆ ಪರಿಹರಿಸೋಕೆ ನಿಮ್ಮಲ್ಲಿ‌ ಹಣವಿಲ್ಲ. ಆದರೆ ಬೋರ್ಡ್ ಚೇರ್ಮನ್ ಮಾಡೋಕೆ ದುಡ್ಡಿದೆ. ಎಲ್ಲಿಂದ ಇದಕ್ಕೆಲ್ಲ ದುಡ್ಡು ತರುತ್ತೀರಾ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಮತ್ತೊಂದು ಪ್ರಶ್ನೆಯನ್ನು ಹಾಕಿದ್ರು.

Last Updated : Dec 7, 2020, 7:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.