ಬೆಂಗಳೂರು: ಕನ್ನಡ ಪರೀಕ್ಷಾ ಪ್ರಾಧಿಕಾರ ಎಸಗಿರುವ ಲೋಪವನ್ನು ವಿವರಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಪತ್ರದಲ್ಲಿ ವಿಸ್ತೃತ ವಿವರಣೆ ನೀಡಿರುವ ಸಿದ್ದರಾಮಯ್ಯ, ರಾಜ್ಯದ ಇತ್ತೀಚಿನ ಭ್ರಷ್ಟಾಚಾರ ಕುರಿತ ಬೆಳವಣಿಗೆಗಳನ್ನು ನೋಡಿದರೆ ನಿಜಕ್ಕೂ ಗಾಬರಿಯಾಗುತ್ತದೆ. ಈ ಭ್ರಷ್ಟಾಚಾರವು ಸರ್ಕಾರದ ನೇಮಕಾತಿಗಳಿಗೂ ವ್ಯಾಪಿಸಿಕೊಂಡಿದೆ ಎಂದು ಉಲ್ಲೇಖಿಸಿದ್ದಾರೆ.
ನಮ್ಮಲ್ಲಿ ಪದವೀಧರ ನಿರುದ್ಯೋಗಿಗಳ ಪ್ರಮಾಣ ಇಡೀ ದೇಶದಲ್ಲಿಯೇ ಅಧಿಕವಾಗಿದೆ. ಆದರೆ ,ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಸರ್ಕಾರವು ನೇಮಕಾತಿ ಮಾಡಲು ಹೊರಟ ಕೆಲವು ನೂರು ಹುದ್ದೆಗಳ ನೇಮಕಾತಿಯಲ್ಲೂ ವ್ಯಾಪಕ ಭ್ರಷ್ಟಾಚಾರಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈಗಾಗಲೆ ಪೊಲೀಸ್ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ರಾಶಿ ರಾಶಿ ಸಾಕ್ಷ್ಯಗಳು ಸಿಗುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ: ನೋಡಿ: ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಕೆಜಿಎಫ್ 2; ಭಾವನಾತ್ಮಕ ವಿಡಿಯೋ ಹರಿಬಿಟ್ಟ ಯಶ್
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ ಕೂಡ ಆರೋಪಗಳು ಕೇಳಿಬರುತ್ತಿವೆ. ಕೆ.ಪಿ.ಎಸ್.ಸಿ ಸಮರ್ಪಕವಾಗಿ, ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಮಾಡುತ್ತಿಲ್ಲ ಎಂದು ಕರ್ನಾಟಕ ಪರೀಕ್ಷಾ ಪಾಧಿಕಾರ ಸ್ಥಾಪಿಸಲಾಯಿತು. ಈ ಪ್ರಾಧಿಕಾರವು ತನ್ನದೆ ಆದ ಶಿಸ್ತನ್ನು ರೂಢಿಸಿಕೊಂಡು ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿತ್ತು. ಈಗ ಅದರ ಬಗ್ಗೆ ಕೂಡ ಗಂಭೀರವಾದ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಪ್ರಾಧಿಕಾರವು ಇತ್ತೀಚೆಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಪರೀಕ್ಷೆಗಳನ್ನು ನಡೆಸಿದೆ. ಆ ಪರೀಕ್ಷೆಯಲ್ಲಿ ಆಗಿರುವ ಲೋಪದೋಷ ಹಾಗೂ ಅಕ್ರಮಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳ ಹೋರಾಟ ಸಮಿತಿಯವರು ಕುರಿತು ಕನ್ನಡ ಗುರುತರವಾದ ಸಾಕ್ಷಿ ಪುರಾವೆಗಳನ್ನು ಮುಂದಿಟ್ಟಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಐಚ್ಛಿಕ ಕನ್ನಡ ಪತ್ರಿಕೆಯ ತುಂಬ ತಪ್ಪುಗಳೇ ತುಂಬಿವೆ. ದುರಂತವೆಂದರೆ ತಪ್ಪಾಗಿ ಮುದ್ರಿತವಾದವುಗಳೆ ಸರಿ ಉತ್ತರಗಳಾಗಿವೆ. ಅಂದರೆ ಯಾರಿಗೋ ಗುಪ್ತ ಸಂದೇಶ ಕೊಡುವುದಕ್ಕಾಗಿಯೆ ಈ ರೀತಿ ಮಾಡಲಾಗಿದೆ ಎಂದು ಕಷ್ಟ ಪಟ್ಟು ಅಧ್ಯಯನ ಮಾಡಿ ಬರೆದ ಅಭ್ಯರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಸಂಪೂರ್ಣ ವಿವರ ಈ ಪತ್ರದಲ್ಲಿದೆ...