ETV Bharat / state

ಸಿದ್ದರಾಮಯ್ಯ ಕನ್ನಡವನ್ನು ಇನ್ನೊಂದು ಭಾಷೆಯ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ : ಸಿ. ಟಿ ರವಿ - ಸಿದ್ದರಾಮಯ್ಯ ಭಾಷೆಯ ಹೇಳಿಕೆ ಬಗ್ಗೆ ಸಿಟಿ ರವಿ ವಾಗ್ದಾಳಿ

ಭಾಷೆ ಜೋಡಿಸುವ ಪ್ರಯತ್ನ ಮಾಡಬೇಕು- ಒಡೆಯುವ ಕೆಲಸ ಮಾಡಬಾರದು- ಕನ್ನಡವನ್ನು ಇನ್ನೊಂದು ಭಾಷೆಯ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ- ಸಿ. ಟಿ ರವಿ ಆರೋಪ

ಸಿ. ಟಿ ರವಿ
ಸಿ. ಟಿ ರವಿ
author img

By

Published : Aug 1, 2022, 7:34 PM IST

ಬೆಂಗಳೂರು: ತಮಿಳರು ಕನ್ನಡ ವಿರೋಧಿಗಳು, ಕರ್ನಾಟಕ ವಿರೋಧಿಗಳು, ಪ್ರಾಂತೀಯ ಮನಸ್ಸಿನವರು ಎಂದೆಲ್ಲ ಪ್ರಚಾರ ಮಾಡುತ್ತಾರೆ. ಆದರೆ ವಾಸ್ತವ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಅವರು ತಮಿಳುನಾಡಿನಲ್ಲಿ ಹೇಳಿದ್ದ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಭಾನುವಾರ ತಮಿಳುನಾಡಿನಲ್ಲಿ ಅಂಬೇಡ್ಕರ್ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದು ನಂತರ ಅವರು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾಷೆ ಜೋಡಿಸುವ ಪ್ರಯತ್ನ ಮಾಡಬೇಕು. ಒಡೆಯುವ ಕೆಲಸ ಮಾಡಬಾರದು. ಕನ್ನಡವನ್ನು ಇನ್ನೊಂದು ಭಾಷೆಯ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಇವರ ರಾಜಕೀಯ ದುರ್ಲಾಭಕ್ಕೋಸ್ಕರ ಎತ್ತಿಕಟ್ಟಿದ್ದಾರೆ ಎಂದು ಟೀಕಿಸಿದ್ದಾರೆ. ಆರ್ಯ, ದ್ರಾವಿಡ ಯಾರು.? ಐತಿಹಾಸಿಕವಾಗಿ ಕೂಡ ವ್ಯಕ್ತಿಗತವಾಗಿ ಯಜಮಾನ ಅನ್ನುವುದನ್ನು ಆಡಳಿತಕ್ಕಾಗಿ ತೋರಿಸಿತ್ತೇ ವಿನಃ ಗುಲಾಮ ಅನ್ನುವುದನ್ನು ಸೂಚಿಸುವುದಿಲ್ಲ ಎಂದಿದ್ದಾರೆ.

ಈ ಬಗ್ಗೆ ಯಾವುದೇ ದಾಖಲೆ ಕೂಡ ಸಿಗುವುದಿಲ್ಲ. ಸಿದ್ದರಾಮಯ್ಯ ಓದಿದ್ದು ಇಟಲಿ ಇತಿಹಾಸನಾ?. ಅಶೋಕ ಚಕ್ರವರ್ತಿ ಯಾರು ಹಾಗಾದ್ರೆ.?. ಕವಿ ಕಾಳಿದಾಸ ನಮ್ಮವರೆಂದು ಕುರುಬರು ಹೇಳುತ್ತಾರೆ. ಅಭಿಜ್ಞಾನ ಶಾಕುಂತಲ ಮೇಘ ಸಂದೇಶ ಬರೆದಿದ್ರು. ಇವರ ಸಿದ್ಧಾಂತ ಒಡೆಯಲು ಬಳಸಿದ್ದಾರೆ. ಸಿದ್ದರಾಮಯ್ಯ ಅವರು 75 ವರ್ಷದ ಹೊಸ್ತಿಲಲ್ಲಿ ಇದ್ದಾರೆ. ಮುತ್ಸದ್ಧಿತನವನ್ನು ತೋರಬೇಕು. ಭಾಷೆ ಮೂಲಕ ಒಡೆಯುವುದಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರಿಗೆ ಟಾಂಗ್: ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ. ಟಿ ರವಿ ಅವರು, ಕಾಂಗ್ರೆಸ್ ನಲ್ಲಿ ಇಬ್ಬರಲ್ಲ ರೀ, ಮತ್ತೊಬ್ಬ ಎಸ್. ಆರ್ ಪಾಟೀಲ್ ಸಿಎಂ ಆಗಬೇಕು ಎಂದು ನಿನ್ನೆ ಮಾಜಿ ಸಿಎಂ ವೀರಪ್ಪಮೊಯಿಲಿ ಹೇಳಿದ್ದಾರೆ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ತೋರಿಸಿ ಮೋಸ ಮಾಡಿದ್ರು. ಆಮೇಲೆ ಅಧಿಕಾರಕ್ಕೆ ಬಂದ ಮೇಲೆ ಡಾ. ಜಿ ಪರಮೇಶ್ವರ್ ಅವರನ್ನು ಸೋಲಿಸಿ ಅಧಿಕಾರ ಕೊಡದೆ ಮೋಸ ಮಾಡಿದ್ರು ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

ನಾವು ಬೊಮ್ಮಾಯಿ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಮುಂದೆ ಪಕ್ಷ ಅಧಿಕಾರಕ್ಕೆ ಬಂದ ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಆಗಲಿದೆ. ನಂತರ ಸೆಂಟ್ರಲ್ ಪಾರ್ಲಿಮೆಂಟರಿ ಬೋರ್ಡ್ ಸಿಎಂ ನೇಮಕದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ದವಡೆಯೂ ನಮ್ಮದೆ, ನಾಲಿಗೆಯೂ ನಮ್ಮದೆ: ಚಕ್ರವರ್ತಿ ಸೂಲಿಬೆಲೆ ಅವರು ವೈಚಾರಿಕವಾಗಿ ಅಪ್ಪಟ ರಾಷ್ಟ್ರ ಭಕ್ತ. ವ್ಯತಿರಿಕ್ತವಾಗಿ ಟ್ವೀಟ್ ಮಾಡಿದ್ರೂ ಅವರ ಜೊತೆ ಮಾತನಾಡುತ್ತೇವೆ. ಅವರು ಅಂತಲ್ಲ, ಯಾವ ಕಾರ್ಯಕರ್ತರನ್ನೂ ಬಿಟ್ಟುಕೊಡೋದಿಲ್ಲ. ನಮ್ಮದು ಕೇಡರ್ ಬೇಸ್ ಪಕ್ಷ. ಕೆಲವರನ್ನು ಕೂತು ಮಾತನಾಡಿಸಬೇಕು. ದವಡೆಯೂ ನಮ್ಮದೆ, ನಾಲಿಗೆಯೂ ನಮ್ಮದೆ. ದವಡೆ ನಾಲಿಗೆ ಕಚ್ಚಿತು ಅಂತ ಏನೂ ಮಾಡಲಾಗಲ್ಲ. ದವಡೆ, ನಾಲಿಗೆ ನಮ್ಮದೇ ಎಂದು ಮಾರ್ಮಿಕವಾಗಿ ನುಡಿದರು.

ಪ್ರವೀಣ್ ನೆಟ್ಟಾರು ಮನೆ ಹೊರತುಪಡಿಸಿ ಇತರರ ಮನೆಗೆ ಹೋಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿ. ಟಿ ರವಿ, ನಾನು ಹಾಗೆ ಹೇಳಲ್ಲ. ಸಂವಿಧಾನಾತ್ಮಕವಾಗಿ ಎಲ್ಲರೂ ಒಂದೇ ಅಂತ ನೋಡಬೇಕು. ಪ್ರವೀಣ್ ನೆಟ್ಟಾರು ನಮ್ಮ ಕಾರ್ಯಕರ್ತ. ಮನುಷ್ಯನಾಗಿ ಎಲ್ಲರನ್ನೂ ನೋಡಬೇಕು. ನಾನು ನನ್ನ ಅಭಿಪ್ರಾಯ ಮಾತ್ರ ಹೇಳುತ್ತೇನೆ. ಉಳಿದದ್ದನ್ನು ಅವರನ್ನೇ ಕೇಳಿ. ಈಗ ಯಾರು ಈ ಪ್ರಶ್ನೆ ಮಾಡ್ತಿದ್ದಾರೆ, ಅವರ ಕಾಲದಲ್ಲಿ ಹತ್ಯೆಯಾದಾಗ ಏನು ಮಾಡಿದ್ರು. ನಾನು ಎಲ್ಲವನ್ನೂ ಗಮನಿಸಿದ್ದೇನೆ ಎಂದು ಸಿ ಟಿ ರವಿ ವಾಗ್ದಾಳಿ ನಡೆಸಿದರು.

ಪ್ರಶ್ನಿಸಲಾರದ ಪಕ್ಷ ನಮ್ಮದಲ್ಲ: ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಹಾಗೂ ಸಿದ್ದೇಶ್ವರ್ ಹೇಳಿಕೆ ವಿರುದ್ಧ ಕಾರ್ಯಕರ್ತರ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ವಿಚಾರವನ್ನು ನಾನು ಒಪ್ಪಲ್ಲ. ವಿಚಾರಕ್ಕಾಗಿ ಹೋರಾಟ ಮಾಡಿದ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅವರು ಇಂದು ಯಾವುದೇ ಅಧಿಕಾರ ಇಲ್ಲದೆ ಕೂತಿದ್ದಾರೆ. ನಮ್ಮನ್ನು ಅಧಿಕಾರಕ್ಕೆ ಕರೆತಂದಿದ್ದಾರೆ. ಅವರನ್ನು ಮರೆಯುವ ಪ್ರಶ್ನೆಯೇ ಇಲ್ಲ. ಪ್ರಶ್ನಿಸಲಾರದ ಪಕ್ಷ ನಮ್ಮದಲ್ಲ. ಪ್ರಶ್ನಿಸಿದರೆ ಕ್ರಮ ಆಗುವ ಪಕ್ಷವೂ ನಮ್ಮದಲ್ಲ. ಕಾರ್ಯಕರ್ತ ಮತ್ತು ಸಿದ್ಧಾಂತ ಆಧಾರದ ಮೇಲೆ ಪಕ್ಷ ಬೆಳೆದಿದೆ ಎಂದು ಕಾರ್ಯಕರ್ತರನ್ನು ಸಿ ಟಿ ರವಿ ಸಮರ್ಥಿಸಿಕೊಂಡರು.

ನಮ್ಮ ವೇಗಕ್ಕೆ ತಕ್ಕಂತೆ ಪಕ್ಷವನ್ನ ಬೆಳೆಸಿಕೊಂಡು ಹೋಗಬೇಕು. ನಮ್ಮದು 18 ಕೋಟಿ ಸದಸ್ಯತ್ವ ಇರುವ ರಾಜಕೀಯ ಪಕ್ಷ. ನಮ್ಮದಲ್ಲದ ತಪ್ಪಿನಿಂದ ಅವರು ಹೊರಹೋಗುವಂತೆ ಆಗಬಾರದು. ಯಾರಾದರೂ ದುರುದ್ದೇಶ ಪೂರಕವಾಗಿ ಹೇಳಿಕೆ ನೀಡಿದ್ದರೆ ಸರಿಯಲ್ಲ. ಅವರ ಮೇಲೆ ಪಕ್ಷದ ಅಡಿಯಲ್ಲಿ ಕ್ರಮ ಆಗಲಿದೆ. ನಮ್ಮ ಹೋರಾಟ ಯಾರ ವಿರುದ್ಧ ಅನ್ನೋದು ತಿಳಿಯಬೇಕು. ಸೈದ್ಧಾಂತಿಕ ವಿರುದ್ಧವಾಗಿ ನಮ್ಮ ಹೋರಾಟ ಆಗಬೇಕು. ಅದನ್ನು ಹೊರತುಪಡಿಸಿ ಬೇರೆ ಆಗಲು ಅವಕಾಶ ನೀಡಬಾರದು ಎಂದು ಹೇಳಿದರು.

ಓದಿ: 'ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ’: ಹುಬ್ಬಳ್ಳಿ ಅಭಿಮಾನಿ ಬಳಗದಿಂದ ಆಲ್ಬಂ ಸಾಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.