ETV Bharat / state

ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರ, ಕೂಡಲೇ ಅವರು ರಾಜೀನಾಮೆ ಕೊಡಲಿ: ಎನ್.ರವಿಕುಮಾರ್ - ಈಟಿವಿ ಭಾರತ ಕನ್ನಡ

ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಜೆಪಿ ಸರ್ಕಾರ ಅನುಮತಿ ನೀಡಿದೆ ಎಂದು ಸೀದಾ ಸಿದ್ದರಾಮಯ್ಯ ಅಲ್ಲ,‌ ಸುಳ್ಳು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಡಿಕೆಶಿ ಆರೋಪ ಮಾಡ್ತಿದ್ದಾರೆ. ಇದೆಲ್ಲದಕ್ಕೂ ಉತ್ತರ ಕೊಡಲು ಆಯುಕ್ತರಿಗೆ ದೂರು ನೀಡಿದ್ದೇವೆ ಎಂದು ಎನ್ ರವಿಕುಮಾರ್ ಹೇಳಿದ್ದಾರೆ.

chilume-institute
ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರ
author img

By

Published : Nov 19, 2022, 10:56 PM IST

ಬೆಂಗಳೂರು: ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ನೀಡರುವುದು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ. ನಿಮಗೆ ಮಾನ, ಮರ್ಯಾದೆ ಇದ್ದರೆ ಮೊದಲು ನೀವು ರಾಜೀನಾಮೆ ಕೊಡಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆಗ್ರಹಿಸಿದರು.

ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ವಿರುದ್ಧ ದೂರು ನೀಡಿದ ಬಳಿಕ ಮಾತನಾಡಿದ ಅವರು, ಬಿಜೆಪಿ ನಿಯೋಗ ಬಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿಯಾಗಿ ದೂರು ನೀಡಲಾಗಿದೆ. ರಾಜ್ಯದಲ್ಲಿ ದೊಡ್ಡ ರಾದ್ಧಾಂತ ಆಗಿದೆ . ಕಾಂಗ್ರೆಸ್ ಮತದಾರರನ್ನ ಗುರುತಿಸಿ, ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಅಂತ ಹೇಳಿದೆ.

ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಬಿಜೆಪಿ ಸರ್ಕಾರ ಅನುಮತಿ ನೀಡಿದೆ ಎಂದು ಆರೋಪಿಸಿದ್ದಾರೆ. ಸೀದಾ ಸಿದ್ದರಾಮಯ್ಯ ಅಲ್ಲ,‌ ಸುಳ್ಳು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಡಿಕೆಶಿ ಆರೋಪ ಮಾಡ್ತಿದ್ದಾರೆ. ಇದೆಲ್ಲದಕ್ಕೂ ಉತ್ತರ ಕೊಡಲು ಆಯುಕ್ತರಿಗೆ ದೂರು ನೀಡಿದ್ದೇವೆ ಎಂದು ವಾಗ್ದಾಳಿ ನಡೆಸಿದರು.

ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರ ಎಂದು ಎನ್.ರವಿಕುಮಾರ್ ಹೇಳಿದರು

ಸಿದ್ದರಾಮಯ್ಯ ಸರ್ಕಾರದ ಕಾಲದಲ್ಲೇ ಅನುಮತಿ : ಚಿಲುಮೆ ಸಂಸ್ಥೆಗೆ 27-9-2017ರಲ್ಲಿ ಅನುಮತಿ ನಿಡಲಾಗಿತ್ತು ಆಗ ಯಾವ ಸರ್ಕಾರ ಇತ್ತು?. ಹಾಗಾದರೆ ಮನೆ ಮನೆಗೆ ಹೋಗಬೇಕು ಅಂತ ಅನುಮತಿ ನೀಡಿದ್ದು ಯಾರು?. ಇದಕ್ಕೆ ಏನು ಹೇಳ್ತಿರಾ ಸಿದ್ದರಾಮಯ್ಯ ಅವರೇ?. ಇದನ್ನ ನಾವು ಕೊಟ್ಟೆವಾ, ಬೊಮ್ಮಾಯಿ ಕೊಟ್ರಾ?. ನಮ್ಮ ಸಿಎಂ ಬೊಮ್ಮಾಯಿ ಯಾಕೆ ರಾಜೀನಾಮೆ ಕೊಡಬೇಕು?. ನೀವು ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.

ವಿರೋಧ ಪಕ್ಷದ ಸ್ಥಾನದ ಅರ್ಹತೆ ಇಲ್ಲ: ಯಾವ ಮುಖ ಇಟ್ಟುಕೊಂಡು ಬಂದು ಆಯುಕ್ತರಿಗೆ ದೂರು ನೀಡಿದ್ರಿ. ಸಿದ್ದರಾಮಯ್ಯ, ಡಿಕೆಶಿ, ಸೋನಿಯಾ ಗಾಂಧಿಗೆ ಪ್ರಶ್ನೆ ಮಾಡುತ್ತೇನೆ. ಸುರ್ಜೇವಾಲಾ ಅವರೇ ಯಾವ ಮುಖ ಇಟ್ಟುಕೊಂಡು ರಾಜ್ಯಕ್ಕೆ ಬರ್ತೀರಾ. ಮೊದಲು ಸಿದ್ದರಾಮಯ್ಯಗೆ ರಾಜೀನಾಮೆ ಕೊಡಿಸಿ ರಾಜ್ಯಕ್ಕೆ ಬನ್ನಿ.

24ಲಕ್ಷ ಡಿಲಿಟ್ ಮಾಡಲಾಗಿದೆ ಅಂತ ಆರೋಪ ಮಾಡ್ತಿದ್ದಾರೆ. ಬೆಂಗಳೂರಿನಲ್ಲಿ ಇರೋದೇ 90ಲಕ್ಷ ಮತದಾರರು. ಯಾವ ಲೆಕ್ಕ ಕೊಡ್ತಿದ್ದೀರಾ, ನಿಮಗೆ ನಾಚಿಕೆ ಆಗಲ್ವಾ?. ಡಿಲೀಟ್ ಮಾಡೋದು ರಾಜ್ಯ ಚುನಾವಣಾ ಆಯೋಗ ಮಾಡಬೇಕು. ನಿಮಗೆ ವಿರೋಧ ಪಕ್ಷದ ಸ್ಥಾನದಲ್ಲಿ ಇರೋದಕ್ಕೆ ಅರ್ಹತೆ ಇಲ್ಲ ಎಂದು ಕಿಡಿ ಕಾರಿದರು.

6,73,422 ಮತದಾರರ ಪಟ್ಟಿ ಮಾತ್ರ ಈವರೆಗೂ ಡಿಲಿಟ್ ಆಗಿರೋದು. ಇದು ರಾಜ್ಯ ಚುನಾವಣಾ ಆಯೋಗ ಕೊಟ್ಟಿರೋ ಅಧಿಕೃತ ಮಾಹಿತಿ. ಯಾವ ಮುಖ ಇಟ್ಟುಕೊಂಡು ಈ ದೂರು ನೀಡಿದ್ರಿ. ಒಂದೇ ರೀತಿಯ ಭಾವಚಿತ್ರ ಇರುವುದು ಡಿಲೀಟ್ ಮಾಡಲಾಗಿದೆ. ಕಳ್ಳ ವೋಟ್​, ಎರಡು, ಮೂರು ಕಡೆ ವೋಟ್​​ ಮಾಡೋದನ್ನ ಡಿಲೀಟ್ ಮಾಡಲಾಗಿದೆ. ಕಾಂಗ್ರೆಸ್ ಹೇಳ್ತಿದೆ ಡಿಲೀಟ್ ಮಾಡಬಾರದು ಅಂತ.

ಯಾಕೆ ಡಿಲೀಟ್ ಮಾಡಬಾರದು?. ಸಿದ್ದರಾಮಯ್ಯ ಅವರೇ ಎರಡು ಕಡೆ ನೀವು ವೋಟ್​​ ಮಾಡ್ತೀರಾ.? ಎಂದು ಪ್ರಶ್ನಿಸಿದರು. ಈ ವೇಳೆ ಛಲವಾದಿ ನಾರಾಯಣಸ್ವಾಮಿ, ಶಾಸಕ ರವಿಸುಬ್ರಹ್ಮಣ್ಯ ಮತ್ತು ಪಕ್ಷದ ಇತರ ಮುಖಂಡರೂ ಇದ್ದರು.

ಇದನ್ನೂ ಓದಿ :ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸಹೋದರ ಕೆಂಪೇಗೌಡ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.