ETV Bharat / state

ಅನ್ನಭಾಗ್ಯ ಯೋಜನೆಯಲ್ಲಿ ಅಕ್ರಮವಾಗಿದೆ ಎಂದು ನಿಲ್ಲಿಸುವುದು ಸರಿಯಲ್ಲ: ಸಿದ್ದರಾಮಯ್ಯ - ಅನ್ನಭಾಗ್ಯ ಯೋಜನೆ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

ಅನ್ನಭಾಗ್ಯ ಯೋಜನೆಯಡಿ ಅಕ್ರಮ ಎಸಗಿರುವವರನ್ನು ಪತ್ತೆ ಹಚ್ಚಲಿ. ಆದ್ರೆ ಯೋಜನೆ ನಿಲ್ಲಿಸುವುದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

siddaramaiah distrubuting food packets for hungers
ಬಡವರಿಗೆ ಆಹಾರ ವಿತರಣೆ
author img

By

Published : Apr 9, 2020, 4:34 PM IST

Updated : Apr 9, 2020, 4:45 PM IST

ಬೆಂಗಳೂರು: ನೆಗಡಿ ಬಂತು ಅಂತಾ ಮೂಗು ಕಟ್ ಮಾಡಿಕೊಳ್ಳಲು ಆಗಲ್ಲ. ಅದೇ ರೀತಿ ಅಕ್ರಮ ಆಗಿದೆ ಅಂತ ಅನ್ನಭಾಗ್ಯ ಯೋಜನೆ ನಿಲ್ಲಿಸುವುದು ಸರಿಯಲ್ಲ ಅಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬಡವರಿಗೆ ಆಹಾರ ವಿತರಣೆ

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್-44ರ ಅಶೋಕ ಪುರಂ ಪ್ರದೇಶದಲ್ಲಿ ಇಂದು ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರದ ಪ್ಯಾಕೇಟ್​​ಗಳನ್ನು ವಿತರಿಸಿದ ನಂತರ ಮಾತನಾಡಿದ ಅವರು, ಯೋಜನೆಯಲ್ಲಿ ಅಕ್ರಮ ಮಾಡಿದವರನ್ನ ಪತ್ತೆ ಹಚ್ಚಲಿ. ಆದ್ರೆ ಉಚಿತ ಅಕ್ಕಿ ಕೊಡುವುದನ್ನ ಸರ್ಕಾರ ನಿಲ್ಲಿಸಬಾರದು ಎಂದರು. ಸರ್ಕಾರ ಇಂದಿರಾ ಕ್ಯಾಂಟೀನ್​​ನಲ್ಲಿ ಉಚಿತವಾಗಿ ಆಹಾರ ನೀಡುವಾಗ ಪ್ರತಿದಿನ ಏಳೆಂಟು ಸಾವಿರ ಜನ ತೆಗೆದುಕೊಂಡು ಹೋಗುತ್ತಿದ್ರು. ಆದ್ರೀಗ ಉಚಿತವಾಗಿ ಕೊಡದಿರುವುದರಿಂದ ನೂರೈವತ್ತು ಜನ ಸಹ ಬರ್ತಿಲ್ಲ. ಇಂದಿರಾ ಕ್ಯಾಂಟೀನ್​​ನಲ್ಲಿ ಫ್ರೀ ಊಟ ಕೊಡ್ಲಿ ಎಂದು ಸಲಹೆ ನೀಡಿದರು.

ಲಾಕ್​​​ಡೌನ್ ಮುಂದುವರಿಕೆ ವಿಚಾರದ ಕುರಿತು ಮಾತನಾಡಿ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ. ಹಾಟ್ ​​ಸ್ಪಾಟ್ ಜಿಲ್ಲೆಗಳಲ್ಲಿ ಇನ್ನಷ್ಟು ಬಿಗಿ ಕ್ರಮ ಮಾಡ್ಲಿ. ನಾವು ಸರ್ಕಾರಕ್ಕೆ ಕೊಟ್ಟ ಎಲ್ಲಾ ಸಲಹೆಗಳನ್ನ ಅವರು ತೆಗೆದುಕೊಂಡಿಲ್ಲ. ಆದ್ರೆ ಕೊರೊನಾ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಸಪೋರ್ಟ್ ಇದೆ ಎಂದರು. ಸ್ಥಳೀಯ ಬಿಬಿಎಂಪಿ ಸದಸ್ಯ ಶಿವರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹಮದ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Last Updated : Apr 9, 2020, 4:45 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.