ETV Bharat / state

ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರ ; ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ. ಕೇಂದ್ರದ ಪಿಎಂ ಕೇರ್‌ನಿಂದ ಎಷ್ಟು ಹಣ ಬಂತು ಎಂಬ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಷ್ಟು ಹಣ ಬಂತು? ಎಷ್ಟು ವೆಚ್ಚವಾಯಿತು ಎಂಬ ಬಗ್ಗೆಯೂ ಗೊತ್ತಿಲ್ಲ. ಎಲ್ಲದರ ಬಗ್ಗೆಯೂ ಸರ್ಕಾರ ಉತ್ತರ ನೀಡಬೇಕು..

Siddaramaiah
ಸಿದ್ದರಾಮಯ್ಯ
author img

By

Published : Sep 22, 2020, 5:36 PM IST

ಬೆಂಗಳೂರು : ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಹೀಗಾಗಿ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಸಭೆಯಲ್ಲಿ ಇಂದು ಒತ್ತಾಯಿಸಿದ್ದಾರೆ.

ಕೊರೊನಾ ಸಂಬಂಧ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ನಿಯಮ-69ರ ಅಡಿ ಚರ್ಚೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿರುವುದನ್ನು ಸದನದಲ್ಲಿ ಬಿಡಿಸಿಟ್ಟರು. ಕೊರೊನಾ ಸೋಂಕು ನಿಯಂತ್ರಣಕ್ಕೆ ಖರೀದಿಸಿರುವ ವೈದ್ಯಕೀಯ ಉಪಕರಣಗಳಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ. ಹಾಗಾಗಿ, ಈ ಹಗರಣವನ್ನು ನ್ಯಾಯಾಂಗ ತನಿಖೆ ನಡೆಸಿದ್ರೆ ಸತ್ಯಾಂಶ ಹೊರ ಬರುತ್ತದೆ ಎಂದರು.

ನ್ಯಾಯಾಂಗ ತನಿಖೆ ಅತ್ಯಾವಶ್ಯಕವಾಗಿದೆ. ಇಲ್ಲದಿದ್ದರೆ ಹಣ್ಣು ತಿಂದವರು ಪಾರಾಗುತ್ತಾರೆ‌. ಸಿಪ್ಪೆ ತಿಂದವರು ಸಿಕ್ಕಿ ಹಾಕಿಕೊಳ್ಳುವಂತಾಗುತ್ತದೆ. ಹೀಗಾಗಿ, ಈ ವ್ಯವಹಾರದ ಕುರಿತು ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು. ಬೆಂಗಳೂರು ನಗರದಲ್ಲಿ ಕಂಟೇನ್ಮೆಂಟ್ ಝೋನ್‌ಗಳ ನಿಗದಿಯಲ್ಲೂ ಅವ್ಯವಹಾರ ನಡೆದಿದೆ. 34 ಸಾವಿರ ಕಂಟೇನ್ಮೆಂಟ್ ಝೋನ್‌ಗಳಿಗೆ ಅತಿ ಹೆಚ್ಚು ಹಣ ವೆಚ್ಚವಾಗಿದೆ. ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ವಿಫಲವಾಗಿವೆ. ಕೇಂದ್ರ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಂಡಿದ್ರೆ ಕೊರೊನಾವನ್ನು ನಿಯಂತ್ರಿಸಬಹುದಿತ್ತು. ಆರಂಭದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳು ಆಗಲಿಲ್ಲ. ಕೇವಲ ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದು, ಗಂಟೆ ಬಾರಿಸುವುದು ಇದಕ್ಕೆ ಸೀಮಿತವಾಯಿತು. ರಾಜ್ಯ ಸರ್ಕಾರವೂ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ಎಡವಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಕೊರೊನಾ ನಮ್ಮ ದೇಶಕ್ಕೆ ಕಾಲಿಟ್ಟಿದ್ದು ಕೇರಳ ಮೂಲಕ. ತಕ್ಷಣ ವಿಮಾನಗಳನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದರೆ ಸ್ವಲ್ಪಮಟ್ಟಿಗೆ ನಿಯಂತ್ರಣ ಆಗುತ್ತಿತ್ತು. ದೇಶದಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಭಾರತದಲ್ಲಿ ಮಾರ್ಚ್ 24ಕ್ಕೆ 519 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದವು. ಇವತ್ತು 55, 60,105 ಪ್ರಕರಣ ಪತ್ತೆಯಾಗಿವೆ. ಪ್ರತಿ ದಿನ ಸುಮಾರು 90 ಸಾವಿರ ಪ್ರಕರಣ ಪತ್ತೆಯಾಗುತ್ತಿವೆ. ದೇಶದಲ್ಲಿ 88,965 ಜನ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.

ಕರ್ನಾಟಕದಲ್ಲಿ ನಿನ್ನೆಯವರೆಗೆ 5,26,876 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 8,145 ಮಂದಿ ಬಲಿಯಾಗಿದ್ದಾರೆ. ಕೊರೊನಾ ಬಂದರೆ ಮಾನಸಿಕವಾಗಿ ಕುಗ್ಗಿಸುತ್ತದೆ. ಕೊರೊನಾ ಒಂದು ಮಹಾಮಾರಿ. ಎಲ್ಲರೂ ಎಚ್ಚರ ವಹಿಸಬೇಕಾಗಿದೆ. ಕೊರೊನಾ ಬಂದು ಹೋದ ಮೇಲೂ ಎಚ್ಚರ ಅವಶ್ಯ. ನಿರ್ಲಕ್ಷ್ಯವಾಗಿದ್ದರೆ ಕೊರೊನಾ ಬರುತ್ತದೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಾತು

ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ. ಕೇಂದ್ರದ ಪಿಎಂ ಕೇರ್‌ನಿಂದ ಎಷ್ಟು ಹಣ ಬಂತು ಎಂಬ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಷ್ಟು ಹಣ ಬಂತು? ಎಷ್ಟು ವೆಚ್ಚವಾಯಿತು ಎಂಬ ಬಗ್ಗೆಯೂ ಗೊತ್ತಿಲ್ಲ. ಎಲ್ಲದರ ಬಗ್ಗೆಯೂ ಸರ್ಕಾರ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಿತು. ಆದರೆ, ಅದು ಇನ್ನೂ ಜನರಿಗೆ ಸರಿಯಾಗಿ ಸಿಕ್ಕಿಲ್ಲ. ಕೆಲ ವರ್ಗದವರಿಗೆ ನೆರವನ್ನೇ ಸರ್ಕಾರ ನೀಡಲಿಲ್ಲ ಎಂದು ಅವರು ಆರೋಪಿಸಿದರು. ಹೊಸ ವೈದ್ಯರಿಗಿಂತ ಹಳೆ ರೋಗಿ ಉತ್ತಮ ಎಂಬಂತೆ ನಾನು ವೈದ್ಯರಿಂದ ಸಾಕಷ್ಟು ತಿಳಿದುಕೊಂಡಿದ್ದೇನೆ. ಕೊರೊನಾಗೆ ಔಷಧಿ ಸಿಕ್ಕಿಲ್ಲ. ಕೊರೊನಾದೊಂದಿಗೆ ಬದುಕಬೇಕಾಗಿದೆ. ಆದ್ದರಿಂದ ಎಚ್ಚರವಹಿಸಿ ಎಂದರು.

ಹಲವು ಶಾಸಕರಿಗೆ ಕೊರೊನಾ ಬಂದಿದೆ. ಅನೇಕರು ಗುಣಮುಖರಾಗಿದ್ದಾರೆ. ಕೆಲವರು ಕ್ವಾರಂಟೈನ್‌ನಲ್ಲಿದ್ದಾರೆ. ಅಶೋಕ್ ಗಸ್ತಿ ರಾಜ್ಯಸಭಾ ಸದಸ್ಯರಾಗಿ ರಾಜ್ಯಸಭೆಗೆ ಕಾಲಿಡದೆ ಕೊರೊನಾಗೆ ಬಲಿಯಾದರು. ಹಾಗೆಯೇ ಬಸವ ಕಲ್ಯಾಣದ ಶಾಸಕ ನಾರಾಯಣರಾವ್ ಐಸಿಯುನಲ್ಲಿದ್ದಾರೆ. ಒಂದು ತಿಂಗಳಿನಿಂದ ಅವರು ಸ್ವತಂತ್ರವಾಗಿ ಉಸಿರಾಡುತ್ತಿಲ್ಲ. ಈ ರೋಗ ಬಂದವರು ಕುಗ್ಗಿ ಹೋಗುತ್ತಾರೆ. ರೋಗ ಬಂದರೆ ಸಂಬಂಧಿಕರೆ ಹತ್ತಿರ ಬರುವುದಿಲ್ಲ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.