ETV Bharat / state

ಬಿಜೆಪಿ ಪ್ರಯೋಗಿಸುತ್ತಿರುವ 'ಭಾವನಾಸ್ತ್ರಗಳಿಗೆ' ಹಿಟ್ ವಿಕೆಟ್ ಆಗುತ್ತಿರುವ ಕಾಂಗ್ರೆಸ್ ನಾಯಕರು!

ಸರ್ಕಾರದ ವಿರುದ್ಧದ ಅಸ್ತ್ರಗಳನ್ನು ಬಳಸಿಕೊಂಡು ಮುನ್ನುಗ್ಗಬೇಕಾದವರು ನಾವು. ಆದರೆ, ಪರಿಸ್ಥಿತಿ ಹೇಗಿದೆ ಎಂದರೆ ಬಿಜೆಪಿ ಪ್ರಯೋಗಿಸುತ್ತಿರುವ ಭಾವನಾಸ್ತ್ರಗಳಿಗೆ ಉತ್ತರ ನೀಡುವುದೇ ನಮಗೆ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್ ನಾಯಕರು ಆಪ್ತ ವಲಯಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ..

siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Mar 26, 2022, 7:15 PM IST

ಬೆಂಗಳೂರು : ಹಿಜಾಬ್‍, ಧರ್ಮ ವ್ಯಾಪಾರ ಸೇರಿದಂತೆ ಬಿಜೆಪಿ ಪ್ರಯೋಗಿಸುತ್ತಿರುವ ಭಾವನಾಸ್ತ್ರಗಳಿಗೆ ಪಕ್ಷದ ನಾಯಕರು ಹಿಟ್ ವಿಕೆಟ್ ಆಗುತ್ತಿರುವ ರೀತಿ ರಾಜ್ಯ ಕಾಂಗ್ರೆಸ್ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಲು ಹೋಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿವಾದ ಕಟ್ಟಿಕೊಂಡ ಬೆಳವಣಿಗೆಯ ಹಿನ್ನೆಲೆ ಮುಂದೇನು? ಎಂಬ ಪ್ರಶ್ನೆ ಕಾಂಗ್ರೆಸ್ ಪಾಳೆಯವನ್ನು ಕಾಡತೊಡಗಿದೆ.

ಕಳೆದ ಕೆಲ ಕಾಲದಿಂದ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಪ್ರಯೋಗಿಸುತ್ತಿರುವ ಭಾವನಾಸ್ತ್ರಗಳು ಹೇಗಿವೆ ಎಂದರೆ ಕಾಂಗ್ರೆಸ್ ಪಕ್ಷ ಅದನ್ನು ಎದುರಿಸದೆ ಸುಮ್ಮನಿರುವಂತೆಯೂ ಇಲ್ಲ, ಎದುರಿಸಿದರೆ ಪಕ್ಷಕ್ಕೆ ಹಿಂದೂ ಮತ ಬ್ಯಾಂಕ್ ಹೊಡೆತ ತಪ್ಪಿದ್ದಲ್ಲ ಎಂಬ ಪರಿಸ್ಥಿತಿ ಇದೆ. ಕೆಲ ದಿನಗಳ ಹಿಂದೆ ಬಿಜೆಪಿ ಕೇಸರಿ ಧ್ವಜದ ವಿವಾದವನ್ನು ಹುಟ್ಟು ಹಾಕಿದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೊಡ್ಡ ಮಟ್ಟದಲ್ಲಿ ಇದನ್ನು ವಿರೋಧಿಸಲು ಮುಂದಾಗಿದ್ದರಲ್ಲದೇ, ವಿಧಾನ ಮಂಡಲ ಕಲಾಪದಲ್ಲಿ ಅಹೋರಾತ್ರಿ ಧರಣಿಗೆ ಪಕ್ಷವನ್ನು ಸಜ್ಜುಗೊಳಿಸಿ ಸಾರ್ವಜನಿಕ ವಲಯದ ಆಕ್ರೋಶಕ್ಕೆ ಗುರಿಯಾಗಿದ್ದರು.

ಇದನ್ನೂ ಓದಿ: ನನ್ಗೆ ಸ್ವಾಮೀಜಿಗಳ ಮೇಲೆ ಗೌರವವಿದೆ, ನೀವ್‌ ಯಾವ್ದ್‌ ಯಾವ್ದಕ್ಕೋ ಲಿಂಕ್‌ ಮಾಡ್ಬೇಡಿ.. ಮಾಧ್ಯಮದವರ ಮೇಲೆ ಸಿದ್ದು ಗರಂ

ಈಗ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ ಸ್ವಾಮೀಜಿಗಳು ತಲೆಯ ಮೇಲೆ ವಸ್ತ್ರ ಧರಿಸುವುದಿಲ್ಲವೇ?ಎಂದಿರುವುದು ರಾಜ್ಯ ಕಾಂಗ್ರೆಸ್ ಪಾಲಿಗೆ ಹೊಸ ಸಮಸ್ಯೆಯಾಗಿ ಪರಿಣಮಿಸಿದೆ. ಇದೇ ರೀತಿ ಸಂವಿಧಾನದ 270ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ದೊಡ್ಡ ಮಟ್ಟದ ಜನಾಕ್ರೋಶವನ್ನು ಎದುರಿಸಿತ್ತು.

ಇನ್ನು ಮತಾಂತರ ನಿಷೇಧ ಕಾಯ್ದೆ, ವ್ಯಾಪಾರದಲ್ಲಿ ಧರ್ಮ, ಭಯೋತ್ಪಾದನೆ, ಲವ್ ಜಿಹಾದ್ ಸೇರಿದಂತೆ ಸುಮಾರು 60 ವಿಷಯಗಳನ್ನು ಭಾವನಾಸ್ತ್ರವಾಗಿ ಬಿಜೆಪಿ ಬಳಸಿಕೊಂಡಿದ್ದು, ಇವುಗಳಿಗೆ ಉತ್ತರಿಸುವುದರಲ್ಲೇ ಕಾಂಗ್ರೆಸ್ ಪಕ್ಷ ಸುಸ್ತಾಗಿ ಹೋಗಿದೆ. ವಸ್ತುಸ್ಥಿತಿ ಏನೆಂದರೆ ಬಿಜೆಪಿ ಆಡಳಿತದ ವಿರುದ್ಧದ ಅಲೆಯನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಗಣನೀಯ ಯಶಸ್ಸು ಸಾಧಿಸಿತ್ತು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಂಡ ನಂತರ ರಾಜ್ಯದಲ್ಲಿ ಎದುರಾದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು ಅದಕ್ಕೆ ಸಾಕ್ಷಿ.

ಆದರೆ, ಈಗ ಇದ್ದಕ್ಕಿದ್ದಂತೆ ಬಿಜೆಪಿ ಒಂದರ ಹಿಂದೊಂದರಂತೆ ಭಾವನಾಸ್ತ್ರಗಳನ್ನು ಪ್ರಯೋಗಿಸತೊಡಗಿದ್ದು, ಇವುಗಳಿಗೆ ಉತ್ತರಿಸಿದರೂ ಕಷ್ಟ, ಉತ್ತರಿಸದೆ ಹೋದರೂ ಕಷ್ಟ ಎಂಬ ಸಂಕಷ್ಟಕ್ಕೆ ಕಾಂಗ್ರೆಸ್ ಸಿಲುಕಿಕೊಂಡಿದೆ. ಹೀಗೆ ಪ್ರಯೋಗವಾಗುತ್ತಿರುವ ಭಾವನಾಸ್ತ್ರಗಳು ಹೇಗಿವೆ ಎಂದರೆ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಕ್ರಿಯಿಸಿದರೂ ಸಾಕು, ಆ ಪಕ್ಷ ಮುಸ್ಲಿಂ ಪಕ್ಷಪಾತಿ ಎಂದು ಎತ್ತಿ ತೋರಿಸಿ ಟೀಕೆ ಮಾಡುವುದು ಬಿಜೆಪಿ ನಾಯಕರಿಗೆ ಸುಲಭವಾಗುತ್ತಿದೆ.

ಸರ್ಕಾರದ ವಿರುದ್ಧದ ಅಸ್ತ್ರಗಳನ್ನು ಬಳಸಿಕೊಂಡು ಮುನ್ನುಗ್ಗಬೇಕಾದವರು ನಾವು. ಆದರೆ, ಪರಿಸ್ಥಿತಿ ಹೇಗಿದೆ ಎಂದರೆ ಬಿಜೆಪಿ ಪ್ರಯೋಗಿಸುತ್ತಿರುವ ಭಾವನಾಸ್ತ್ರಗಳಿಗೆ ಉತ್ತರ ನೀಡುವುದೇ ನಮಗೆ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್ ನಾಯಕರು ಆಪ್ತ ವಲಯಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಮೊದಲೇ ರಾಜ್ಯದಲ್ಲಿ ನಾಯಕತ್ವಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಪೈಪೋಟಿ ನಡೆಯುತ್ತಿದೆ.

ಇದರ ಫಲವಾಗಿ ಪಕ್ಷ ತಳ ಮಟ್ಟದಲ್ಲಿ ಬಿರುಕು ಕಂಡಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಪ್ರಯೋಗಿಸುತ್ತಿರುವ ಭಾವನಾಸ್ತ್ರಗಳು ದಿನ ಕಳೆದಂತೆ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂಬ ಭಾವನೆ ಗಟ್ಟಿಯಾಗುವಂತೆ ಮಾಡುತ್ತಿದ್ದು, ಇದನ್ನು ಎದುರಿಸುವುದು ಹೇಗೆ?, ಎಂಬುದೇ ರಾಜ್ಯ ಕಾಂಗ್ರೆಸ್ ಪಾಲಿಗೆ ದೊಡ್ಡ ಪ್ರಶ್ನೆಯಾಗಿ ಕಾಡತೊಡಗಿದೆ.

ಇದನ್ನೂ ಓದಿ: ನಮ್ಮೆಲ್ಲ ಸ್ವಾಮೀಜಿಗಳ ಉದ್ದೇಶ ಒಂದೇ ಸಿದ್ದರಾಮಯ್ಯರನ್ನ ಸೋಲಿಸೋದು.. ಪ್ರಣವಾನಂದ ಸ್ವಾಮೀಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.