ETV Bharat / state

ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ಫುಲ್​ ಸೀಕ್ರೆಟ್: ಸ್ಪರ್ಧೆಯ ರಹಸ್ಯ ಕಾಪಾಡುವ ಒಳಮರ್ಮವೇನು? - Assembly election

ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ರಾಜ್ಯದಲ್ಲಿ ತಾವು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎನ್ನುವ ಮಹದಾಸೆ ಹೊಂದಿರುವ ಸಿದ್ದರಾಮಯ್ಯ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಕ್ಷೇತ್ರದ ಆಯ್ಕೆಯನ್ನು ರಹಸ್ಯವಾಗಿಟ್ಟಿದ್ದಾರೆ.

siddaramaiah
ಸಿದ್ದರಾಮಯ್ಯ
author img

By

Published : Nov 24, 2022, 6:49 AM IST

Updated : Nov 24, 2022, 7:02 AM IST

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಕ್ಷೇತ್ರದ ಆಯ್ಕೆಯನ್ನು ರಹಸ್ಯವಾಗಿಟ್ಟಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಅವರು ಯಾವ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನುವ ಕುತೂಹಲ ಇಮ್ಮಡಿಗೊಂಡಿದೆ. ಆದರೆ, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯ ಯಾವುದಾದರೊಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆಂದು ನಿರೀಕ್ಷೆಯಲ್ಲಿದ್ದವರಿಗೆ ಈ ರೀತಿಯ ರಹಸ್ಯ ಕಾಪಾಡುವಿಕೆ ನಿರಾಸೆ ಮೂಡಿಸಿದೆ.

ಕಾಂಗ್ರೆಸ್ ಪಕ್ಷದ ಟಿಕೆಟ್​ಗಾಗಿ ಅರ್ಜಿ ಸಲ್ಲಿಸುವಾಗ ಸಿದ್ದರಾಮಯ್ಯನವರು ಸ್ಪರ್ಧಿಸುವ ಕ್ಷೇತ್ರವನ್ನು ಬಹಿರಂಗಪಡಿಸಲಿದ್ದಾರೆ ಎನ್ನುವುದು ಎಲ್ಲರ ಲೆಕ್ಕಾಚಾರವಾಗಿತ್ತು. ಇಲ್ಲಿಯವರೆಗೆ ಕ್ಷೇತ್ರದ ಆಯ್ಕೆ ಬಗ್ಗೆ ಗುಟ್ಟು ಬಿಟ್ಟುಕೊಡದ ಸಿದ್ದು, ಸ್ಪರ್ಧಿಸುವ ಕೊನೆಯ ಕ್ಷಣದವರೆಗೂ ಅಂದರೆ ಕೇಂದ್ರ ಚುನಾವಣೆ ಆಯೋಗವು ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆ ಮಾಡುವ ತನಕ ಕ್ಷೇತ್ರ ಆಯ್ಕೆ ಬಹಿರಂಗಪಡಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸ್ಪರ್ಧೆಗೆ ಕ್ಷೇತ್ರವಿಲ್ಲ, ಅವರು ಪರದೇಶಿ ಇದ್ದಂತೆ: ಶ್ರೀರಾಮುಲು ವ್ಯಂಗ್ಯ

ಸಿದ್ದು ರಹಸ್ಯದ ಒಳಗುಟ್ಟೇನು?: ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ರಾಜ್ಯದಲ್ಲಿ ತಾವು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆನ್ನುವ ಮಹದಾಸೆ ಹೊಂದಿರುವ ಸಿದ್ದರಾಮಯ್ಯನವರನ್ನು ವಿಧಾನಸಭೆ ಪ್ರವೇಶಿಸದಂತೆ ಆರಂಭದಲ್ಲಿಯೇ ತಡೆಯಲು ಹಲವರು ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದೊಳಗಿನವರೂ ಸೇರಿದಂತೆ ಅನ್ಯ ಪಕ್ಷದವರು ಅವರನ್ನು ಸೋಲಿಸಲು ಒಗ್ಗಟ್ಟಾಗಲಿದ್ದಾರೆ. ಇದಕ್ಕೆ ಅವಕಾಶ ನೀಡಬಾರದೆನ್ನುವ ಉದ್ದೇಶದಿಂದ ಕ್ಷೇತ್ರ ಆಯ್ಕೆ ಬಗ್ಗೆ ರಹಸ್ಯ ಕಾಪಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ, ಜೆಡಿಎಸ್ ಪಕ್ಷಗಳ ಜತೆಗೆ ಕಾಂಗ್ರೆಸ್ ಪಕ್ಷದಲ್ಲಿರುವ ತಮ್ಮ ರಾಜಕೀಯ ಹಿತಶತ್ರುಗಳು ಒಟ್ಟಾಗಿ ಸೇರಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದರೆ ಗೆಲುವಿಗೆ ತೊಡಕಾಗಬಹುದು ಎನ್ನುವ ಮುಂದಾಲೋಚನೆಯಿಂದ ಅವರು ಕ್ಷೇತ್ರ ಆಯ್ಕೆ ವಿಚಾರದಲ್ಲಿ ಯಾವುದೇ ಸುಳಿವು ಕೊಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಆ್ಯಂಡ್ ಟೀಮ್​ನಿಂದ 400 ಕೋಟಿ ರೂಪಾಯಿ ಆಸ್ತಿ ಲೂಟಿ : ಲೋಕಾಯುಕ್ತಕ್ಕೆ ಎನ್​ ಆರ್ ರಮೇಶ್ ದೂರು

2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರುಗಳ ಜತೆ, ಒಂದು ಕಾಲದ ಸ್ನೇಹಿತರಾಗಿದ್ದ ಮಾಜಿ ಸಚಿವ ವಿ ಶ್ರೀನಿವಾಸ ಪ್ರಸಾದ್, ಹೆಚ್ ವಿಶ್ವನಾಥ್ ಅವರು ಸಿಂಡಿಕೇಟ್ ರಚಿಸಿಕೊಂಡು ಸಿದ್ದರಾಮಯ್ಯನವರು ತವರು ಕ್ಷೇತ್ರದಲ್ಲಿಯೇ ಸೋಲುವಂತೆ ಕೆಲಸ ಮಾಡಿದ ಕಹಿ ಅನುಭವದಿಂದ ಪಾಠ ಕಲಿತ ಸಿದ್ದು, ಕ್ಷೇತ್ರ ಆಯ್ಕೆ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸೋಲಬಹುದೆನ್ನುವ ಮುನ್ಸೂಚನೆ ಅರಿತ ಸಿದ್ದರಾಮಯ್ಯನವರು ಮುಂದಾಲೋಚನೆಯಿಂದ ಬಾದಾಮಿ ಕ್ಷೇತ್ರದಿಂದಲೂ 2018ರಲ್ಲಿ ಸ್ಪರ್ಧಿಸಿದ್ದರು. ತವರು ಕ್ಷೇತ್ರದ ಜೊತೆಗೆ ಉತ್ತರ ಕರ್ನಾಟಕದ ಬಾದಾಮಿಯಲ್ಲಿ ಸ್ಪರ್ಧಿಸಿದ ಅವರನ್ನು ಸೋಲಿಸಲು ಬಿಜೆಪಿ ತನ್ನ ಪ್ರಬಲ ಅಭ್ಯರ್ಥಿಯನ್ನಾಗಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿ ಭಾರಿ ಪೈಪೋಟಿ ನೀಡಿತ್ತು. ಕೂದಲೆಳೆ ಅಂತರದಲ್ಲಿ ಸಿದ್ದರಾಮಯ್ಯನವರು ಸೋಲಿನ ದವಡೆಯಿಂದ ಪಾರಾಗಿ ಅತ್ಯಲ್ಪ ಮತಗಳ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಬೇಕಾಯಿತು.

ಇದನ್ನೂ ಓದಿ: ಟಿಕೆಟ್​ಗೆ ಅರ್ಜಿ ಸಲ್ಲಿಕೆ ದಿನ ಮುಕ್ತಾಯ: ಆಕಾಂಕ್ಷಿಗಳ ನಡುವೆ ಶುರುವಾದ ಫೈಟ್

ಈ ಬಾರಿಯೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಿ ಕೆ ಶಿವಕುಮಾರ್, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್, ಎಐಸಿಸಿ ಅಧ್ಯಕ್ಷರಾಗಿರುವ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ಕೆ ಹೆಚ್ ಮುನಿಯಪ್ಪ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬಿಜೆಪಿಯ ನಾಯಕರುಗಳು ತಮ್ಮ ಸೋಲಿಗೆ ಒಗ್ಗಟ್ಟಾಗಿ ವ್ಯೂಹ ರಚಿಸಿಕೊಂಡು ಕೆಲಸ ಮಾಡುತ್ತಾರೆನ್ನುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಕ್ಷೇತ್ರ ಆಯ್ಕೆಯನ್ನು ಕೊನೆಯ ಕ್ಷಣದವರೆಗೂ ರಹಸ್ಯವಾಗಿಡುತ್ತಿದ್ದಾರೆ ಎನ್ನಲಾಗಿದೆ.

3 ಕ್ಷೇತ್ರಗಳ ಶಾರ್ಟ್ ಲಿಸ್ಟ್: ಕ್ಷೇತ್ರ ಆಯ್ಕೆ ಬಗ್ಗೆ ಗುಟ್ಟು ಬಿಟ್ಟುಕೊಡದ ಸಿದ್ದರಾಮಯ್ಯನವರು 3 ಕ್ಷೇತ್ರಗಳ ಶಾರ್ಟ್ ಲಿಸ್ಟ್ ಮಾಡಿ ಅವುಗಳನ್ನು ಬಹಿರಂಗಪಡಿಸಿದ್ದಾರೆ. ಕೋಲಾರ, ವರುಣ ಮತ್ತು ಬಾದಾಮಿ ಕ್ಷೇತ್ರಗಳ ಪೈಕಿ ಯಾವುದಾದರೊಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಈ ಕ್ಷೇತ್ರಗಳ ಜತೆಗೆ ಬೆಂಗಳೂರಿನ ಚಾಮರಾಜಪೇಟೆ ಸೇರಿದಂತೆ ಉತ್ತಮ ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡ ಬಂದರೆ ಪರಿಗಣಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

Last Updated : Nov 24, 2022, 7:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.