ಬೆಂಗಳೂರು: ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ ಬೆಂಗಳೂರಿನ ಹೆಚ್ಎಎಲ್ ರಸ್ತೆಯ ಮಣಿಪಾಲ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇಂದು ಏಕಾಏಕಿ ದಲಿತ ಕವಿ ಇನ್ನಿಲ್ಲ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಈ ಬಗ್ಗೆ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೂಡ ಟ್ವೀಟ್ ಮಾಡಿದ್ದರು. ಆದರೆ ಇದೀಗ ಸಿದ್ದಲಿಂಗಯ್ಯನವರ ಸಹೋದರ ಶಿವಶಂಕರ್ ಸ್ಪಷ್ಟೀಕರಣ ನೀಡಿದ್ದು, ಸಿದ್ದಲಿಂಗಯ್ಯ ಆರೋಗ್ಯವಾಗಿದ್ದಾರೆ ಎಂದಿದ್ದಾರೆ.
ದಲಿತ ಕವಿ ಸಿದ್ದಲಿಂಗಯ್ಯ ಆರೋಗ್ಯದ ಕುರಿತಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡಿದ್ದಾರೆ. ಕೋವಿಡ್ ಪಾಸಿಟಿವ್ ಬಂದಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅರೋಗ್ಯ ಕೂಡ ಸುಧಾರಣೆಯಾಗುತ್ತಿದೆ ಎಂದಿದ್ದಾರೆ.
ಆಸ್ಪತ್ರೆಯಲ್ಲಿ ಇರುವುದು ನಿಜ, ಆದರೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಅವರ ಅರೋಗ್ಯ ಬೇಗ ಸುಧಾರಿಸಲಿ ಎಂದು ನಂಬಿರುವ ಶಕ್ತಿಗಳ ಹತ್ತಿರ ಪ್ರಾರ್ಥನೆ ಮಾಡಬೇಕು ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
-
ದಯಮಾಡಿ ವಿಕೃತ ಸುಳ್ಳು ಸುದ್ದಿ ಹರಡಬೇಡಿ ಮತ್ತು ನಂಬಬೇಡಿ. ಕವಿ ಸಿದ್ಧಲಿಂಗಯ್ಯನವರು ಕ್ಷೇಮ.
— Nagathihalli Chandrashekhar (@NomadChandru) May 6, 2021 ." class="align-text-top noRightClick twitterSection" data="
.">ದಯಮಾಡಿ ವಿಕೃತ ಸುಳ್ಳು ಸುದ್ದಿ ಹರಡಬೇಡಿ ಮತ್ತು ನಂಬಬೇಡಿ. ಕವಿ ಸಿದ್ಧಲಿಂಗಯ್ಯನವರು ಕ್ಷೇಮ.
— Nagathihalli Chandrashekhar (@NomadChandru) May 6, 2021
.ದಯಮಾಡಿ ವಿಕೃತ ಸುಳ್ಳು ಸುದ್ದಿ ಹರಡಬೇಡಿ ಮತ್ತು ನಂಬಬೇಡಿ. ಕವಿ ಸಿದ್ಧಲಿಂಗಯ್ಯನವರು ಕ್ಷೇಮ.
— Nagathihalli Chandrashekhar (@NomadChandru) May 6, 2021
ಈ ಕೆಟ್ಟ ಸುದ್ದಿಯನ್ನು ಯಾರೂ ನಂಬಬಾರದು ಮತ್ತು ಈ ತರಹದ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ. ಮತ್ತೊಮ್ಮೆ ಹೇಳುತ್ತೇನೆ ಸಿದ್ದಲಿಂಗಯ್ಯ ಆರೋಗ್ಯವಾಗಿದ್ದು, ಅಭಿಮಾನಿಗಳಾದ ನೀವು ಮತ್ತು ನಾನು ದಲಿತ ಕವಿ ಸಿದ್ದಲಿಂಗಯ್ಯ ಆರೋಗ್ಯಕ್ಕೆ ಪ್ರಾರ್ಥನೆ ಮಾಡೋಣ ಎಂದು ಸ್ಪಷ್ಟನೆ ನೀಡಿದ್ದಾರೆ.