ETV Bharat / state

ಸಣ್ಣ ಕೈಗಾರಿಕೆ ಉಳಿವಿಗೆ ಕೇಂದ್ರ ನೆರವಾಗಬೇಕು : ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರ ಮನವಿ - small scale industries

ವಿದ್ಯುತ್ ಇಲಾಖೆಯಿಂದ ಸಣ್ಣ ಕೈಗಾರಿಕೆಗಳಿಗೆ ವಿನಾಯಿತಿ ನೀಡಬೇಕು, ಸಣ್ಣ ಕೈಗಾರಿಕೆಗಳಿಗೆ ಒಂದು ಯೂನಿಟ್‌ಗೆ ಒಂದು ರೂಪಾಯಿ ಕಡಿತ ಗೊಳಿಸಬೇಕು.ಆಗ ಸಣ್ಣ ಕೈಗಾರಿಕೆಗಳು ಕಳೆದ ಒಂದು ತಿಂಗಳಿನಿಂದ ಉತ್ಪಾದನೆಯಿಲ್ಲದ ಸರಕನ್ನು ಉತ್ಪಾದಿಸಲು ಅನುಕೂಲವಾಗುತ್ತದೆ.

Shrinivas astranna
ಪೀಣ್ಯಾ ಕೈಗಾರಿಕಾ ವಲಯ ಸಂಘದ ಅಧ್ಯಕ್ಷ ಶ್ರೀನಿವಾಸ್ ಅಸ್ರಣ್ಣ
author img

By

Published : Apr 4, 2020, 1:41 PM IST

ನೆಲಮಂಗಲ: ಕೇಂದ್ರ ಸರ್ಕಾರದ ಲಾಕ್‌ಡೌನ್‌ಗೆ ಪೀಣ್ಯ ಕೈಗಾರಿಕಾ ವಲಯ ಉತ್ತಮವಾಗಿ ಸ್ಪಂದಿಸುತ್ತಿದೆ. ಸಣ್ಣ ಕೈಗಾರಿಕೆಗಳ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಅದಷ್ಟೂ ಬೇಗ ಸ್ಪಂದಿಸಬೇಕು ಎಂದು ಪೀಣ್ಯಾ ಕೈಗಾರಿಕಾ ವಲಯ ಸಂಘದ ಅಧ್ಯಕ್ಷ ಶ್ರೀನಿವಾಸ್ ಅಸ್ರಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ರೋಗ ತಡೆಗೆ ಪ್ರಧಾನಮಂತ್ರಿಗಳು ಉತ್ತಮ ಕ್ರಮ ಕೈಗೊಂಡಿದ್ದಾರೆ. ಲಾಕ್‌ಡೌನ್ ಘೋಷಣೆಯಾದ ಮರುಕ್ಷಣವೇ ಬೃಹತ್ ಪೀಣ್ಯ ಕೈಗಾರಿಕಾ ವಲಯ ಸ್ತಬ್ಧವಾಗಿದೆ. ನಾವು ಕೂಡ ಲಾಕ್‌ಡೌನ್​ಗೆ ಶೇ. 100ರಷ್ಟು ಸಹಕಾರ ನೀಡಿದ್ದೇವೆ. 8500 ಕೈಗಾರಿಕೆಗಳು ಪೀಣ್ಯ ಕೈಗಾರಿಕಾ ವಲಯದಲ್ಲಿವೆ. ಎಲ್ಲಾ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಕಳೆದ ಆರ್ಥಿಕ ವರ್ಷದಲ್ಲಿ ಆಮೆಗತಿ ಸಾಗಿದ ಆರ್ಥಿಕತೆಯಿಂದಾಗಿ ಕೈಗಾರಿಕೆಗಳು ಕುಗ್ಗಲ್ಪಟ್ಟಿವೆ. ಇದೀಗ ಮತ್ತೆ ಮುಚ್ಚಿರುವುದರಿಂದ ಸಣ್ಣ ಕೈಗಾರಿಕೆಗಳು ಭಾರಿ ಸಂಕಷ್ಟದಲ್ಲಿವೆ ಎಂದು ತಿಳಿಸಿದರು.

ಪೀಣ್ಯಾ ಕೈಗಾರಿಕಾ ವಲಯ ಸಂಘದ ಅಧ್ಯಕ್ಷ ಶ್ರೀನಿವಾಸ್ ಅಸ್ರಣ್ಣ..

ಕೊರೊನಾ ಎಫೆಕ್ಟ್‌ನಿಂದಾಗಿ ಸಣ್ಣ ಕೈಗಾರಿಕೆಗಳು ಭಾರಿ ಸಂಕಷ್ಟದಲ್ಲಿವೆ. ಆದ್ದರಿಂದ ಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ತಿಳಿಸಿರುವಂತೆ ಮೂರು ತಿಂಗಳ ಇಎಂಐ ಮುಂದೂಡಿರುವುದು ಸ್ವಾಗತಾರ್ಹ. ಆದರೆ, ಮೂರು ತಿಂಗಳ ನಂತರ ಕಾರ್ಖಾನೆಗಳಿಗೆ ಚಕ್ರಬಡ್ಡಿ ವಿಧಿಸದಂತೆ ಮನವಿ ಮಾಡಿದ್ದಾರೆ. ವಿದ್ಯುತ್ ಇಲಾಖೆಯಿಂದ ಸಣ್ಣ ಕೈಗಾರಿಕೆಗಳಿಗೆ ವಿನಾಯಿತಿ ನೀಡಬೇಕು, ಸಣ್ಣ ಕೈಗಾರಿಕೆಗಳಿಗೆ ಒಂದು ಯೂನಿಟ್‌ಗೆ ಒಂದು ರೂಪಾಯಿ ಕಡಿತ ಗೊಳಿಸಬೇಕು.

ಆಗ ಸಣ್ಣ ಕೈಗಾರಿಕೆಗಳು ಕಳೆದ ಒಂದು ತಿಂಗಳಿನಿಂದ ಉತ್ಪಾದನೆಯಿಲ್ಲದ ಸರಕನ್ನು ಉತ್ಪಾದಿಸಲು ಅನುಕೂಲವಾಗುತ್ತದೆ. ಕಾರ್ಮಿಕರಿಗೆ ಒಂದು ತಿಂಗಳ ಉಚಿತ ವೇತನ ಕೊಡುತ್ತೇವೆ. ಆದರೆ, ಅದಕ್ಕೆ ಕೇಂದ್ರ ಸರ್ಕಾರ ಮೀಸಲಿಟ್ಟಿರುವ ಹಣ ಬಿಡುಗಡೆ ಮಾಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.