ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯ ಕೌನ್ಸಿಲ್ ಕಟ್ಟಡದ ಎರಡನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ.
ಎರಡನೇ ಮಹಡಿ ಸಂಪೂರ್ಣ ದಟ್ಟ ಹೊಗೆಯಿಂದ ಆವರಿಸಿದ ಹಿನ್ನೆಲೆ ಇದನ್ನು ಕಂಡ ಸೆಕ್ಯೂರಿಟಿ ಸಿಬ್ಬಂದಿ ತಕ್ಷಣ ವಿದ್ಯುತ್ ಬಂದ್ ಮಾಡಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಎರಡನೇ ಮಹಡಿಯಲ್ಲಿದ್ದ ಲೆಕ್ಕಪತ್ರ ಸ್ಥಾಯಿಸಮಿತಿ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಕೋಣೆಗಳಳಿಗೆ ಭಾರೀ ಹೊಗೆ ತುಂಬಿಕೊಂಡಿದೆ. ಸಜನಪ್ರತಿನಿಧಿಗಳ ಅಧಿಕಾರಾವಧಿ ಮುಗಿದು ಮೂರುವರೇ ತಿಂಗಳಾದ ಕಾರಣ ಕೊಠಡಿಯಲ್ಲಿ ಯಾವುದೇ ಕಡತಗಳು ಇರಲಿಲ್ಲ. ಕಂಪ್ಯೂಟರ್, ವಿದ್ಯುತ್ ಉಪಕರಣಗಳು ಶಾರ್ಟ್ ಸರ್ಕ್ಯೂಟ್ ನಿಂದ ಹಾನಿಗೊಳಗಾಗಿವೆ.