ETV Bharat / state

ವಹಿವಾಟು ನಿಲ್ಲಿಸಿ ಅಪ್ಪು ನಿಧನಕ್ಕೆ ವ್ಯಾಪಾರಸ್ಥರ ಸಂತಾಪ.. ಮೆಜೆಸ್ಟಿಕ್‌ ಖಾಲಿ.. ಖಾಲಿ.. - ಅಪ್ಪು ನಿಧನಕ್ಕೆ ವ್ಯಾಪಾರಸ್ಥರ ಸಂತಾಪ

ಮೆಜೆಸ್ಟಿಕ್ ಸುತ್ತಮುತ್ತ ಎಲ್ಲ ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡಲಾಗಿದೆ. ಇಂದು ಸಂಜೆ 6:30ಕ್ಕೆ ತಮ್ಮ ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡಿರುವ ಮಾಲೀಕರು, ನಟನಿಗೆ ಸಂತಾಪ ಸೂಚಿಸಿದ್ದಾರೆ. ಟ್ರಾಫಿಕ್​ನಿಂದ ತುಂಬಿ ತುಳುಕತ್ತಿದ್ದ ಮೆಜೆಸ್ಟಿಕ್ ರೋಡ್, ಬೆರಳೆಣಿಕೆಯಷ್ಟೇ ವಾಹನಗಳ ಸಂಚಾರದಿಂದ ಖಾಲಿ ಖಾಲಿ ಕಾಣುತ್ತಿದೆ..

Shops closed in Majestic Bangalore
ವಹಿವಾಟು ನಿಲ್ಲಿಸಿ ಅಪ್ಪು ನಿಧನಕ್ಕೆ ವ್ಯಾಪಾರಸ್ಥರ ಸಂತಾಪ
author img

By

Published : Oct 29, 2021, 8:10 PM IST

ಬೆಂಗಳೂರು : ಬಾಲ ನಟನಾಗಿ ಮುಗ್ಧ ಅಭಿನಯದಿಂದ ಹಿಡಿದು ಇಂದಿನವರೆಗೆ ದಶಕಗಳ ಕಾಲ ಕನ್ನಡ ಚಿತ್ರ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆದ ನಮ್ಮ ಪ್ರೀತಿಯ ಅಪ್ಪು. ಕನ್ನಡದ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್​​​ ಚಿತ್ರನಟ ಮಾತ್ರವಲ್ಲದೇ ಹಿನ್ನೆಲೆ ಗಾಯನ, ನಿರೂಪಕರಾಗಿಯೂ ಕೂಡ ಸ್ಯಾಂಡಲ್​ವುಡ್​ನಲ್ಲಿ ಛಾಪು ಮೂಡಿಸಿದವರು.

ನಟ ಪುನೀತ್ ರಾಜ್ ಕುಮಾರ್ ನಿಧನ ಅವರ ಕುಟುಂಬ, ಕನ್ನಡ ಚಿತ್ರರಂಗ ಸೇರಿದಂತೆ ಅಪಾರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಅಲ್ಲದೇ ಪ್ರೀತಿಯ ನಟನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಅಪ್ಪು ಅಗಲಿಕೆಗೆ ಮೆಜೆಸ್ಟಿಕ್​ನಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್​ ಮಾಡಿ ಸಂತಾಪ ಸೂಚಿಸಲಾಗಿದೆ.

ಮೆಜೆಸ್ಟಿಕ್ ಸುತ್ತಮುತ್ತ ಎಲ್ಲ ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡಲಾಗಿದೆ. ಇಂದು ಸಂಜೆ 6:30ಕ್ಕೆ ತಮ್ಮ ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡಿರುವ ಮಾಲೀಕರು, ನಟನಿಗೆ ಸಂತಾಪ ಸೂಚಿಸಿದ್ದಾರೆ. ಟ್ರಾಫಿಕ್​ನಿಂದ ತುಂಬಿ ತುಳುಕತ್ತಿದ್ದ ಮೆಜೆಸ್ಟಿಕ್ ರೋಡ್, ಬೆರಳೆಣಿಕೆಯಷ್ಟೇ ವಾಹನಗಳ ಸಂಚಾರದಿಂದ ಖಾಲಿ ಖಾಲಿ ಕಾಣುತ್ತಿದೆ.

ನಟ ಪುನೀತ್‌ ರಾಜ್‌ಕುಮಾರ್‌ ಅವರ ಸದಾಶಿವನಗರದ ನಿವಾಸದಲ್ಲಿ ಕುಟುಂಬಸ್ಥರು, ಗಣ್ಯಾತಿಗಣ್ಯರು, ಹಿತೈಷಿಗಳು ಪುನೀತ್‌ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಕಂಠೀರವ ಸ್ಟೇಡಿಯಂ ಅಂತಿಮ ದರ್ಶನಕ್ಕಿರಿಸಲಾಗಿದೆ. ಸಾರ್ವಜನಿಕರ ದರ್ಶನಕ್ಕಾಗಿ ಕಂಠೀರವ ಸ್ಟೇಡಿಯಂನಲ್ಲಿ ಸಕಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಓದಿ: ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ತಂದೆಯ ಬಯೋಪಿಕ್.. 'ರಾಜಕುಮಾರ'ನ ಕನಸುಗಳು ಕೈಗೂಡಲಿಲ್ಲ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.