ETV Bharat / state

ಹೆಡ್ ಕಾನ್​ಸ್ಟೇಬಲ್​ಗೆ ಚಾಕು ಇರಿತ ಪ್ರಕರಣ: ಆರೋಪಿಗೆ ಗುಂಡಿನೇಟು - ಆರೋಪಿಗೆ ಗುಂಡೇಟು‌ ಹಾಕಿದ ಖಾಕಿ ಲೆಟೆಸ್ಟ್ ನ್ಯೂಸ್

ಕಳೆದೆರಡು ದಿನಗಳ ಹಿಂದೆ ಆರ್.ಟಿ‌.ನಗರ ಪೊಲೀಸ್ ಠಾಣೆಯ ಹೆಡ್​​ ಕಾನ್​ಸ್ಟೇಬಲ್​ಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ
accused
author img

By

Published : Dec 2, 2019, 9:32 AM IST

Updated : Dec 2, 2019, 1:40 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಎರಡು ದಿನಗಳ ಹಿಂದೆ ಪೊಲೀಸ್ ಸಿಬ್ಬಂದಿಗೆ ಚಾಕು ಹಾಕಿದ್ದ ದುಷ್ಕರ್ಮಿಗೆ ಖಾಕಿ ಪಡೆ ಗುಂಡಿನೇಟು ಕೊಟ್ಟಿದೆ.

ಪೊಲೀಸರಿಗೆ ಚಾಕು ಹಾಕಿದ್ದ ದುಷ್ಕರ್ಮಿಗೆ ಗುಂಡೇಟು

ಕಳೆದೆರಡು ದಿನಗಳ ಹಿಂದೆ ಆರ್.ಟಿ‌.ನಗರ ಪೊಲೀಸ್ ಠಾಣೆಯ ಹೆಡ್​​ ಕಾನ್​ಸ್ಟೇಬಲ್​ಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮರ್ಧಾನ್ ಖಾನ್ ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ: ಆರ್.ಟಿ‌.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಡಾರಿಗಳು ಗಲಾಟೆ ಮಾಡುತ್ತಿದ್ದರು. ಈ ವೇಳೆ, ಠಾಣೆಯ ಹೆಡ್​ ಕಾನ್​ಸ್ಟೇಬಲ್ ಗಲಾಟೆ ಬೀಡಿಸಲು ಹೋದಾಗ ಮರ್ಧಾನ್ ಖಾನ್ ನಾಗರಾಜ್ ಎಂಬುವವರ ಹೊಟ್ಟೆಗೆ ಎರಡು ಬಾರಿ ಚಾಕು ಇರಿದು ಪರಾರಿಯಾಗಿದ್ದ. ಕೂಡಲೇ ನಾಗರಾಜ್ ಅವರನ್ನು ರಾಮಯ್ಯ ಆಸ್ಪತ್ರೆಗೆ ಸ್ಥಳೀಯರ ನೆರವಿನೊಂದಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ನಿನ್ನೆ ನಗರ ಆಯುಕ್ತ ಭಾಸ್ಕರ್ ರಾವ್ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.

ಪ್ರಕರಣ ಸಂಬಂಧ ಆರೋಪಿಯ ಬೆನ್ನು ಬಿದ್ದಿದ್ದ ಪೊಲೀಸರು ನಿನ್ನೆ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಚಾಕುವನ್ನು ವಶಕ್ಕೆ ಪಡೆದಿದ್ದರು. ಈ ನಡುವೆ, ಪಂಚನಾಮೆ ಮಾಡುತ್ತಿದ್ದ ವೇಳೆ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಈತನನ್ನು ಹಿಡಿಯಲು ಹೋದಾಗ ಪೇದೆ ಶ್ರೀಧರ್ ಮೂರ್ತಿ ಹಾಗೂ ಮುತ್ತಪ್ಪ ಎಂಬುವವರಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ, ಆರ್​ಟಿ ನಗರ ಇನ್ಸ್​ಪೆಕ್ಟರ್ ಮಿಥುನ್ ಶಿಲ್ಪಿ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರು. ಇದಕ್ಕೂ ಬಗ್ಗದೇ ಆರೋಪಿ ಕಲ್ಲಿನಿಂದ ಪೊಲೀಸ್ ಗ್ಲಾಸ್ ಒಡೆದಿದ್ದಾನೆ. ಎಚ್ಚೆತ್ತ ಪೊಲೀಸ್​ ಆರೋಪಿ ಮರ್ಧಾನ್ ಖಾನ್ ಕಾಲಿಗೆ ಎರಡು ಗುಂಡು ಹಾರಿಸಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಪಿ ವಿರುದ್ಧ ಉತ್ತರ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಡಾಕಯಿತಿ, ರಾಬರಿ‌ ಹೀಗೆ ನಾಲ್ಕು ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.

Intro:ಹೆಡ್ ಕಾನ್ಸ್‌ಟೇಬಲ್ಗೆ ಚಾಕು ಇರಿತ ಪ್ರಕರಣ
ಆರೋಪಿ ಕಾಲಿಗೆ ಗುಂಡೇಟು‌ ಮಾಡಿದ ಖಾಕಿ

ಕಳೆದೆರಡು ದಿನ ಹಿಂದೆ ಹೆಡ್ ಕಾನ್ಸ್‌ಟೇಬಲ್ ನಾಗರಾಜುಗೆ ಚಾಕು ಹಾಕಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ಬೆನ್ನು ಬಿದ್ದಿದ್ದ ಪೊಲೀಸ್ರು ಆರೋಪಿಯನ್ನ ನಿನ್ನೆ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಚಾಕುವನ್ನ ರಿಕವರಿ ಹಾಗೂ ಪಂಚನಾಮೆ ಮಾಡುತ್ತಿದ್ದ ವೇಳೆ ಆರೋಪಿ ಎಸ್ಕೇಪ್ ಆಗಲು ಮುಂದಾಗಿದ್ದಾನೆ.

ಈ ವೇಳೆ ಆರೋಪಿಯನ್ನು ಹಿಡಿಯಲು ಪೇದೆ ಶ್ರೀಧರ್ ಮೂರ್ತಿ ಹಾಗೂ ಮುತ್ತಪ್ಪ‌ ಮುಂದಾದಗ ಚಾಕುವಿನಿಂದ ಇಬ್ಬರಿಗೆ ಇರಿದಿದ್ದಾನೆ.ತಕ್ಷಣ ಆರ್ ಟಿನಗರ ಇನ್ಸ್ಪೆಕ್ಟರ್ ಮಿಥುನ್ ಶಿಲ್ಪಿ ಶರಣಾಗುವಂತೆ ಸೂಚನೆ ನೀಡಿದ್ರು ಮತ್ತೆ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಲು ಮುಂದಾದಗ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದರೂ ಕೂಡ ಬಗ್ಗದ ಆರೋಪಿ ಕಲ್ಲಿನಿಂದ ಪೊಲೀಸ್ ಗ್ಲಾಸ್ ಹೊಡೆದಿದ್ದಾನೆ.

ಇದರಿಂದ ಎಚ್ಚೆತ್ತ ಇನ್ಸ್ಪೆಕ್ಟರ್ ಆರೋಪಿ ಮರ್ಧಾನ್ ಖಾನ್ ಕಾಲಿಗೆ ಎರಡು ಗುಂಡು ಹಾರಿಸಿ ನಂತ್ರ ಆರೋಪಿಯನ್ನ ಬಂಧೀಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೆ ಆರೋಪಿಯ‌ ಮೇಲೆ ಈ ಈ ಹಿಂದೆ ಉತ್ತರ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ ಡಾಕಯಿತಿ, ರಾಬರಿ‌ ಹೀಗೆ ನಾಲ್ಕು ಪ್ರಕರಣು ದಾಖಲಾಗಿದ್ದು ಸ್ಥಳಕ್ಕೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಭೇಟಿ ನೀಡಿ ತನೀಕೆ ಮುಂದುವರೆಸಿದ್ದಾರೆ.

ಹಿನ್ನೆಲೆ

ಆರ್.ಟಿ‌.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಡಾರಿಗಳು ಕಳೆದೆರಡು ದಿನ ಹಿಂದೆ ಗಲಾಟೆ ಮಾಡುತ್ತಿದ್ದ ರು. ಈ ವೇಳೆ
ಅರ್.ಟಿ.ನಗರ ಠಾಣೆಯ ಹೆಡ್ ಕಾನ್ ಸ್ಟೇಬಲ್ ಗಲಾಟೆ ಬೀಡಿಸಲು ಹೋದಾಗ ಮರ್ಧಾನ್ ಖಾನ್ ನಾಗರಾಜ್ ಹೊಟ್ಟೆಗೆ ಎರಡು ಬಾರಿ ಚಾಕು ಇರಿದು ಪರಾರಿಯಾಗಿದ್ದ. ನಂತ್ರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ನಾಗರಾಜ್ ಅವರನ್ನು ರಾಮಯ್ಯ ಆಸ್ಪತ್ರೆಗೆ ಸ್ಥಳೀಯರ ನೆರವಿನೊಂದಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ನಿನ್ನೆ ನಗರ ಆಯುಕ್ತ ಭಾಸ್ಕರ್ ರಾವ್ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.

Body:KN_BNG_01_SHOUTOUT_AV_7204498Conclusion:KN_BNG_01_SHOUTOUT_AV_7204498
Last Updated : Dec 2, 2019, 1:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.