ETV Bharat / state

ಜೈಲಿನಿಂದ ಬಂದವನಿಂದ ಮತ್ತೆ ದರೋಡೆ ಕೃತ್ಯ: ಕಾಲು ಸೀಳಿದ ಪೊಲೀಸ್ ಪಿಸ್ತೂಲ್​ - ಆತ್ಮರಕ್ಷಣೆಗೆ ಆರೋಪಿ ಕಾಲಿಗೆ ಪಿಎಸ್​ಐ ಗುಂಡೇಟು

bengaluru
ಶೂಟೌಟ್​
author img

By

Published : Dec 1, 2020, 7:39 AM IST

Updated : Dec 1, 2020, 8:19 AM IST

07:31 December 01

ಬೆಂಗಳೂರಲ್ಲಿ ಮತ್ತೆ ಪೊಲೀಸರ ಪಿಸ್ತೂಲು ಸೌಂಡ್​ ಮಾಡಿದೆ. ಬೆಳ್ಳಂಬೆಳಗ್ಗೆಯೇ ಮೋಸ್ಟ್​ ವಾಂಟೆಡ್​​ ದರೋಡೆಕೋರ ಅನ್ಬುನ್​ ಕಾಲಿಗೆ ನಂದಿನಿ ಲೇಔಟ್​ ಪೊಲೀಸರು ಗುಂಡು ಹಾರಿಸಿದ್ದಾರೆ.

ಬೆಂಗಳೂರು: ನಗರದಲ್ಲಿ ಕಳೆದ 10 ದಿನದಲ್ಲಿ 10 ದರೋಡೆ ಮಾಡಿದ್ದ ಆರೋಪಿಗೆ ಇಂದು ಬೆಳಗ್ಗೆಯೇ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.  

ಅನ್ಬುನ್​ ಪೊಲೀಸರ ಗುಂಡೇಟು ತಿಂದವ. ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಲ್ಲಿ ಪೊಲೀಸರ ಹಿಟ್​ ಲಿಸ್ಟ್​ನಲ್ಲಿದ್ದ ಆರೋಪಿ. ಹಾಗೆ ಈತ ಕೆಲ ದಿನಗಳ ಹಿಂದೆ ಲಾರಿ ಚಾಲಕನೋರ್ವನಿಗೆ ಚಾಕುವಿನಿಂದ ಇರಿದು 30 ಸಾವಿರ ರೂಪಾಯಿ ದೋಚಿದ್ದ. ಈ ಕುರಿತು ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಈ ಸಂಬಂಧ ಮೊದಲು ಅನ್ಬುನ್​ ಸಹಚರ ಅನ್ವರ್​​ನನ್ನು ಪೊಲೀಸರು ಬಂಧಿಸಿದ್ದರು.

ನಿನ್ನೆ ಅನ್ವರ್ ನೀಡಿದ ಮಾಹಿತಿ ಮೇರೆಗೆ ಇಂದು ನಂದಿನಿ ಲೇಔಟ್ ಪಿಎಸ್​​ಐ ಜೋಗಾನಂದ್ ಹಾಗೂ ಟೀಂ ಅನ್ಬುನ್​ ಬಂಧನಕ್ಕೆ ತೆರಳಿದ್ದರು. ನಂದಿನಿ ಲೇಔಟ್​ನ ಕೂಲಿ ಬ್ರಿಡ್ಜ್ ಬಳಿ ಇರುವ ಮಾಹಿತಿ ಮೇರೆಗೆ ಬಂಧಿಸಲು ಮುಂದಾದಾಗ ಪೊಲೀಸರ ಮೇಲೆಯೇ ಅನ್ಬುನ್​ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ‌ ಆತ್ಮರಕ್ಷಣೆಗಾಗಿ ಆರೋಪಿ ಅನ್ಬುನ್​ ಕಾಲಿಗೆ ಪಿಎಸ್​ಐ ಶೂಟ್​ ಮಾಡಿದ್ದಾರೆ. ಘಟನೆಯಲ್ಲಿ ಕಾನ್ಸ್​​ಟೇಬಲ್​ ಒಬ್ಬರು ಗಾಯಗೊಂಡಿದ್ದಾರೆ. ಸದ್ಯ ಆರೋಪಿ ಹಾಗೂ ಗಾಯಾಳು ಕಾನ್ಸ್​ಟೇಬಲ್​ ಅನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆರೋಪಿ ಮೇಲೆ ದಾಖಲಾದ ಪ್ರಕರಣಗಳನ್ನ ನೋಡುವುದಾದರೆ, ಈತ ಜಾಮಿನಿನ ಮೇಲೆ ಒಂದು ತಿಂಗಳ ಹಿಂದೆ ಹೊರಬಂದಿದ್ದ. ಬಂದವ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದಾನೆ. ಆರೋಪಿ ಅನ್ಬುನ್​ ತನ್ನ ಸಹಚರರ ಜೊತೆ ಸೇರಿಕೊಂಡು ನಗರದ ಮಹಾಲಕ್ಷ್ಮಿ ಲೇಔಟ್ ,ಯಶವಂತಪುರ ಸುಬ್ರಹ್ಮಣ್ಯ ನಗರ, ನಂದಿನಿ ಲೇಔಟ್, ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ದರೋಡೆ ಎಸಗಿದ್ದು, ಪ್ರಕರಣ ದಾಖಲಾಗಿದೆ. ಹಾಗೆ ದಿನಾಂಕ 22 /11/2020ರಂದು ಕುರುಬರಹಳ್ಳಿಯಲ್ಲಿ ಒಂದು ಮೊಬೈಲ್ ಕಸಿದಿದ್ದಾನೆ. 23/11/2020ರಂದು ಸಂಜಯ್​​​​ಗಾಂಧಿ ನಗರ ಬಳಿ ಕಾರು ಚಾಲಕನಿಂದ 5000 ನಗದು ಕದ್ದು, ಪರಾರಿಯಾಗಿದ್ದ. ಇದಾದ ಬಳಿಕ ಆರ್​​ಎಂಸಿ ಯಾರ್ಡ್ ಹಾಗೂ ನವರಂಗ್ ಚಿತ್ರ ಮಂದಿರದ ಬಳಿ ಕೂಡ ಕಳ್ಳತನಕ್ಕೆ ಯತ್ನಿಸಿದ ಆರೋಪ ಇದ್ದು, ಸದ್ಯ ತನಿಖೆ ಮುಂದಿವರೆದಿದೆ. 

Last Updated : Dec 1, 2020, 8:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.