ಬೆಂಗಳೂರು : ಕೆಆರ್ ಪುರದ ದೇವಸಂದ್ರ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಕೃಷ್ಣಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ದಿವಾಂಗತ ಎ.ಕೃಷ್ಣಪ್ಪ ಕುಟುಂಬದಿಂದ ವೇಣುಗೋಪಾಲ ದೇವಸ್ಥಾನದಲ್ಲಿ ಪ್ರತಿ ವರ್ಷ ಅದ್ಧೂರಿಯಾಗಿ ಕೃಷ್ಣಜನ್ಮಾಷ್ಟಮಿ ಆಚರಿಸಲಾಗುತ್ತದೆ. ಅದರಂತೆಯೇ ಈ ವರ್ಷ ಕೂಡ ಆಚರಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಪಿ.ಸಿ.ಮೋಹನ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಡಿಕೆ ಮೋಹನ್ ಬಾಬು ಪಾಲ್ಗೊಂಡಿದ್ದರು.
ಮಾಧ್ಯಮದವರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ನಾಡಿನ ಜನತೆಗೆ ಕೃಷ್ಣಜನ್ಮಾಷ್ಟಮಿಯ ಶುಭಾಶಯ ಕೋರಿ, ಕೃಷ್ಣನನ್ನು ನಂಬಿಕೊಂಡು ಬಂದ ಕುಟುಂಬ ಈ ಯಾದವ ಜನಾಂಗ. ಕೃಷ್ಣ ದುಷ್ಟರನ್ನು ಸಂಹಾರ ಮಾಡಿದಂತಹ ದೇವರು.
ದೇಶಕ್ಕೆ ಕೃಷ್ಣನ ಮಾರ್ಗದರ್ಶನ ಅವಶ್ಯಕವಿದೆ. ನರೇಂದ್ರ ಮೋದಿ ಹಾಗೂ ಅಮೀತ್ ಶಾ ಅವರಿಗೆ ಶ್ರೀಕೃಷ್ಣ ದೇಶವನ್ನು ಕಾಪಾಡಲು ಇನ್ನಷ್ಟು ಶಕ್ತಿ ನೀಡಲಿ. ದುಷ್ಟರ ಸಂಹಾರ ಮಾಡುವ ಶಕ್ತಿ ನೀಡಲಿ. ದೇಶದ ಗಡಿಭಾಗಗಳನ್ನು ಆಂತರಿಕ ಭದ್ರತೆಯನ್ನು ಕಾಪಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.