ಬೆಂಗಳೂರು: ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ನಗರದ ಶಿವನ ದೇಗುಲಗಳಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಕೊರೊನಾ ಸೋಂಕಿನಿಂದ ಕಳೆದೆರಡು ವರ್ಷಗಳಿಂದ ಹಬ್ಬ ಆಚರಣೆಗೆ ಅವಕಾಶ ಇರಲಿಲ್ಲ. ದೇವಸ್ಥಾನಗಳಲ್ಲಿ ಪೂಜೆಗಷ್ಟೇ ಸೀಮಿತಗೊಳಿಸಿ, ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಈ ಬಾರಿ ಕೊರೊನಾ ಇಳಿಮುಖವಾಗಿದ್ದು, ನಗರದ ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಶಿವರಾತ್ರಿಗಾಗಿ ವಿಶೇಷ ಪೂಜೆ ನಡೆ ಕೈಂಕರ್ಯಗಳು ಜರುಗಲಿವೆ.
ಬೆಂಗಳೂರಿನ ಪುರಾತನ ಗವಿಗಂಗಾಧರೇಶ್ವರ ದೇವಸ್ಥಾನ, ಕಾಶಿ ವಿಶ್ವೇಶ್ವರ ದೇವಸ್ಥಾನ, ಕಾಡು ಮಲ್ಲೇಶ್ವರ ಹೀಗೆ ನೂರಾರು ಕಡೆಗಳಲ್ಲಿ ಮುಂಜಾನೆ ಶಿವನಿಗೆ ನಿರಂತರವಾಗಿ ವಿವಿಧ ಅಭಿಷೇಕ ಮಾಡಲಾಗುತ್ತದೆ. ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ರಾತ್ರಿ 11 ಗಂಟೆಯಿಂದ ಶಿವ ಪಾರ್ವತಿ ಕಲ್ಯಾಣೋತ್ಸವ ನಡೆದರೆ, ಗವಿ ಗಂಗಾಧರ ದೇವಾಲಯದಲ್ಲಿ ಚತುರ್ಯಾಮ ಪೂಜೆ ರಾತ್ರಿ 11:30, ಮತ್ತು ಬೆಳಗ್ಗೆ 4 ಗಂಟೆ ತನಕ ನಡೆಯಲಿದೆ. ಮತ್ತಿಕೆರೆಯಲ್ಲಿ 30 ಅಡಿ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಲ್ಲೇಶ್ವರಂನ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಶಿವಲಿಂಗಕ್ಕೆ ಭಕ್ತರೇ ಅಭಿಷೇಕ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇಷ್ಟಕ್ಕೂ ಶಿವರಾತ್ರಿ ಆಚರಣೆ ಹೇಗೆ ಮಾಡಬೇಕು, ಜಾಗರಣೆಯ ಮಹತ್ವವೇನು, ಶಿವರಾತ್ರಿ ಹಬ್ಬದಂದು ಯಾವೆಲ್ಲ ಪೂಜೆ ಪುನಸ್ಕಾರ ನೆರವೇರಲಿವೆ. ಸಿದ್ಧತೆಯ ಕುರಿತು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಾಶಿ ವಿಶ್ವೇಶ್ವರ ದೇವಸ್ಥಾನದ ಅರ್ಚಕರಾದ ವೇಣುಗೋಪಾಲ್ ಶಾಸ್ತ್ರಿ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಮೇಲೆ ಬೊಮ್ಮಾಯಿ ಪ್ರೀತಿ : ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಜಾರಿ