ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಮೊದಲ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಸಿಸಿಬಿ ಕಚೇರಿಗೆ ವಕೀಲರೊಂದಿಗೆ ಆಗಮಿಸಿದ್ದಾನೆ.
ಪ್ರಕರಣದ ಮೊದಲ ಆರೋಪಿಯಾಗಿದ್ದ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿಗಾಗಿ ಈ ಹಿಂದೆ ಸಿಸಿಬಿ ಪೊಲೀಸರು ಶೋಧ ನಡೆಸಿದ್ದರು. ಆದರೆ, ಚಿಪ್ಪಿ ಕಳೆದ 15 ದಿನಗಳ ಹಿಂದೆ ಕೋರ್ಟ್ನಿಂದ ನೋ ಕ್ವೋರ್ಸಿವ್ ಆರ್ಡರ್ (ಪೊಲೀಸರು ಬಂಧಿಸದಂತೆ) ಪಡೆದಿದ್ದ.
ಇದನ್ನು ಓದಿ: ಅಮಿತಾಬ್ ಬಚ್ಚನ್ ಧ್ವನಿಯಲ್ಲಿನ ಕೋವಿಡ್-19 ಕಾಲರ್ ಟ್ಯೂನ್ ತೆರೆವಿಗೆ ಪಿಐಎಲ್ ಸಲ್ಲಿಕೆ
ಇದಾದ ಬಳಿಕ ಎರಡು ದಿನಗಳ ಹಿಂದೆ ಸಿಸಿಬಿ ಕಚೇರಿಗೆ ಆಗಮಿಸಿದ್ದ. ಇನ್ನು ನಿನ್ನೆ ಸಂಜೆ 6:30ರ ಸಂದರ್ಭದಲ್ಲಿ ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಬಂದಿದ್ದು, ಈ ವೇಳೆ ತನಿಖಾಧಿಕಾರಿ ಇಲ್ಲದ ಕಾರಣ ವಾಪಸ್ ತೆರಳಿದ್ದಾನೆ. ಬಳಿಕ ಮತ್ತೆ ತನಿಖಾಧಿಕಾರಿ ಪುನೀತ್ ಅವರು ನೋಟಿಸ್ ಜಾರಿ ಮಾಡಿದ್ದು, ಇದೀಗ ವಕೀಲರ ಜೊತೆ ವಿಚಾರಣೆಗೆ ಹಾಜರಾಗಿದ್ದಾನೆ.