ETV Bharat / state

ಅಹಿಂದಾ ವೇಳೆ ಸಿದ್ದುಗೆ ಬೆಂಬಲ, ಈಗ ಬಿಎಸ್​​ವೈಗೆ ಮಠಾಧೀಶರಿಂದ ಬೆಂಬಲ: ಮುರುಘಾ ಶ್ರೀ ಸಮರ್ಥನೆ

ಅಹಿಂದಾ ವೇಳೆ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತವಾದಂತೆ ಈಗ ಎಲ್ಲ ಮಠಾಧೀಶರಿಂದ ಯಡಿಯೂರಪ್ಪಗೆ ಬೆಂಬಲ ವ್ಯಕ್ತಪಡಿಸಿದ ನಿಲುವನ್ನು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಸಮರ್ಥಿಸಿಕೊಂಡರು.

Shivamurthy Swamiji
ಮುರುಘಾಮಠದ ಶಿವಮೂರ್ತಿ ಶರಣರು
author img

By

Published : Jul 25, 2021, 4:47 PM IST

ಬೆಂಗಳೂರು: ಸಂಕಷ್ಟದಲ್ಲಿದ್ದವರಿಗೆ ಬೆಂಬಲ ನೀಡಬೇಕು. ಈ ಹಿಂದೆ ಸಿದ್ದರಾಮಯ್ಯ ಅಹಿಂದಾ ಸಂಘಟನೆ ಕಟ್ಟಿದಾಗ ಬೆಂಬಲ ಕೊಟ್ಟಿದ್ದೆ. ಈಗ ಯಡಿಯೂರಪ್ಪ ಸಂಕಷ್ಟದಲ್ಲಿದ್ದಾರೆ. ಅವರಿಗೂ ಬೆಂಬಲ ನೀಡುತ್ತೇನೆ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಸಮರ್ಥಿಸಿಕೊಂಡರು.

ಅರಮನೆ ಮೈದಾನದಲ್ಲಿ ಮಠಾಧೀಶರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾಮೀಜಿಗಳೆಲ್ಲರೂ ಜಾತಿವಾದಿಗಳು ಎಂಬ ಭಾವನೆ ತಾಳಬಾರದು. ಸಂವಿಧಾನದ ಪ್ರಕಾರ, ಪಕ್ಷಾತೀತ ಹಾಗೂ ಜಾತ್ಯಾತೀತ ನಮ್ಮ ನಿಲುವುಗಳು, ಮಠಾಧೀಶರು ಜಾತಿಯ ಒಳಗೆಯಿದ್ದು, ಜಾತಿಯನ್ನು ಮೀರಿ ಕೆಲಸ ಮಾಡುತ್ತೇವೆ ಎಂದರು.

ಬಿಎಸ್​​ವೈಗೆ ಮಠಾಧೀಶರಿಂದ ಬೆಂಬಲ: ಮುರುಘಾ ಶ್ರೀ ಸಮರ್ಥನೆ

7 ವರ್ಷಗಳ ಹಿಂದೆ ಅಹಿಂದಾ ಚಳವಳಿ ನಡೆಯಿತು. ಜಾತಿ ಬೇಧವನ್ನು ಮರೆತು ನಾನು ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದ್ದೆ. ಮಠಾಧೀಶರಿಗೆ ಅಭಿಮಾನಕ್ಕಿಂತ ಜಾತ್ಯಾತೀತ ಭಾವನೆ ಮುಖ್ಯ. ನಮಗೆ ಆ ರೀತಿ ಮಾತನಾಡಲು ಹಕ್ಕುಗಳಿವೆ. ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದ ನೀವು ಯಡಿಯೂರಪ್ಪ ಅವರಿಗೆ ಯಾಕೆ? ಮಾಡುತ್ತೀರಾ ಎಂಬ ಪ್ರಶ್ನೆ ಎದ್ದಿದೆ. ಅದು ನನ್ನ ಆದ್ಯ ಕರ್ತವ್ಯ. ಈಗ ಸಂಕಷ್ಟದಲ್ಲಿ ಇರುವ ಯಡಿಯೂರಪ್ಪ ಅವರಿಗೆ ಬೆಂಬಲಿಸಬೇಕು ಹಾಗಾಗಿಯೇ ಬೆಂಬಲ ಮಾಡುತ್ತಿದ್ದೇವೆ ಎಂದರು.

ಮುಖ್ಯಮಂತ್ರಿ ಪದವಿ ಸಾರ್ವಜನಿಕ ಆಸ್ತಿ:

75 ವರ್ಷ ತುಂಬಿದರೂ ಮೋದಿ, ಅಮಿತ್ ಶಾ ಎಲ್ಲಾ ರೀತಿಯ ಅವಕಾಶ ನೀಡಿದ್ದಾರೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಹಾಗಾಗಿ ನಾವು ಆ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅದರ ಜೊತೆ ಮುಂದೆ ಏನು? ಎಂದು ಪ್ರಶ್ನೆ ಮಾಡುತ್ತೇವೆ. ರಾಜಕಾರಣಿ, ಮುಖ್ಯಮಂತ್ರಿ ಪದವಿ ನಮ್ಮ ನಿಮ್ಮ ಆಸ್ತಿಯಲ್ಲ. ಅದು ಸಾರ್ವಜನಿಕ ಆಸ್ತಿ. ಯಡಿಯೂರಪ್ಪರಲ್ಲಿ ಶಕ್ತಿ ಇದೆ. ಅದರ ಮೂಲಕವೇ ಎಲ್ಲಾ ರೀತಿಯ ಸಮಸ್ಯೆಯಿಂದ ಪಾರಾದರು.

ಬಿಎಸ್​ವೈ ಅಭಿವೃದ್ಧಿ ಪರವಾದ ರಾಜಕಾರಣ ಮಾಡಿದರು. ಅಭಿವೃದ್ಧಿ ಪರವಾದ ರಾಜಕಾರಣ ‌ಮಾಡುವ ಸಂದರ್ಭದಲ್ಲಿ ಸಮಸ್ಯೆ ಬರುವುದು ಸಹಜ. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತಾರೆ. ನಾಯಕತ್ವದ ಬಿಕ್ಕಟ್ಟು ಶುರುವಾಗಿದೆ. ಮುಂದೆ ಯಾರು ನಾಯಕರಾಗ ಬೇಕು ಎಂಬ ವಿಚಾರದಲ್ಲಿ ಸ್ಪಷ್ಟತೆ ಕಂಡು ಬರುತ್ತಿಲ್ಲ. ಶಾಸಕರು ಅದನ್ನ ನಿರ್ಧಾರಿಸುತ್ತಾರೆ ಎಂದರು.

ಸಂತರ ಕರ್ತವ್ಯ ಸಂಕಷ್ಟದಲ್ಲಿ ಇರುವವರಿಗೆ ಧೈರ್ಯ ಹೇಳುವುದಾಗಿದೆ. ಮಠಗಳು ಮಾನವೀಯತೆಯನ್ನ ತೋರಿವೆ. ನೆರೆ ಸಂದರ್ಭದಲ್ಲಿ, ಕೊರೊನಾ ಸಂದರ್ಭದಲ್ಲಿ ಆಹಾರದ ಕಿಟ್​​ಗಳನ್ನ ನೀಡಿವೆ. ಮಠಗಳು ಎಂದರೆ ಸಾಂತ್ವನ ಕೇಂದ್ರಗಳು. ನಾವು ನೀವು ಎಲ್ಲಿ ಸೇರುತ್ತೇವೋ ಅಲ್ಲಿ ಅನುಭವ ಮಂಟಪ ಅನಾವರಣಗೊಳ್ಳುತ್ತದೆ. ಸೂಕ್ತ ಯುವಕರನ್ನ ಗುರುತಿಸಿ, ಶಿಕ್ಷಣ ದಿಕ್ಷೆಯನ್ನ ಕೊಟ್ಟಿರುವುದು ಮಠಗಳು ಎಂದು ಮಠಗಳ ಕೊಡುಗೆಯನ್ನು ಸ್ಮರಿಸಿದರು‌.

ಸಾಮಾಜಿಕ ಧಾರ್ಮಿಕ ಐಕ್ಯತೆ ತೋರಿಸಲು ಈ ಸಮಾವೇಶ ಆಯೋಜಿಸಲಾಗಿದೆ. ಇಂದು ರಾಜಕೀಯ ಅಸ್ಥಿರತೆ ಉಂಟಾಗಿದೆ. ನಾವು ಆದೇಶ ಮಾಡುವ, ಅನುಷ್ಠಾನಕ್ಕೆ ತರುವ ಸ್ಥಾನದಲ್ಲಿಲ್ಲ. ಅದನ್ನೆಲ್ಲ ಆಳುವವರು ಮಾಡಬೇಕಿದೆ. ಆದರೆ ನಮ್ಮ ಬೇಡಿಕೆಯನ್ನ ನಾವು ಮುಂದಿಡಬಹುದು. ಆದಷ್ಟು ಬೇಗ ರಾಜಕೀಯ ಅಸ್ಥಿರತೆ ಕಾಣಬೇಕು ಎಂದರು.

ಎಲ್ಲಾ ಸ್ವಾಮೀಜಿಗಳಲ್ಲಿ ನಾನು ಕೇಳುತ್ತೇನೆ. ಇದು ಒಂದು ದಿನದ ಸಮಾವೇಶ ಅಲ್ಲ. ಮುಂಬರುವ ದಿನಗಳಲ್ಲಿ ಅತ್ಯಂತ ಬಲಿಷ್ಠ ಸಂಘಟನೆ ಮಾಡಬೇಕು. ಇದು ತುಂಬಾ ಅನಿವಾರ್ಯವಾಗಿದೆ. ಸಾಮಾಜಿಕ, ಧಾರ್ಮಿಕ ಹಾಗು ರಾಜಕೀಯ ಸಮಸ್ಯೆ ಇರಬಹುದು ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಬೇಕು. ಬಂದಿರುವವರು ನಮ್ಮವರು, ಬಾರದೆ ಇರುವವರೂ ನಮ್ಮವರೇ ಎಂದು ಸೇರಿಸಿಕೊಳ್ಳಬೇಕು ಎಂದರು‌.

ಇದನ್ನೂ ಓದಿ: ನಿರಪರಾಧಿ ಮೇಲೆ ಕ್ರಮ ಸಲ್ಲದು: ಸಿಎಂ ಬಿಎಸ್​​ವೈಗೆ ಬೆಂಬಲ ಘೋಷಿಸಿದ ದಿಂಗಾಲೇಶ್ವರ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.