ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತದಾರರ ಲಿಸ್ಟ್ ನಲ್ಲಿ ಇಡೀ ಕುಟುಂಬದ ಹೆಸರುಗಳು ಮಾಯವಾಗಿದೆ. ಮಿಲ್ಲರ್ಸ್ ರೋಡ್ ನಿವಾಸಿಯಾದ ಅಬ್ದುಲ್ ರೆಹಮಾನ್ ಕುಟುಂಬದ ನಾಲ್ಕು ಮಂದಿಯ ಹೆಸರುಗಳು ಮತದಾರರ ಲಿಸ್ಟ್ನಿಂದ ಮಾಯವಾಗಿದೆ.
ಒಂದೂವರೆ ವರ್ಷದ ಹಿಂದೆ ಶಾಂತಿನಗರ ವಾರ್ಡ್ನಿಂದ ಮಿಲ್ಲರ್ಸ್ ರೋಡ್ ವಾರ್ಡ್ಗೆ ಅಬ್ದುಲ್ ರೆಹಮಾನ್ ಕುಟುಂಬ ತಮ್ಮ ಮತದಾನದ ಲಿಸ್ಟ್ ಅನ್ನು ಟ್ರಾನ್ಸ್ಫರ್ ಮಾಡಿಸಿಕೊಂಡಿತ್ತು. ಆದರೆ ಈಗ ಮತದಾರರ ಲಿಸ್ಟ್ ನಲ್ಲಿ ಅಬ್ದುಲ್ ರೆಹಮಾನ್ ಕುಟುಂಬದ ಹೆಸರೇ ನಾಪತ್ತೆಯಾಗಿದೆ.
ಶಿವಾಜಿನಗರದ ಮತಗಟ್ಟೆ ಸಂಖ್ಯೆ 35ಕ್ಕೆ ಮತದಾನ ಮಾಡಲು ಬಂದ ಅಬ್ದುಲ್ ರೆಹಮಾನ್ ಕುಟುಂಬ, ಮತದಾನಕ್ಕೆ ಅವಕಾಶ ಸಿಗದೇ ನಿರಾಸೆಯಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.